Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಕ್ಷೇತ್ರದಲ್ಲಿ ಭಾರತ ಮತ್ತು ಪ್ಯಾಲಿಸ್ತೀನ್ ನಡುವಿನ ಸಹಕಾರದ ತಿಳಿವಳಿಕೆ ಒಪ್ಪಂದದ ಬಗ್ಗೆ ಸಂಪುಟಕ್ಕೆ ವಿವರಣೆ


ಪ್ರಧಾನಮಂತ್ರಿಶ್ರೀ. ನರೇಂದ್ರ ಮೋದಿ ಅವರಅಧ್ಯಕ್ಷತೆಯಲ್ಲಿನಡೆದಕೇಂದ್ರಸಚಿವಸಂಪುಟಸಭೆಗೆ ಭಾರತ ಮತ್ತು ಪ್ಯಾಲಿಸ್ತೀನ್ ನಡುವೆ ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ (ಐಟಿ ಮತ್ತು ಇ) ಕ್ಷೇತ್ರದಲ್ಲಿನ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರಿಸಲಾಯಿತು.

ಈ ತಿಳಿವಳಿಕೆ ಒಪ್ಪಂದವು, ಇ ಆಡಳಿತ, ಎಂ- ಆಡಳಿತ, ಇ-ಸಾರ್ವಜನಿಕ ಸೇವಾ ವಿತರಣೆ, ಸೈಬರ್ ಭದ್ರತೆ, ತಂತ್ರಾಂಶ ತಂತ್ರಜ್ಞಾನ ಪಾರ್ಕ್, ನವೋದ್ಯಮಗಳ ಪರಿಸರ ವ್ಯವಸ್ಥೆ ಇತ್ಯಾದಿ ಕ್ಷೇತ್ರಗಳಲ್ಲಿ ಆಪ್ತ ಸಹಕಾರವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.

ಈ ತಿಳಿವಳಿಕೆ ಒಪ್ಪಂದವು ಪಕ್ಷಕಾರರು ಅಂಕಿತ ಹಾಕಿದ ದಿನದಿಂದ ಜಾರಿಗೆ ಬರುತ್ತದೆ ಮತ್ತು ಐದು ವರ್ಷಗಳ ವರೆಗೆ ಚಾಲ್ತಿಯಲ್ಲಿರುತ್ತದೆ. ಈ ತಿಳಿವಳಿಕೆ ಒಪ್ಪಂದವನ್ನು ಎರಡೂ ಪಕ್ಷಕಾರರ ಪ್ರತಿನಿಧಿಗಳನ್ನು ಒಳಗೊಂಡ ಐಟಿ ಮತ್ತು ಇ ಕುರಿತ ಒಂದು ಜಂಟಿ ಕಾರ್ಯಪಡೆ ರಚಿಸುವ ಮೂಲಕ ಅನುಷ್ಠಾನಗೊಳಿಸಲಾಗುವುದು. ಬಿ2ಬಿ ಮತ್ತು ಜಿ2ಜಿ ಎರಡೂ ಸೇರಿದಂತೆ ಐಸಿಟಿ ಡೊಮೈನ್ ನಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲಾಗುವುದು. ಇದು ಬಿ2ಬಿ ಸಹಯೋಗವನ್ನು ಸುಧಾರಣೆ ಮಾಡಲು, ಆ ಮೂಲಕ ಉದ್ಯೋಗಾವಕಾಶಗಳಿಗೆ ಇಂಬು ನೀಡಲಿದೆ.

ಹಿನ್ನೆಲೆ:

ಅಂತಾರಾಷ್ಟ್ರೀಯ ಮತ್ತು ದ್ವಿಪಕ್ಷೀಯ ಮಟ್ಟಗಳಲ್ಲಿ ಪ್ಯಾಲೇಸ್ಟಿನಿನ ಕಾರಣಕ್ಕಾಗಿ ಭಾರತವು ಪ್ರಬಲ ರಾಜಕೀಯ ಬೆಂಬಲವನ್ನು ಹೊಂದಿದೆ. ಭಾರತವು ವಸ್ತುಗಳು ಮತ್ತು ತಾಂತ್ರಿಕ ನೆರವನ್ನು ಪ್ಯಾಲಿಸ್ತೀನ್ ಜನತೆಗೆ ಕೊಡುಗೆಯಾಗಿ ನೀಡುತ್ತಿದೆ. ಐಟಿ ಮತ್ತು ಇ ಕ್ಷೇತ್ರದಲ್ಲಿನ ಸಹಕಾರದ ತಿಳಿವಳಿಕೆ ಒಪ್ಪಂದವನ್ನು 2016ರ ನವೆಂಬರ್ ನಲ್ಲಿ ಜೆಸಿಎಂನ ಪ್ರಥಮ ಅಧಿವೇಶನದ ವೇಳೆ ಆರಂಭಿಸಲಾಗಿತ್ತು. ಇದಾದ ಬಳಿಕ, ಎಂ.ಓ.ಯು. ಕರಡು ಕುರಿತಂತೆ ಹಲವು ಮಾತುಕತೆ ನಡೆದಿದ್ದವು. ಇದನ್ನು 2017ರ ಮೇ ತಿಂಗಳಲ್ಲಿ ಪ್ಯಾಲಿಸ್ತೀನ್ ನ ವಿವಿಐಪಿಗಳ ಭೇಟಿಯ ವೇಳೆ ಆಖೈರುಗೊಳಿಸಿ ಅಂಕಿತ ಹಾಕಲಾಗಿತ್ತು.

*****

AKT/VBA/