ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನೌಕಾ ಸಾರಿಗೆ ಕುರಿತ ಸಾಂಸ್ಥಿಕ ಸಹಕಾರಕ್ಕಾಗಿ ಭಾರತ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ತನ್ನ ಅನುಮೋದನೆ ನೀಡಿದೆ.
ಉದ್ದೇಶಿತ ತಿಳಿವಳಿಕೆ ಒಪ್ಪಂದವು ನೌಕಾ ಸಾರಿಗೆಯನ್ನು ಸರಾಗಗೊಳಿಸಲು ಮತ್ತು ಉತ್ತೇಜಿಸಲು, ಕಸ್ಟಮ್ಸ್ ಮತ್ತು ಬಂದರುಗಳಲ್ಲಿ ಗಮನಿಸಿದಂತೆ ಎಲ್ಲಿ ಸಾಧ್ಯವೋ ಅಲ್ಲಿ ಇತರ ಔಪಚಾರಿಕತೆಗಳ ಸರಳೀಕರಿಸಲು ದಾರಿ ಮಾಡಿಕೊಡುತ್ತದೆ ಮತ್ತು ತ್ಯಾಜ್ಯ ವಿಲೇವಾರಿಗೆ ಹಾಲಿ ಇರುವ ಸ್ಥಾಪನೆಗಳ ಬಳಕೆಗೆ ಅವಕಾಶ ಕಲ್ಪಿಸುತ್ತದೆ.
ಸುಸ್ಥಿರ ವಾಣಿಜ್ಯ ಚಟುವಟಿಕೆಗಳಿಗಾಗಿ ಎರಡೂ ರಾಷ್ಟ್ರಗಳಲ್ಲಿನ ಹಡಗು ಕಂಪನಿಗಳಿಗೆ ದ್ವಿಪಕ್ಷೀಯ ಮತ್ತು ಬಹು ಪಕ್ಷೀಯ ಒಪ್ಪಂದ ಮಾಡಿಕೊಳ್ಳಲು ಈ ತಿಳಿವಳಿಕೆ ಒಪ್ಪಂದ ಅವಕಾಶ ಕಲ್ಪಿಸುತ್ತದೆ.
AKT/VBA/SH