Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮುಂಬರುವ ಸೋಮನಾಥ ಭೇಟಿ ಕುರಿತು ಲೇಖನವೊಂದನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇ 11 ರಂದು ಸೋಮನಾಥಕ್ಕೆ ಭೇಟಿ ನೀಡಲಿರುವ ಕುರಿತು ಸಂಪಾದಕೀಯ ಪುಟದ ಒಂದು ಲೇಖನವನ್ನು ಹಂಚಿಕೊಂಡಿದ್ದಾರೆ, ಇದು ಸೋಮನಾಥಕ್ಕೆ ಸಂಬಂಧಿಸಿದಂತೆ ಆ ದಿನದ ವಿಶೇಷತೆ, ಶಾಶ್ವತ ಮಹತ್ವ ಮತ್ತು ಭಾರತದ ನಾಗರಿಕತೆಯ ಶ್ರೇಷ್ಠತೆಯನ್ನು ಉಲ್ಲೇಖಿಸುತ್ತದೆ. 

ಸಂಪಾದಕೀಯ ಪುಟದ ಲೇಖನ ಕುರಿತು ವಿವರಗಳನ್ನು “ಎಕ್ಸ್” ತಾಣದ ಸಂದೇಶದಲ್ಲಿ ಹಂಚಿಕೊಂಡ ಪ್ರಧಾನಮಂತ್ರಿಯವರು, ಹಲವಾರು ಸವಾಲುಗಳನ್ನು ಎದುರಿಸಿದರೂ ಸೋಮನಾಥವನ್ನು ರಕ್ಷಿಸುವಲ್ಲಿ ಮತ್ತು ಅದರ ವೈಭವವನ್ನು ಪುನಃಸ್ಥಾಪಿಸುವಲ್ಲಿ ದೃಢವಾಗಿ ಉಳಿದ ಎಲ್ಲರಿಗೂ ಗೌರವ ಸಲ್ಲಿಸಿದರು.

ಪ್ರಧಾನಮಂತ್ರಿಯವರು ಎಕ್ಸ್ ತಾಣದಲ್ಲಿ ಈ ರೀತಿಯ ಸಂದೇಶ ಹಂಚಿಕೊಂಡಿದ್ದಾರೆ;

“ಮೇ 11 ರಂದು ನಾನು ಸೋಮನಾಥಕ್ಕೆ ಭೇಟಿ ನೀಡಲಿದ್ದೇನೆ ಮತ್ತು ಸೋಮನಾಥ ಮತ್ತು ನಮ್ಮ ನಾಗರಿಕತೆಯ ಹಿರಿಮೆಗೆ ಸಂಬಂಧಿಸಿದಂತೆ ಈ ದಿನ ಏಕೆ ಯಾವಾಗಲೂ ಮಹತ್ವದ್ದಾಗಿದೆ ಎಂಬುದರ ಕುರಿತು ಸಂಪಾದಕೀಯ ಪುಟದ ಲೇಖನ ಬರೆದಿದ್ದೇನೆ. ಅಲ್ಲದೆ ಎಲ್ಲಾ ರೀತಿಯ ಸವಾಲುಗಳನ್ನು ಸಹಿಸಿಕೊಂಡು ಸೋಮನಾಥವನ್ನು ಸದಾ ಕಾಲವೂ ರಕ್ಷಿಸಿ ಅದರ ವೈಭವವನ್ನು ಮರುಸ್ಥಾಪಿಸಿದ  ಪ್ರತಿಯೊಬ್ಬ ವ್ಯಕ್ತಿಗೆ ಗೌರವ ಸಲ್ಲಿಸುತ್ತೇನೆ.

https://www.narendramodi.in/somnath-and-bharat-s-unconquerable-spirit

“पुनर्निर्मित सोमनाथ मंदिर के लोकार्पण की 75वीं वर्षगांठ के उपलक्ष्य में 11 मई को मुझे एक बार फिर वहां जाने का सौभाग्य मिलने वाला है। यह अवसर हमें स्मरण कराता है कि इस पावनस्थल की रक्षा और इसके पुनर्निर्माण के लिए किस प्रकार देश की कई पीढ़ियों ने निरंतर संघर्ष किया। देशवासियों के नाम इस पत्र में मैंने भव्य-दिव्य सोमनाथ धाम को समर्पित अपनी भावनाएं व्यक्त की हैं…”

https://www.narendramodi.in/hi/somnath-and-bharat-s-unconquerable-spirit
 

 

*****