ಪಿಎಂಇಂಡಿಯಾ
ಗ್ಲಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳೆಯರ 70 ಕೆ.ಜಿ. ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿರುವ ಅರುಂಧತಿ ಚೌಧರಿ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಅರುಂಧತಿ ಚೌಧರಿ ತಮ್ಮ ಅದ್ಭುತ ಗೆಲುವಿನ ಮೂಲಕ ಇತಿಹಾಸ ನಿರ್ಮಿಸಿದ್ದಾರೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದ್ದಾರೆ. ಅಲ್ಲದೆ, ಅವರ ತಾಂತ್ರಿಕ ಶ್ರೇಷ್ಠತೆ ಮತ್ತು ಅಚಲ ಆತ್ಮವಿಶ್ವಾಸವನ್ನು ಶ್ಲಾಘಿಸಿದ್ದಾರೆ.
ಮುಂದಿನ ವರ್ಷಗಳಲ್ಲಿಯೂ ಅವರು ಇನ್ನಷ್ಟು ಯಶಸ್ಸುಗಳನ್ನು ಸಾಧಿಸಲಿ ಎಂದು ಶ್ರೀ ಮೋದಿ ಶುಭ ಹಾರೈಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿಗಳು ಹೀಗೆ ಬರೆದಿದ್ದಾರೆ;
ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳೆಯರ 70 ಕೆ.ಜಿ. ಬಾಕ್ಸಿಂಗ್ ಸ್ಪರ್ಧೆಯಲ್ಲಿ ಅರುಂಧತಿ ಚೌಧರಿ ಅದ್ಭುತ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ! ಅವರು ತಾಂತ್ರಿಕ ಶ್ರೇಷ್ಠತೆ ಮತ್ತು ಅಚಲ ಆತ್ಮವಿಶ್ವಾಸವನ್ನು ಪ್ರದರ್ಶಿಸಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಮುಂದಿನ ವರ್ಷಗಳಲ್ಲಿಯೂ ಅವರು ಇನ್ನಷ್ಟು ಯಶಸ್ಸುಗಳನ್ನು ಸಾಧಿಸಲಿ ಎಂದು ಹಾರೈಸುತ್ತೇನೆ.
#CWG2026”
*****
Arundhati Choudhary scripts history with a brilliant Gold in the Women’s 70 kg Boxing event at the Glasgow Games! She displayed technical excellence and unwavering confidence. Congratulations to her. Wishing her many more successes in the years ahead.#CWG2026
— Narendra Modi (@narendramodi) August 1, 2026