ಪಿಎಂಇಂಡಿಯಾ
ಭಾರತ-ಯುಕೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವು 2026ರ ಜುಲೈ 15 ರಿಂದ ಜಾರಿಗೆ ಬರಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಒಪ್ಪಂದವು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ.
ಈ ಒಪ್ಪಂದವು ಭಾರತೀಯ ರೈತರು, ಕಾರ್ಮಿಕರು, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆ (ಎಂ.ಎಸ್.ಎಂ.ಇ) ಗಳು, ನವೋದ್ಯಮಗಳು ಮತ್ತು ನವೀನ ಆವಿಷ್ಕಾರಕರಿಗೆ ಹಲವಾರು ಅವಕಾಶಗಳನ್ನು ತೆರೆಯಲಿದೆ ಹಾಗೂ ವಿಕಸಿತ ಭಾರತ 2047ರ ಸಾಕಾರಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡಲಿದೆ ಎಂದು ಶ್ರೀ ಮೋದಿ ಅವರು ತಿಳಿಸಿದ್ದಾರೆ.
ಜಿ-7 ಶೃಂಗಸಭೆಗಾಗಿ ಎವಿಯಾನ್ನಲ್ಲಿರುವ ತಾವು ಹಾಗೂ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರು, ಭಾರತ-ಯುಕೆ ಆರ್ಥಿಕ ಸಂಬಂಧಗಳಿಗೆ ಮಹತ್ವದ ಆವೇಗ ಸೇರ್ಪಡೆಯಾಗುತ್ತಿರುವುದಕ್ಕೆ ಅತೀವ ಸಂತಸಗೊಂಡಿರುವುದಾಗಿ ಪ್ರಧಾನಮಂತ್ರಿ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು ಎಕ್ಸ್ (X) ನಲ್ಲಿ ಹೀಗೆ ಬರೆದಿದ್ದಾರೆ:
“ಭಾರತ-ಯುಕೆ ಬಾಂಧವ್ಯಕ್ಕೆ ಒಂದು ಐತಿಹಾಸಿಕ ಮೈಲಿಗಲ್ಲು.
ಭಾರತ-ಯುಕೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವು 2026ರ ಜುಲೈ 15 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ.
ಈ ಒಪ್ಪಂದವು ನಮ್ಮ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ.
ಇದು ಭಾರತದ ರೈತರು, ಕಾರ್ಮಿಕರು, ಎಂ.ಎಸ್.ಎಂ.ಇ.ಗಳು, ಸ್ಟಾರ್ಟ್ಅಪ್ಗಳು ಮತ್ತು ನವೀನ ಆವಿಷ್ಕಾರಕರಿಗೆ ಹಲವಾರು ಅವಕಾಶಗಳನ್ನು ತೆರೆಯಲಿದೆ ಹಾಗೂ ವಿಕಸಿತ ಭಾರತ 2047ರ ಸಾಕಾರಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡಲಿದೆ.
ಜಿ-7 ಶೃಂಗಸಭೆಗಾಗಿ ಎವಿಯಾನ್ನಲ್ಲಿರುವ ಪ್ರಧಾನಿ ಸ್ಟಾರ್ಮರ್ ಅವರು ಮತ್ತು ನಾನು, ನಮ್ಮ ಆರ್ಥಿಕ ಸಂಬಂಧಗಳಿಗೆ ಸೇರ್ಪಡೆಯಾಗುತ್ತಿರುವ ಮಹತ್ವದ ಆವೇಗದಿಂದ ಸಹಜವಾಗಿಯೇ ಅತೀವ ಸಂತುಷ್ಟರಾಗಿದ್ದೇವೆ. @Keir_Starmer”
****
A historic milestone for India-UK relations.
— Narendra Modi (@narendramodi) June 17, 2026
Delighted to note that the India-UK Comprehensive Economic and Trade Agreement will enter into force on 15th July 2026.
This agreement will significantly boost our bilateral trade and investment.
It will also unlock numerous… pic.twitter.com/I0bMCjdtg4