Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಯುನೈಟೆಡ್ ಕಿಂಗ್ಡಮ್ ವಿದೇಶಾಂಗ ಕಾರ್ಯದರ್ಶಿ ಅವರಿಂದ ಪ್ರಧಾನಮಂತ್ರಿ ಅವರ ಭೇಟಿ


ಯುನೈಟೆಡ್‌ ಕಿಂಗ್ಡಮ್ ವಿದೇಶಾಂಗ ಕಾರ್ಯದರ್ಶಿ ಇವ್ಯಾಟ್ ಕೂಪರ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಇಂದು ಭೇಟಿ ಮಾಡಿದರು.

ಈ ಭೇಟಿಗೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಮಂತ್ರಿಯವರು, ಎರಡೂ ದೇಶಗಳಿಗೆ ಅಭೂತಪೂರ್ವ ಬೆಳವಣಿಗೆಯ ಅವಕಾಶಗಳನ್ನು ತೆರೆದಿಟ್ಟಿರುವ ಇತ್ತೀಚಿನ ದಿನಗಳಲ್ಲಿ ಗಾಢಗೊಳ್ಳುತ್ತಿರುವ ಭಾರತ-ಯುನೈಟೆಡ್‌ ಕಿಂಗ್ಡಮ್ ಪಾಲುದಾರಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತ – ಯುಕೆ ವಿಷನ್ 2035 ಪಾಲುದಾರಿಕೆಗೆ ಮಾರ್ಗದರ್ಶನ ನೀಡುತ್ತಾ ಜಾಗತಿಕ ಒಳಿತಿಗಾಗಿ ಜಂಟಿ ಪ್ರಯತ್ನಗಳ ಬಲವರ್ಧನೆಯನ್ನು ಮುಂದುವರಿಸಲಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

“ಯುಕೆ ವಿದೇಶಾಂಗ ಕಾರ್ಯದರ್ಶಿ ಇವ್ಯಾಟ್ ಕೂಪರ್ ಅವರನ್ನು ಭೇಟಿ ಮಾಡಿ ಸಂತೋಷವಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತ-ಯುಕೆ ಪಾಲುದಾರಿಕೆ ಆಳವಾಗುತ್ತಿದ್ದು, ಇದು ನಮ್ಮ ಎರಡೂ ದೇಶಗಳಿಗೆ ಅಭೂತಪೂರ್ವ ಬೆಳವಣಿಗೆಯ ಅವಕಾಶಗಳನ್ನು ತೆರೆದಿಟ್ಟಿದೆ.

ಭಾರತ-ಯುನೈಟೆಡ್ ಕಿಂಗ್ಡಮ್ ವಿಷನ್ 2035 ನಮ್ಮ ಪಾಲುದಾರಿಕೆಗೆ ಮಾರ್ಗದರ್ಶನ ನೀಡುವುದನ್ನು ಮತ್ತು ಜಾಗತಿಕ ಒಳಿತಿಗಾಗಿ ನಮ್ಮ ಜಂಟಿ ಪ್ರಯತ್ನಗಳನ್ನು ಬಲಪಡಿಸುವುದನ್ನು ಮುಂದುವರಿಸಲಿದೆ. @YvetteCooperMP”

 

*****