Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮೆಡೆಫ್ (ಫ್ರಾನ್ಸ್) ಅಧ್ಯಕ್ಷರಿಂದ ಪ್ರಧಾನಿ ಭೇಟಿ


ಮೆಡೆಫ್ (ಮೂವ್ಮೆಂಟ್ ಡೆಸ್ ಎಂಟರ್ ಪ್ರೈಸ್ ಡೆ ಫ್ರಾನ್ಸ್) ಅಧ್ಯಕ್ಷ ಶ್ರೀ ಪಿಯರ್ ಗಟ್ಟಾಜ್ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಪ್ರಧಾನಮಂತ್ರಿಯವರು 2015ರ ಏಪ್ರಿಲ್ ನಲ್ಲಿ ತಾವು ಫ್ರಾನ್ಸ್ ಗೆ ಭೇಟಿ ನೀಡಿದ್ದನ್ನು ಮತ್ತು ಆ ಸಂದರ್ಭದಲ್ಲಿ ಹಲವು ಫ್ರೆಂಚ್ ವಾಣಿಜ್ಯ ನಾಯಕರೊಂದಿಗೆ ಸಂವಾದ ನಡೆಸಿದ್ದನ್ನು ಮತ್ತು ಭಾರತ ಹಾಗೂ ಫ್ರಾನ್ಸ್ ನಡುವೆ ಹಲವು ವರ್ಷಗಳಿಂದ ಇರುವ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ವಾಣಿಜ್ಯ ನಾಯಕರ ಅಮೂಲ್ಯ ಕೊಡುಗೆಯನ್ನು ಪ್ರೀತಿಪೂರ್ವಕವಾಗಿ ಸ್ಮರಿಸಿದರು.
ಶ್ರೀ ಗಟ್ಟಾಜ್ ಅವರು ಭಾರತ ಮತ್ತು ಫ್ರಾನ್ಸ್ ನಡುವೆ ವೃದ್ಧಿಸುತ್ತಿರುವ ವಾಣಿಜ್ಯ ಮತ್ತು ಹೂಡಿಕೆಯ ಬಾಂಧವ್ಯದ ಬಗ್ಗೆ ಪ್ರಧಾನಿಯವರಿಗೆ ವಿವರಿಸಿದರು.
ಭಾರತದಲ್ಲಿ ವಿದೇಶೀ ನೇರ ಬಂಡವಾಳ ಹೂಡಿಕೆಯಲ್ಲಿ ಫ್ರಾನ್ಸ್ ಮೊದಲ 10 ಮೂಲಗಳಲ್ಲಿ ಒಂದಾಗಿದೆ ಎಂಬುದನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು ಮತ್ತು ಭಾರತದಲ್ಲಿ ಹೆಚ್ಚುತ್ತಿರುವ ಹೂಡಿಕೆಯ ಅವಕಾಶಗಳು ಮತ್ತು ಸುಧಾರಿಸುತ್ತಿರುವ ವಾಣಿಜ್ಯ ಪರಿಸರದ ಲಾಭ ಪಡೆಯುವಂತೆ ಫ್ರೆಂಚ್ ಕಂಪನಿಗಳಿಗೆ ಆಹ್ವಾನ ನೀಡಿದರು.