Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ರುವಾಂಡಾ ನಡುವೆ ವಾಯು ಸೇವೆಗಳ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ರುವಾಂಡಾ ನಡುವೆ ವಾಯು ಸೇವೆಗಳ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಭಾರತ ಮತ್ತು ರುವಾಂಡಾ ನಡುವೆ ಹೆಚ್ಚಿನ ವಾಣಿಜ್ಯ, ಹೂಡಿಕೆ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಉತ್ತೇಜನ ನೀಡುವ ಸಾಮರ್ಥ್ಯವನ್ನು ಈ ಒಪ್ಪಂದ ಹೊಂದಿದ್ದು, ನಾಗರಿಕ ವಿಮಾನ ಯಾನ ವಲಯದ ಅಭಿವೃದ್ಧಿಯೊಂದಿಗೆ ಇದು ಆರಂಭವಾಗುತ್ತದೆ. ಇದು ಹೆಚ್ಚಿನ ಸುರಕ್ಷತೆ ಮತ್ತು ಭದ್ರತೆಯ ಖಾತ್ರಿಯೊಂದಿಗೆ ಎರಡೂ ರಾಷ್ಟ್ರಗಳ ವಿಮಾನಯಾನ ಸಂಸ್ಥೆಗಳಿಗೆ ವಾಣಿಜ್ಯ ಅವಕಾಶವನ್ನು ಒದಗಿಸುವುದಷ್ಟೇ ಅಲ್ಲದೆ ಹೆಚ್ಚಿನ ಮತ್ತು ತಡೆ ರಹಿತವಾದ ಸಂಪರ್ಕದ ಪರಿಸರ ನಿರ್ಮಾಣದ ಅವಕಾಶವನ್ನೂ ಒದಗಿಸುತ್ತದೆ.

***