Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮೆಸ್ಸರ್ಸ್ ದುಬೈ ಪೋರ್ಟ್ ವರ್ಲ್ಡ್ ಲಿಮಿಟೆಡ್ ಇನ್ ಮೇಜರ್ ಪೋರ್ಟ್ಸ್ ಕಂಪನಿಯು ಬೃಹತ್ ಬಂದರುಗಳಲ್ಲಿ ಕೈಗೊಂಡಿರುವ ಕಂಟೇನರ್ ಟರ್ಮಿನಲ್ ಯೋಜನೆಗಳಲ್ಲಿ ಹೊಂದಿರುವ ಷೇರುಪ್ರಮಾಣದ ಉದ್ದೇಶಿತ/ಪ್ರಸ್ತಾವಿತ ಬದಲಾವಣೆಗೆ ಕೇಂದ್ರ ಸಂಪುಟ ಸಭೆಯ ಅನುಮೋದನೆ.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಮೆಸ್ಸರ್ಸ್ ದುಬೈ ಪೋರ್ಟ್ ವರ್ಲ್ಡ್ (ಡಿಪಿಡಬ್ಲ್ಯು) ಲಿಮಿಟೆಡ್ ಕಂಪನಿಯು ಬೃಹತ್ ಬಂದರುಗಳಲ್ಲಿ ಕೈಗೊಂಡಿರುವ ಕಂಟೇನರ್ ಟರ್ಮಿನಲ್ ಯೋಜನೆಗಳಲ್ಲಿ ಹೊಂದಿರುವ ಷೇರುಪ್ರಮಾಣದ ಉದ್ದೇಶಿತ/ಪ್ರಸ್ತಾವಿತ ಬದಲಾವಣೆಗೆ `ನಿರಾಕ್ಷೇಪಣಾ ಪತ್ರ’ ನೀಡಲು ತನ್ನ ಅನುಮೋದನೆ ನೀಡಿದೆ. ಇದರಿಂದಾಗಿ, ಈಗಾಗಲೇ ಕೆಲವು ಬೃಹತ್ ಬಂದರುಗಳಲ್ಲಿರುವ ಟರ್ಮಿನಲ್ ನ ಕಾರ್ಯಾಚರಣೆಯನ್ನು ನಿರ್ದಿಷ್ಟ ಷರತ್ತುಗಳೊಂದಿಗೆ ನಿರ್ವಹಿಸುವ ಹಕ್ಕನ್ನು ಹೊಂದಿರುವ ಡಿಪಿಡಬ್ಲ್ಯುನ ಒಂದು ಭಾರತೀಯ ಮಾತೃಸಂಸ್ಥೆಯನ್ನು ಸ್ಥಾಪಿಸಲು ಅವಕಾಶ ಸಿಗಲಿದೆ.

ಕೇಂದ್ರ ಸಂಪುಟದ ಈ ತೀರ್ಮಾನದಿಂದಾಗಿ ಬಂದರು ವಲಯದಲ್ಲಿ ವಿದೇಶಿ ನೇರ ಹೂಡಿಕೆಗೆ ಮತ್ತು ಖಾಸಗಿ ವಲಯದವರ ಪಾಲ್ಗೊಳ್ಳುವಿಕೆಗೆ ಉತ್ತೇಜನ ಸಿಗಲಿದೆ.

ಡಿಪಿಡಬ್ಲ್ಯು ಲಿಮಿಟೆಡ್ ಭಾರತದಲ್ಲಿನ ತನ್ನ ಸೊತ್ತುಗಳನ್ನು ಪುನರ್ವ್ಯವಸ್ಥೆಗೊಳಿಸಲು ಉದ್ದೇಶಿಸಿದೆ. ಭಾರತದ ಬಂದರುಗಳಲ್ಲಿ ತಾನು ನಿರ್ಮಿಸಿರುವ ಮೂಲಸೌಲಭ್ಯಗಳ ಮೇಲಿನ ತನ್ನ ಒಡೆತನವನ್ನು ಮತ್ತಷ್ಟು ಬಲಪಡಿಸಿಕೊಳ್ಳುವುದು ಅದರ ಆಶಯವಾಗಿದ್ದು, ಇದಕ್ಕಾಗಿ ಅದು `ಹಿಂದೂಸ್ತಾನ್ ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (ಎಚ್ಪಿಪಿಎಲ್) ಎನ್ನುವ ಒಂದು ಮಾತೃಸಂಸ್ಥೆಯನ್ನು ಹುಟ್ಟುಹಾಕಲು ತೀರ್ಮಾನಿಸಿದೆ. ಈ ಹೊಸ ಕಂಪನಿಯು ರಿಯಾಯಿತಿ ಒಡಂಬಡಿಕೆಗಳಿಗೆ ಸಂಬಂಧಿಸಿದಂತೆ `ದುಬೈ ಪೋರ್ಟ್ ವರ್ಲ್ಡ್ ಲಿಮಿಟೆಡ್ ನ ಎಲ್ಲ ಅಂಗಸಂಸ್ಥೆಗಳ / ಅಧೀನ ಸಂಸ್ಥೆಗಳ ಸಾಲಸೋಲಗಳನ್ನೆಲ್ಲ ತಾನೇ ವಹಿಸಿಕೊಳ್ಳಲಿದೆ. ಆದರೆ, ಕಂಪನಿಯ ಅಂತಿಮ ಫಲಾನುಭವಿಗಳ ಸ್ಥಾನಮಾನದಲ್ಲಾಗಲಿ, ಕಾನೂನುಬದ್ಧ ಮಾಲೀಕತ್ವದ ಸ್ಥಾನಮಾನದಲ್ಲಾಗಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಂದರೆ, ಇನ್ನುಮುಂದೆಯೂ ಈ ಸ್ಥಾನಮಾನಗಳು `ಮೆಸ್ಸರ್ಸ್ ಡಿ.ಪಿ.ವರ್ಲ್ಡ್’ ನದೇ ಆಗಿರುತ್ತವೆ. ಭಾರತದಲ್ಲಿ ಹೂಡಿಕೆಯ ನೆಲೆಯನ್ನು ವಿಸ್ತರಿಸಿಕೊಳ್ಳುವುದು ಮತ್ತು ಇಲ್ಲಿನ ಬಂದರುಗಳು ಹಾಗೂ ಸರಕು ಸಾಗಣೆ ವ್ಯವಸ್ಥೆಯ ಮೂಲಸೌಲಭ್ಯ ಕ್ಷೇತ್ರದಲ್ಲಿ ಹೊಸದಾಗಿ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡುವುದು ಡಿಪಿಡಬ್ಲ್ಯುನ ಗುರಿಯಾಗಿದೆ. ಇದು, ಹಣಕಾಸಿನ ಬಲವರ್ಧನೆಗೂ ಬಂದರುಗಳ ಕಾರ್ಯಾಚರಣೆಯಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆಗೂ ದಾರಿ ಮಾಡಿಕೊಡಲಿದೆ.

ಡಿಪಿಡಬ್ಲ್ಯು ತನ್ನ ಪುನಾರಚನೆಯ ಸಂಬಂಧ ಸಲ್ಲಿಸಿರುವ ಪ್ರಸ್ತಾವನೆಗೆ ಕೇಂದ್ರ ಸರಕಾರವು ಷರತ್ತುಬದ್ಧ ಅನುಮೋದನೆ ನೀಡಿದೆ. ಅಂದರೆ, ವಿಶೇಷ ಯೋಜನಾ ಕಾರ್ಯವಾಹಿಗಳನ್ನು ಸ್ವಾಧೀನ ಪಡಿಸಿಕೊಂಡ ನಂತರ ಮಾತೃಸಂಸ್ಥೆಯಾದ ಎಚ್ಪಿಪಿಎಲ್ ನ ನಿವ್ವಳ ಆಸ್ತಿ ಮೌಲ್ಯವು ಯಾವ ಕಾರಣಕ್ಕೂ 80 ದಶಲಕ್ಷ ಡಾಲರುಗಳಿಗಿಂತ ಕಡಿಮೆ ಇರುವಂತಿಲ್ಲ.

ಭಾರತದಲ್ಲಿ ಡಿಪಿಡಬ್ಲ್ಯು ಕಂಪನಿಯ ಪುನಾರಚನೆಯಿಂದಾಗಿ ಬಂದರುಗಳ ಪ್ರಾಧಿಕಾರಕ್ಕೂ ಅನುಕೂಲವಾಗಲಿದೆ. ಏಕೆಂದರೆ, ಅದು ಇನ್ನುಮುಂದೆ ಭಾರತದಲ್ಲಿ ನೋಂದಣಿಯಾಗಿರುವ ಒಂದೇ ಕಂಪನಿಯೊಂದಿಗೆ ಮಾತ್ರ ವ್ಯವಹರಿಸಿದರೆ ಸಾಕಾಗಲಿದ್ದು, ಇದು ಉತ್ತಮ ಸಮನ್ವಯವನ್ನೂ ನಿಯಂತ್ರಣವನ್ನೂ ತರಲು ನೆರವಾಗಲಿದೆ. ಜತೆಗೆ, ಡಿಪಿಡಬ್ಲ್ಯು ಸಲ್ಲಿಸಿರುವ ಮಾಲೀಕತ್ವ ಕ್ರೋಢೀಕರಣದ ಉದ್ದೇಶವುಳ್ಳ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿರುವುದು ದೇಶದಲ್ಲಿ ವಿದೇಶಿ ನೇರ ಹೂಡಿಕೆಗೆ ಉತ್ತೇಜನಕಾರಿಯಾಗಿರಲಿದ್ದು, ಬಂದರು ವಲಯದಲ್ಲಿರುವ ಹೂಡಿಕೆಸ್ನೇಹಿ ವಾತಾವರಣಕ್ಕೆ ಒಂದು ಸಂಕೇತವಾಗಿದೆ. ಇದು, ಮತ್ತಷ್ಟು ಪಾರದರ್ಶಕತೆಯನ್ನು ತರಲು ಮತ್ತು ಭಾರತದ ಕಾನೂನುಗಳ ಪಾಲನೆಗೆ ಪ್ರೇರಣೆ ಕೊಡಬಹುದು.

.***