ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಯುವ ಮತ್ತು ಕ್ರೀಡಾ ವ್ಯವಹಾರಗಳ ಕ್ಷೇತ್ರದಲ್ಲಿ ಭಾರತ ಮತ್ತು ಬ್ರುನೈ ದರುಸಲಮ್ ನಡುವೆ ಒಪ್ಪಂದಕ್ಕೆ ಅಂಕಿತ ಹಾಕಿರುವ ಕುರಿತಂತೆ ಮಾಹಿತಿ ನೀಡಲಾಯಿತು. ಈ ಎರಡು ರಾಷ್ಟ್ರಗಳ ನಡುವೆ ಎಂ.ಓ.ಯು.ಗೆ. 2016 ಫೆಬ್ರವರಿ 2ರಂದು ಬ್ರುನೈ ನ ಬಂದರ್ ಸೇರಿ ಬೆಗವಾನ್ ನಲ್ಲಿ ಅಂಕಿತ ಹಾಕಲಾಗಿತ್ತು.
ಯುವ ಮತ್ತು ಕ್ರೀಡಾ ಕ್ಷೇತ್ರದಲ್ಲಿನ ವಿನಿಮಯ, ಅಧಿಕಾರಿಗಳು ಮತ್ತು ತರಬೇತುದಾರರಿಗೆ ತರಬೇತಿ ಕಾರ್ಯಕ್ರಮ, ಕ್ರೀಡಾ ಸೌಕರ್ಯಗಳಿಗೆ ಸಂಬಂಧಿಸಿದಂತೆ ಸ್ಪರ್ಧಿಗಳಿಗೆ ಕ್ರೀಡಾ ಪ್ರೋತ್ಸಾಹ, ಕ್ರೀಡಾ ಸಲಕರಣೆ, ಕ್ರೀಡಾ ತರಬೇತಿ ಮತ್ತು ದೈಹಿಕ ಸಿದ್ಧತೆ, ಕ್ರೀಡಾ ಯುಕ್ತತೆ ಮತ್ತು ದೈಹಿಕ ಶಿಕ್ಷಣವನ್ನು ಒಪ್ಪಂದ ಒಳಗೊಂಡಿದೆ. ಜೊತೆಗೆ ಇದು ತರಬೇತಿ, ಕ್ರೀಡಾ ಪ್ರತಿಭೆ ಗುರುತಿಸುವಿಕೆ, ಕ್ರೀಡಾ ನಿರ್ವಹಣೆ ಮತ್ತು ಆಡಳಿತ, ಯುವಕರು ಮತ್ತು ಕ್ರೀಡೆ, ಕ್ರೀಡೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಮಾಹಿತಿ ವ್ಯವಸ್ಥೆ, ಅಭಿವೃದ್ಧಿ ಮತ್ತು ಕ್ರೀಡೆಯಲ್ಲಿ ಹೆಚ್ಚಿನ ಮಾಹಿತಿ ಇತ್ಯಾದಿ ಕ್ಷೇತ್ರಗಳೂ ಇದರಲ್ಲಿ ಸೇರಿವೆ.