Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾದಕ ದ್ರವ್ಯ ಬೇಡಿಕೆ ಕಡಿತ ಮತ್ತು ನಶೀಲಿ ವಸ್ತು ಕಳ್ಳಸಾಗಣೆ ತಡೆಗೆ ಭಾರತ ಮತ್ತು ಮೊಜಾಂಬಿಕ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಭಾರತ ಮತ್ತು ಮೊಜಾಂಬಿಕ್ ನಡುವೆ ಮಾದಕದ್ರವ್ಯ ಬೇಡಿಕೆ ಕಡಿತ ಮತ್ತು ನಶೀಲಿ ವಸ್ತುಗಳು, ಮನಸ್ಸಿನ ಮೇಲೆ ಪರಿಣಾಮ ಬೀರುವ ವಸ್ತುಗಳು ಮತ್ತು ಪರಿವರ್ತನೀಯ ಪದಾರ್ಥಗಳ ಅಕ್ರಮ ಸಾಗಣೆ ತಡೆ ಸಂಬಂಧ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ನಶೀಲಿ ವಸ್ತುಗಳು, ಮನಸ್ಸಿನ ಮೇಲೆ ಪರಿಣಾಮ ಬೀರುವ ವಸ್ತುಗಳು ಮತ್ತು ಅವುಗಳ ಪರಿವರ್ತನೀಯ ಪದಾರ್ಥಗಳ ಅಕ್ರಮ ಸಾಗಣೆ ತಡೆಗಾಗಿ ಮಾಹಿತಿ ವಿನಿಮಯ, ಪರಿಣತಿ ಮತ್ತು ಸಾಮರ್ಥ್ಯ ವರ್ಧನೆಯ ಮೂಲಕ ಎರಡೂ ದೇಶಗಳ ನಡುವೆ ಪರಸ್ಪರ ಸಹಕಾರ ಹೆಚ್ಚಳದ ಉದ್ದೇಶವನ್ನು ಈ ತಿಳಿವಳಿಕೆ ಒಪ್ಪಂದ ಒಳಗೊಂಡಿದೆ.