Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಯುಪಿಎಸ್‌ಸಿ (UPSC) ಶತಮಾನೋತ್ಸವ ಸಮಾರಂಭದಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಧೈರ್ಯ ಶ್ಲಾಘಿಸಿದ ಪ್ರಧಾನಮಂತ್ರಿ


ಯುಪಿಎಸ್‌ಸಿ ಶತಮಾನೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಜಗತ್ತಿಗೆ ಅತ್ಯುನ್ನತ ಮಟ್ಟದ ಧೈರ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದರು.

ತಮ್ಮ ಸ್ವಂತ ಪ್ರಾಣದ ಬಗ್ಗೆಯೂ ಚಿಂತಿಸದೆ, ಕ್ಯಾಪ್ಟನ್ ಮಚ್ಚರ್ ಅವರು ವೀರಾವೇಶದಿಂದ ಹೋರಾಡಿದರು ಮತ್ತು ಮತ್ತೊಂದು ‘9/11’ ಮಾದರಿಯ ದಾಳಿ ನಡೆಯದಂತೆ ತಡೆದರು ಎಂದು ಪ್ರಧಾನಮಂತ್ರಿ ತಿಳಿಸಿದರು.

140 ಕೋಟಿ ಭಾರತೀಯರು ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ನಮನ ಸಲ್ಲಿಸುತ್ತಾರೆ ಮತ್ತು ಅವರ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ ಎಂದು ಶ್ರೀ ಮೋದಿ ಹೇಳಿದರು.

ಪ್ರಧಾನಮಂತ್ರಿ ಅವರು ‘ಎಕ್ಸ್’ ನಲ್ಲಿ ಹೀಗೆ ಬರೆದಿದ್ದಾರೆ:

“ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಜಗತ್ತಿಗೆ ಅತ್ಯುನ್ನತ ಮಟ್ಟದ ಧೈರ್ಯವನ್ನು ಪ್ರದರ್ಶಿಸಿದ್ದಾರೆ.

ತಮ್ಮ ಸ್ವಂತ ಪ್ರಾಣದ ಬಗ್ಗೆಯೂ ಚಿಂತಿಸದೆ, ಅವರು ವೀರಾವೇಶದಿಂದ ಹೋರಾಡಿದರು ಮತ್ತು ಮತ್ತೊಂದು ‘9/11’ ಮಾದರಿಯ ದಾಳಿ ನಡೆಯದಂತೆ ತಡೆದರು.

140 ಕೋಟಿ ಭಾರತೀಯರು ಕ್ಯಾಪ್ಟನ್ ಸ್ಮಿತ್ ಅವರಿಗೆ ನಮನ ಸಲ್ಲಿಸುತ್ತಾರೆ ಮತ್ತು ಅವರ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.”

 

*****