Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಯುವಜನರ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಆರ್ಮೆನಿಯಾ ನಡುವೆ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಸಚಿವ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಭಾರತ ಮತ್ತು ಅರ್ಮೇನಿಯಾ ನಡುವೆ ಯುವಜನರ ವಿಚಾರಕ್ಕೆ ಸಂಬಂಧಿಸಿದ ಸಹಕಾರ ಕುರಿತಂತೆ ಸಹಿ ಹಾಕಲಾಗಿರುವ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರಿಸಲಾಯಿತು.

ಈ ತಿಳಿವಳಿಕೆ ಒಪ್ಪಂದಕ್ಕೆ 2017ರ ಏಪ್ರಿಲ್ ನಲ್ಲಿ ಅಂಕಿತ ಹಾಕಲಾಗಿತ್ತು. ಈ ತಿಳಿವಳಿಕೆ ಒಪ್ಪಂದವು ಐದು ವರ್ಷಗಳವರೆಗೆ ಜಾರಿಯಲ್ಲಿರುತ್ತದೆ. ಆ ನಂತರ ಒಪ್ಪಂದದ ಅವಧಿ ಮುಕ್ತಾಯಕ್ಕೆ ಆರು ತಿಂಗಳು ಮುನ್ನ ಯಾವುದೇ ಪಕ್ಷಕಾರರು ನವೀಕರಣ ಮಾಡದಂತೆ ತಮ್ಮ ಇಂಗಿತ ವ್ಯಕ್ತಪಡಿಸಿದ ಹೊರತು ಈ ತಿಳಿವಳಿಕೆ ಒಪ್ಪಂದವು ತಂತಾನೆ ಮತ್ತೆ ಐದು ವರ್ಷಗಳ ಅವಧಿಗೆ ನವೀಕರಣಗೊಳ್ಳುತ್ತದೆ. ಈ ಒಪ್ಪಂದವನ್ನು ಯಾವುದೇ ಪಕ್ಷಕಾರರು ಮತ್ತೊಬ್ಬ ಪಕ್ಷಕಾರರಿಗೆ ಆರು ತಿಂಗಳುಗಳ ಮೊದಲು ಲಿಖಿತ ನೋಟಿಸ್ ನೀಡುವ ಮೂಲಕ ರದ್ದು ಮಾಡಬಹುದಾಗಿದೆ.

ಎರಡೂ ದೇಶಗಳ ನಡುವೆ ಯುವಜನರ ವಿನಿಮಯ, ಜ್ಞಾನ ಹಂಚಿಕೆ ಮತ್ತು ಪಕ್ಷಕಾರರು ಆಯೋಜಿಸುವ ಕಾರ್ಯಕ್ರಮ ಮತ್ತು ಕಾರ್ಯಚಟುವಟಿಕೆಗಳಲ್ಲಿ ಮಾಹಿತಿಯ ವಿನಿಮಯಕ್ಕಾಗಿ ಎರಡೂ ದೇಶಗಳ ನಡುವೆ ಸಹಕಾರ ಉತ್ತೇಜಿಸಲು ಮತ್ತು ಬಲಪಡಿಸುವುದು ಈ ತಿಳಿವಳಿಕೆ ಒಪ್ಪಂದದ ಉದ್ದೇಶವಾಗಿದೆ.

ಯುವ ವಿಚಾರಗಳಿಗೆ ಸಂಬಂಧಿಸಿದ ಸಹಕಾರ ಕ್ಷೇತ್ರಗಳಲ್ಲಿ ಯುವಜನರ, ಯುವ ಸಂಘಟನೆಗಳ ಪ್ರತಿನಿಧಿಗಳ, ಮತ್ತು ಯುವಜನರ ನೀತಿ ನಿರೂಪಣೆಯ ಅಧಿಕಾರ ಹೊಂದಿದ ಸರ್ಕಾರದ ಅಧಿಕಾರಿಗಳ ವಿನಿಮಯವನ್ನೂ ಒಳಗೊಂಡಿದೆ. ಎರಡೂ ದೇಶಗಳಲ್ಲಿ ನಡೆಯುವ ಯುವ ವಿಚಾರ ಕುರಿತ ಅಂತಾರಾಷ್ಟ್ರೀಯ ಸಮಾವೇಶ ಮತ್ತು ಗೋಷ್ಠಿಗಳಿಗೆ ಆಹ್ವಾನ ನೀಡುವುದು, ಮುದ್ರಿತ ಸಾಮಗ್ರಿ, ಚಲನಚಿತ್ರ ಮತ್ತು ಅನುಭವದ ವಿನಿಮಯದ ವಿಸ್ತರಣೆಗೂ ಇದು ಅನ್ವಯವಾಗುತ್ತದೆ. ಸಹಕಾರವು ಯುವಜನರಿಗೆ ಸಂಬಂಧಿಸಿದ ಇತರ ಮಾಹಿತಿಗಳು ಮತ್ತು ಸಂಶೋಧನೆ, ಯುವ ಶಿಬಿರಗಳಲ್ಲಿ ಪಾಲ್ಗೊಳ್ಳುವುದು ಮತ್ತು ಎರಡೂ ದೇಶಗಳಲ್ಲಿ ನಡೆಯುವ ಯುವ ಕಾರ್ಯಕ್ರಮಗಳ ಕ್ಷೇತ್ರಕ್ಕೂ ಅನ್ವಯಿಸುತ್ತದೆ.

*****

AKT/VBA/SH