ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ವಿಯೆಟ್ನಾಂ ನಡುವೆ ಐ.ಟಿ. ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಸಮ್ಮತಿ ನೀಡಿದೆ.
ಪ್ರತಿ ರಾಷ್ಟ್ರದ ಕಾನೂನು ಮತ್ತು ನಿಯಮಗಳಿಗೆ ಅನುಸಾರವಾಗಿ ಐ.ಟಿ. ಕ್ಷೇತ್ರದಲ್ಲಿ ಪರಸ್ಪರರ ಹಿತ ಮತ್ತು ಸಮಾನತೆಯ ಆಧಾರದಲ್ಲಿ ಸುಸ್ಥಿರ ಮತ್ತು ದೀರ್ಘ ಕಾಲೀನವಾದ ಸಹಕಾರವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಈ ಎಂ.ಓ.ಯು. ಹೊಂದಿದೆ. ಈ ತಿಳಿವಳಿಕೆ ಒಪ್ಪಂದದ ಜಾರಿಯಿಂದ ಐ.ಟಿ. ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕ್ಷೇತ್ರದಲ್ಲಿ ಸಾಂಸ್ಥಿಕ ಮತ್ತು ಸಾಮರ್ಥ್ಯ ನಿರ್ಮಾಣದೊಂದಿಗೆ ಐ.ಟಿ. ವಲಯದಲ್ಲಿ ಪರಸ್ಪರರಿಗೆ ಗಣನೀಯ ಪ್ರಮಾಣದ ಲಾಭವಾಗಲಿದೆ.
ಈ ತಿಳಿವಳಿಕೆ ಒಪ್ಪಂದವು ಐದು ವರ್ಷಗಳ ಕಾಲ ಜಾರಿಯಲ್ಲಿರುತ್ತದೆ ಮತ್ತು ಭಾರತ ಹಾಗೂ ವಿಯಟ್ನಾಂನ ಪರಸ್ಪರರ ಲಿಖಿತ ಸಮ್ಮತಿಯ ಮೂಲಕ ನವೀಕರಿಸಬಹುದಾಗಿದೆ. ಎರಡೂ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಐಟಿ ಜಂಟಿ ಕಾರ್ಯ ಗುಂಪು ಸ್ಥಾಪಿಸಿ ಇದನ್ನು ಜಾರಿಗೊಳಿಸಲಾಗುತ್ತದೆ.
akt/vba/sh