ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 19, 2018ರಂದು ಮಹಾರಾಷ್ಟ್ರದ ಶಿರ್ಡಿಗೆ ಭೇಟಿ ನೀಡಲಿದ್ದಾರೆ.
ಶಿರ್ಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟಿನ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆಯ ಸಂಕೇತವಾಗಿ ಪ್ರಧಾನಮಂತ್ರಿ ಅವರು ಫಲಕವನ್ನು ಅನಾವರಣಗೊಳಿಸಲಿದ್ದಾರೆ. ಶ್ರೀ ಸಾಯಿಬಾಬಾ ಸಮಾಧಿಯ ಶತಮಾನೋತ್ಸವದ ಸ್ಮರಣಾರ್ಥ ಪ್ರಧಾನಮಂತ್ರಿ ಅವರು ರಜತ ನಾಣ್ಯ ಬಿಡುಗಡೆ ಮಾಡಲಿದ್ದಾರೆ.
ಸಾರ್ವಜನಿಕ ಸಮಾರಂಭದಲ್ಲಿ, ಪ್ರಧಾನಮಂತ್ರಿ ಆವಾಸ ಯೋಜನೆ – ಗ್ರಾಮೀಣ (ಪಿ.ಎಮ್.ಎ.ವೈ.-ಜಿ) ಇದರ ಇ-ಗೃಹಪ್ರವೇಶ ನಿಮಿತ್ತ ಮಹಾರಾಷ್ಟ್ರದ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೀಲಿಕೈಗಳನ್ನು ವಿತರಣೆ ಮಾಡಲಿದ್ದಾರೆ. ಅವರು ಸಾರ್ವಜನಿಕರನ್ನು ಉದ್ಧೇಶಿಸಿ ಭಾಷಣವನ್ನೂ ಮಾಡಲಿದ್ದಾರೆ.
ಶ್ರೀ ಸಾಯಿಬಾಬಾ ಸಮಾಧಿ ದೇವಸ್ಥಾನ ಸಮುಚ್ಛಯಕ್ಕೂ ಪ್ರಧಾನಮಂತ್ರಿ ಅವರು ಭೇಟಿ ನೀಡಲಿದ್ದಾರೆ.