Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮುಂಬಯಿಯಲ್ಲಿ ವ್ಯಾಪಾರೋದ್ಯಮಿಗಳ ಜೊತೆಯಲ್ಲಿ ಪ್ರಧಾನ ಮಂತ್ರಿ ಸಂವಾದ

ಮುಂಬಯಿಯಲ್ಲಿ ವ್ಯಾಪಾರೋದ್ಯಮಿಗಳ ಜೊತೆಯಲ್ಲಿ ಪ್ರಧಾನ ಮಂತ್ರಿ ಸಂವಾದ

ಮುಂಬಯಿಯಲ್ಲಿ ವ್ಯಾಪಾರೋದ್ಯಮಿಗಳ ಜೊತೆಯಲ್ಲಿ ಪ್ರಧಾನ ಮಂತ್ರಿ ಸಂವಾದ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಬಯಿಯಲ್ಲಿ ವ್ಯಾಪಾರೋದ್ಯಮದ ನಾಯಕರನ್ನು ಭೇಟಿ ಮಾಡಿ ಸಂವಾದ ನಡೆಸಿದರು. ಭಾರತೀಯ ವ್ಯಾಪಾರೋದ್ಯಮದ ವಿಸ್ತಾರ ವ್ಯಾಪ್ತಿಯನ್ನು ಪ್ರತಿನಿಧಿಸುವ 41 ವ್ಯಾಪಾರೋದ್ಯಮಿ ನಾಯಕರು ಸಂವಾದದಲ್ಲಿ ಉಪಸ್ಥಿತರಿದ್ದರು.

ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರಕಾರವು ಕೈಗೊಂಡ ನೀತಿ ಸುಧಾರಣಾ ಕ್ರಮಗಳು ಮತ್ತು ಹೊಸ ಉಪಕ್ರಮಗಳು ಎರಡು ಗಂಟೆಗಳಿಗೂ ಅಧಿಕ ಕಾಲ ನಡೆದ ವ್ಯಾಪಕ ಸಮಾಲೋಚನೆಯಲ್ಲಿ ಚರ್ಚೆಗೊಳಗಾದವು. ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ದಿಗೆ ಸಂಬಂಧಿಸಿ ಕೈಗಾರಿಕೋದ್ಯಮದ ಕೊಡುಗೆಯ ಬಗ್ಗೆಯೂ ಚರ್ಚೆ ನಡೆಯಿತು.

ದೇಶದಲ್ಲಿಯ ವ್ಯಾಪಾರೋದ್ಯಮ ಪರಿಸರದಲ್ಲಿ ಆಗಿರುವ ಸುಧಾರಣೆಯ ಬಗ್ಗೆ ಹಲವು ಪ್ರತಿನಿಧಿಗಳು ಮೆಚ್ಚುಗೆ

ವ್ಯಕ್ತಪಡಿಸಿದರು. ಮತ್ತು ಇದರಿಂದ ಭಾರತದ ಬೆಳವಣಿಗೆ ಸಾಮರ್ಥ್ಯ ಅನಾವರಣಗೊಳ್ಳುವುದಕ್ಕೆ ಸಹಾಯವಾಗಲಿದೆ ಎಂಬ ಅಭಿಪ್ರಾಯವನ್ನವರು ವ್ಯಕ್ತಪಡಿಸಿದರು. ನವಭಾರತ ಕುರಿತಂತೆ ಪ್ರಧಾನ ಮಂತ್ರಿಯವರ ಧೋರಣೆ, ದೂರದೃಷ್ಟಿಯನ್ನವರು ಬೆಂಬಲಿಸಿದರು.

ಸ್ಟಾರ್ಟಪ್ ಮತ್ತು ಉದ್ಯಮಪತಿಗಳ ಜೊತೆ ತಾವು ಇತ್ತೀಚೆಗೆ ನಡೆಸಿದ ಸಮಾಲೋಚನೆಗಳ ಬಗ್ಗೆ ಪ್ರಧಾನ ಮಂತ್ರಿಯವರು ಮಾತನಾಡಿದರು. ದೇಶದಲ್ಲೀಗ “ ಮಾಡಬಹುದು” ಎಂಬ ಮನೋಸ್ಥಿತಿ ಮತ್ತು ಧನಾತ್ಮಕ ಮನೋಭಾವ, ಸ್ಪೂರ್ತಿ ಮೂಡಿದೆ ಎಂದರು. ಸಾಂಸ್ಥಿಕ ವಲಯ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಬೇಕು ಎಂದು ಮನವಿ ಮಾಡಿದ ಅವರು ವಿಶೇಷವಾಗಿ ಕೃಷಿ ಕ್ಷೇತ್ರಕ್ಕೆ ಒತ್ತು ಕೊಡಬೇಕು ಎಂದರು

ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಬೇಕಾದ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿಗಳು ವೈದ್ಯಕೀಯ ಉಪಕರಣ, ವಿದ್ಯುನ್ಮಾನ, ಮತ್ತು ರಕ್ಷಣಾ ಸಾಮಗ್ರಿಗಳಂತಹ ಕ್ಷೇತ್ರದಲ್ಲಿ ಉತ್ಪಾದನಾ ಹೆಚ್ಚಳಕ್ಕೆ ಉತ್ತೇಜನ ನೀಡಬೇಕಾದ ಅಗತ್ಯವನ್ನೂ ಪ್ರತಿಪಾದಿಸಿದರು.

ಇದಕ್ಕೆ ಮೊದಲು ಹಣಕಾಸು ಸಚಿವ ಶ್ರೀ ಪಿಯೂಶ್ ಗೋಯಲ್ ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರಕಾರ ಭಾರತದ ಆರ್ಥಿಕತೆಯನ್ನು ಮುನ್ನಡೆಸಲು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಅವರು ನೀತಿ ಉಪಕ್ರಮಗಳು, ಅಭಿವೃದ್ಧಿಗೆ ಸಂಬಂಧಿಸಿ ಪೂರ್ಣ ದೃಷ್ಟಿಯ ಧೋರಣಾಕ್ರಮಗಳು, ನಾವೀನ್ಯತೆಯ ಸ್ಪೂರ್ತಿ, ಮತ್ತು ತಂತ್ರಜ್ಞಾನದ ಬಗ್ಗೆಯೂ ಅವರು ಮಾತನಾಡಿದರು.