Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ಲೋವಾಕ್ ದೇಶದ ವ್ಯವಹಾರ ಕ್ಷೇತ್ರದ ದಿಗ್ಗಜರೊಂದಿಗೆ ಪ್ರಧಾನಮಂತ್ರಿ ಅವರ ಸಂವಾದ

ಸ್ಲೋವಾಕ್ ದೇಶದ ವ್ಯವಹಾರ ಕ್ಷೇತ್ರದ ದಿಗ್ಗಜರೊಂದಿಗೆ ಪ್ರಧಾನಮಂತ್ರಿ ಅವರ ಸಂವಾದ


ಸ್ಲೋವಾಕಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ರಾಬರ್ಟ್ ಫಿಕೊ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು   ರೈಲ್ವೆ, ರಕ್ಷಣೆ, ವಾಹನಗಳು, ಇಂಧನ, ಐಟಿ, ಆರೋಗ್ಯ ರಕ್ಷಣೆ ಸೇರಿದಂತೆ ಸ್ಲೋವಾಕಿಯಾದ ಪ್ರಮುಖ ವ್ಯವಹಾರ ಕ್ಷೇತ್ರದ ಮತ್ತು ಕೈಗಾರಿಕಾ ನಾಯಕರೊಂದಿಗೆ ಜಂಟಿಯಾಗಿ ಸಂವಾದ ನಡೆಸಿದರು.

ಭಾರತ ಮತ್ತು ಸ್ಲೋವಾಕಿಯಾ ನಡುವೆ ವಿಸ್ತರಿಸುತ್ತಿರುವ ವ್ಯವಹಾರದಿಂದ ಉತ್ತಮ ಫಲಿತಾಂಶ ಕಂಡು ಬಂದ ನಿಟ್ಟಿನಲ್ಲಿ ನಡೆದ ವ್ಯವಹಾರದ ಸಭೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ವ್ಯಾಪಾರ ಮಾಡುವ ಸುಲಭತೆಯ ವ್ಯವಸ್ಥೆಯನ್ನು ಉತ್ತೇಜಿಸಲು ಮತ್ತು ಪಾರದರ್ಶಕ, ಸ್ಥಿರ ಮತ್ತು ಹೂಡಿಕೆದಾರ ಸ್ನೇಹಿ ಆರ್ಥಿಕ ವಾತಾವರಣವನ್ನು ಬೆಳೆಸಲು ಇತ್ತೀಚಿನ ವರ್ಷಗಳಲ್ಲಿ ಭಾರತ ಪರಿಚಯಿಸಿದ ಪ್ರಮುಖ ಸುಧಾರಣೆಗಳು ಮತ್ತು ನೀತಿ ಉಪಕ್ರಮಗಳನ್ನು ಅವರು ಉಲ್ಲೇಖಿಸಿದರು. ಭಾರತದಲ್ಲಿ ಬೆಳೆಯುತ್ತಿರುವ ಅವಕಾಶಗಳ ಲಾಭವನ್ನು ಪಡೆದುಕೊಳ್ಳಲು ಅವರು ಸ್ಲೋವಾಕ್ ಕಂಪನಿಗಳನ್ನು, ವಿಶೇಷವಾಗಿ ಮೂಲಸೌಕರ್ಯ, ರಕ್ಷಣೆ, ನವೀಕರಿಸಬಹುದಾದ ಇಂಧನ, ಡಿಜಿಟಲ್ ನಾವೀನ್ಯತೆ, ಸೆಮಿಕಂಡಕ್ಟರ್‌ ಗಳು, ಎಐ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರಗಳಲ್ಲಿ ಭಾರತದಲ್ಲಿ ತೊಡಗಿಸಿಕೊಳ್ಳಲು ಆಹ್ವಾನಿಸಿದರು 

ವಿಕಸಿತ ಭಾರತ ಕಡೆಗೆ ಭಾರತದ ಸುಧಾರಣೆಗಳನ್ನು ಕೈಗಾರಿಕಾ ನಾಯಕರು ಸ್ವಾಗತಿಸಿದರು ಮತ್ತು ಭಾರತದ ಆರ್ಥಿಕ ಪಥದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ವರ್ಧಿತ ಹೂಡಿಕೆಗಳು, ತಂತ್ರಜ್ಞಾನ ಪಾಲುದಾರಿಕೆಗಳು ಮತ್ತು ಭಾರತೀಯ ಉದ್ಯಮಗಳೊಂದಿಗೆ ಜಂಟಿ ಉದ್ಯಮಗಳ ಮೂಲಕ ಭಾರತದಲ್ಲಿ ತಮ್ಮ ಹೆಜ್ಜೆಗುರುತನ್ನು ಬಲಪಡಿಸುವ ಆಸಕ್ತಿಯನ್ನು ಅವರು ವ್ಯಕ್ತಪಡಿಸಿದರು.  ಭಾರತ-ಯುರೋಪ್ ಒಕ್ಕೂಟದ ಎಫ್.ಟಿ.ಎ.ಯನ್ನು ಅವರು ಸ್ವಾಗತಿಸಿದರು, ಇದರ ಅನುಷ್ಠಾನವು ಅವರಿಗೆ ಹೊಸ ವ್ಯಾಪಾರ ಅವಕಾಶಗಳನ್ನು ತೆರೆಯುತ್ತದೆ ಎಂದು ಗಮನಿಸಿದರು. ಕೆಳಗೆ ಉಲ್ಲೇಖಿಸಲಾದ ಸಿಇಒಗಳು/ಉದ್ಯಮ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

• ತತ್ರವಾಗೊಂಕಾ ಸಂಸ್ಥೆಯ ಅಧ್ಯಕ್ಷ ಶ್ರೀ ಅಲೆಕ್ಸೆಜ್ ಬಲ್ಜಾಜೆವ್

• ತತ್ರವಾಗೊಂಕಾ ಸಂಸ್ಥೆಯ ಉಪಾಧ್ಯಕ್ಷ ಶ್ರೀ ಪೀಟರ್ ಮಾಲೆಕ್

•  ಎ.ಝೆಡ್.ಸಿ. ಗುಂಪಿನ ಅಧ್ಯಕ್ಷ ಶ್ರೀ ರಾಬರ್ಟ್ ಸ್ಪಿಸಾಕ್

• ಇಸೆಟ್ ಸಂಸ್ಥೆಯ ಸಿಇಒ ಶ್ರೀ ರಿಚರ್ಡ್ ಮಾರ್ಕೊ

• ಇಸೆಟ್ ಸಂಸ್ಥೆಯ ಏಷ್ಯಾ-ಪೆಸಿಫಿಕ್ ಪ್ರದೇಶದ ಅಧ್ಯಕ್ಷ ಶ್ರೀ ಪರ್ವಿಂದರ್ ವಾಲಿಯಾ

• ಗ್ರ್ಯಾಂಡ್ ಪವರ್ ಲಿಮಿಟೆಡ್ ಸಂಸ್ಥೆಯು ಸಿಇಒ ಶ್ರೀ ಜರೋಸ್ಲಾವ್ ಕುರಾಸಿನಾ

• ಪೆಂಟಾ ಹಾಸ್ಪಿಟಲ್ಸ್ ಇಂಟರ್ನ್ಯಾಷನಲ್ ಸಂಸ್ಥೆಯ ಸಿಇಒ ಶ್ರೀ ಪೀಟರ್ ಲೆಡ್ನಿಕಿ

• ಮಟಡೋರ್ ಸಂಸ್ಥೆಯ ಸಿಇಒ ಶ್ರೀ ಸ್ಟೀಫನ್ ರೋಸಿನಾ

• ಮಟಡೋರ್ ಟೆಕ್ನಾಲಜೀಸ್ ಇಂಡಿಯಾ ಪ್ರೈ.ಲಿ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀ ರಾಜೇಶ್ ಸಬ್ನೆ  ಲಿಮಿಟೆಡ್.

• ವೂಜೆ ಎಂ.ಎಸ್ ಸಂಸ್ಥೆಯ ಜನರಲ್ ಡೈರೆಕ್ಟರ್, ಶ್ರೀ ಮಾಟೆಜ್ ಕೋರೆಕ್

• ವಿಪೊ ಸಂಸ್ಥೆಯ ಸಿಇಒ ಶ್ರೀ ಪೀಟರ್ ಡುಚೋವಿಕ್

• ವಿಪೊ ಸಂಸ್ಥೆಯ ಡಿಜಿಟಲ್ ಕಾಂಪಿಟೆನ್ಸ್ ಮುಖ್ಯಸ್ಥ  ಶ್ರೀ ಆಂಡ್ರೆಜ್ ಬೆನ್ಸೆಲ್

• ಮೈಕ್ರೋಸ್ಟೆಪ್-ಮಿಸ್ ಸಂಸ್ಥೆಯ ಎಂಡಿ ಶ್ರೀ ಜೋಜೆಫ್ ಒಮೆಲ್ಕಾ

• ವಿ.ಆರ್.ಎಂ. ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಒ ಶ್ರೀ ರಿಚರ್ಡ್ ವರ್ಗಾ 

• ವಿ.ಆರ್.ಎಂ. ಸಂಸ್ಥೆಯ  ಮಾರ್ಕೆಟಿಂಗ್ ಮ್ಯಾನೇಜರ್ ಶ್ರೀ ಎಡ್ವರ್ಡ್ ಕ್ರಿಸ್ಟಿಯಾ

• ಇಕೋ ಇನ್ವೆಸ್ಟ್ಮೆಂಟ್ಸ್ ಸಂಸ್ಥೆಯ, ನಿರ್ದೇಶಕರ ಮಂಡಳಿಯ ಸದಸ್ಯ, ಶ್ರೀ ಮಿಲೋಸ್ಲಾವ್ ಕುರಿಲ್ಲಾ 

• ಕ್ಲಬ್ 500 ರ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಟಿಬೋರ್ ಗ್ರೆಗರ್

 

*****