ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಭಾರತ ಸಂಚಾರ ನಿಗಮ ನಿಯಮಿತದ ಮೊಬೈಲ್ ಗೋಪುರಗಳ ಸ್ವತ್ತುಗಳನ್ನು ಬಿಎಸ್ಎನ್ಎಲ್ ಒಡೆತನದ ಪ್ರತ್ಯೇಕ ಕಂಪೆನಿಯಾಗಿ ಮಾಡಲು ತನ್ನ ಅನುಮೋದನೆ ನೀಡಿದೆ.
ಈ ಅನುಮೋದನೆಯು ಬಿ.ಎಸ್.ಎನ್.ಎಲ್.ಗೆ. ತನ್ನ ದೂರಸಂಪರ್ಕ ಗೋಪುರಗಳ ಮೂಲಸೌಕರ್ಯವನ್ನು ಪ್ರತ್ಯೇಕ ಅಧೀನ ಕಂಪನಿಯಾಗಿ ರೂಪಿಸಲು ಅವಕಾಶ ಮಾಡಿಕೊಡುತ್ತದೆ.
ದೇಶದಲ್ಲಿ ಸುಮಾರು 4,42,000 ಮೊಬೈಲ್ ಗೋಪುರಗಳಿದ್ದು, ಈ ಪೈಕಿ 66,000 ಮೊಬೈಲೇ ಗೋಪುರಗಳು ಬಿ.ಎಸ್.ಎನ್.ಎಲ್.ಗೆ ಸೇರಿವೆ. ಬಿಎಸ್ಎನ್ಎಲ್ ನ ಒಂದು ಸ್ವತಂತ್ರ, ಸಮರ್ಪಿತ ಗೋಪುರಗಳ ಕಂಪೆನಿಯ ಕೇಂದ್ರೀಕೃತ ನಿಲುವು, ಬಾಹ್ಯ ಬಾಡಿಗೆದಾರರ ಹೆಚ್ಚಳಕ್ಕೆ ಇಂಬು ನೀಡುತ್ತದೆ ಮತ್ತು ಹೊಸ ಕಂಪನಿಗೆ ಹೆಚ್ಚಿನ ಆದಾಯ ತರುತ್ತದೆ.
ಹಿನ್ನೆಲೆ:
ದೂರಸಂಪರ್ಕ ಗೋಪುರ ಕೈಗಾರಿಕೆಯು ಸ್ವತಂತ್ರ ವಾಣಿಜ್ಯವಾಗಿ ಹೊರಹೊಮ್ಮಿದ್ದು ಇದರ ಸಾಮರ್ಥ್ಯವನ್ನು ಮೂಲಸೌಕರ್ಯ ಹಂಚಿಕೆಗೆ ಬಳಸಿಕೊಳ್ಳಬಹುದಾಗಿದೆ. ಆರ್ಥಿಕತೆಯನ್ನು ಹೆಚ್ಚಿಸಲು ಮತ್ತು ಮೊಬೈಲ್ ಸೇವೆಗಳನ್ನು ಒದಗಿಸಲು ಬಂಡವಾಳ ಹೂಡಿಕೆಯ ವೆಚ್ಚವನ್ನು ಕಡಿಮೆ ಮಾಡುವ ಅಗತ್ಯದಿಂದಾಗಿ ಈ ವ್ಯವಹಾರ ಮಾದರಿ ಹುಟ್ಟಿಕೊಂಡಿದೆ. ದೂರಸಂಪರ್ಕ ಇಲಾಖೆ (ಡಿಓಟಿ) ನೀತಿಯು ಸ್ಥಿರವಾದ ಮೂಲಸೌಕರ್ಯವನ್ನು ಅಂದರೆ ಗೋಪುರಗಳು, ಡೀಸೆಲ್ ಜನರೇಟರ್ ಸೆಟ್, ಬ್ಯಾಟರಿ ಘಟಕ, ವಿದ್ಯುತ್ ಇಂಟರ್ ಫೇಸ್ ಘಟಕ, ಹವಾನಿಯಂತ್ರಕಗಳು ಇತ್ಯಾದಿಯನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತದೆ. ಇದು ದೂರಸಂಪರ್ಕ ಮೂಲಸೌಕರ್ಯ ಕೈಗಾರಿಕೆಯ ಪ್ರಗತಿಗೆ ಅವಕಾಶ ನೀಡುತ್ತದೆ. ಗೋಪುರಗಳ ಮೂಲಸೌಕರ್ಯ ಕಂಪನಿ ಅಗತ್ಯವಾಗಿ ಸ್ಥಿರವಾದ ಮೂಲಸೌಕರ್ಯ ಆಸ್ತಿಯನ್ನು ಹೊಂದಿರಬೇಕು ಮತ್ತು ಹೂಡಿಕೆಯ ಪುನರಾವರ್ತನೆ ತಪ್ಪಿಸಲು ಮತ್ತು ಕಾರ್ಯಾಚರಣೆ ಮತ್ತು ನಿರ್ವಹಣೆ (ಓ ಮತ್ತು ಎಂ) ವೆಚ್ಚ ತಗ್ಗಿಸಲು ಮತ್ತು ಆ ಮೂಲಕ ಲಾಭವನ್ನು ಹೆಚ್ಚಿಸಲು ಅದನ್ನು ದೂರಸಂಪರ್ಕ ಸೇವೆ ಒದಗಿಸುವವರಿಗೆ ಬಾಡಿಗೆ ನೀಡುತ್ತಿರಬೇಕು.
ಇದರ ಜೊತೆಗೆ ಬಿ.ಎಸ್.ಎನ್.ಎಲ್. ಮತ್ತು ಎಂ.ಟಿ.ಎನ್.ಎಲ್.ನಲ್ಲಿನ ಕ್ಯಾಪ್ಟ್ಯೂ ಮಾದರಿಯಲ್ಲಿ ಸೇವಾ ಪೂರೈಕೆದಾರರು ತಮ್ಮದೇ ಸ್ಥಿರ ಮೂಲಸೌಕರ್ಯವನ್ನು ಹೊಂದಿರುತ್ತಾರೆ, ಅಲ್ಲಿ ದೂರಸಂಪರ್ಕ ಗೋಪುರ ಕೈಗಾರಿಕೆಯಲ್ಲಿ ಮೂರು ವಿವಿಧ ವಾಣಿಜ್ಯ ಮಾದರಿಗಳಿವೆ: – ಗೋಪುರದ ಆಸ್ತಿಪಾಸ್ತಿಗಳ ಖಾತೆಗಳ ಸೇವಾ ಪೂರೈಕೆದಾರರನ್ನು ಅಂಗಸಂಸ್ಥೆಗಳನ್ನಾಗಿ ನೇಮಿಸಿಕೊಳ್ಳುವ ಕಂಪನಿಗಳು, ಸ್ವತಂತ್ರವಾಗಿ ಸ್ಥಾಪಿಸಲಾದ ಕಂಪನಿಗಳು ಸೇವಾ ಪೂರೈಕೆದಾರರಿಂದ ಜಂಟಿಯಾಗಿ ಮತ್ತು ನಿರ್ದಿಷ್ಟ ಸೇವಾ ಪೂರೈಕೆದಾರರಿಂದ ಪ್ರಚುರಗೊಂಡ ಕಂಪೆನಿಗಳು. ಆದರೆ ಗೋಪುರದ ಕಂಪೆನಿಗಾಗಿ ಆಂಕರ್ ಬಾಡಿಗೆದಾರನಾಗಿ ಪ್ರವರ್ತಕರೊಂದಿಗೆ ಸ್ವತಂತ್ರ ಘಟಕಗಳಾಗಿ ಸ್ಥಾಪಿಸಲ್ಪಟ್ಟವುಗಳಾಗಿವೆ.