Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಯು.ಕೆ.ಯ ನೂತನ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಶ್ರೀಮತಿ ಥೆರೆಸಾ ಮೇ ಅವರಿಗೆ ಪ್ರಧಾನಿ ಅಭಿನಂದನೆ; ಭಾರತ-ಯು.ಕೆ. ಬಾಂಧವ್ಯ ಬಲಪಡಿಸುವಲ್ಲಿ ಶ್ರೀ. ಡೇವಿಡ್ ಕೆಮರಾನ್ ಕೊಡುಗೆಗೆ ಮೆಚ್ಚುಗೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುನೈಟೆಡ್ ಕಿಂಗ್ ಡಮ್ ನ ನೂತನ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಶ್ರೀಮತಿ ಥೆರೆಸಾ ಮೇ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಪ್ರಧಾನಮಂತ್ರಿಯವರು, ಭಾರತ ಮತ್ತು ಯು.ಕೆ. ಬಾಂಧವ್ಯ ಬಲಪಡಿಸಲು ಶ್ರೀ ಡೇವಿಡ್ ಕೆಮರಾನ್ ಅವರು ನೀಡಿರುವ ಕೊಡುಗೆಯನ್ನೂ ಪ್ರಶಂಸಿಸಿದ್ದಾರೆ.

“ಯು.ಕೆ.ಯ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಥೆರೆಸಾ ಮೇ ಅವರಿಗೆ ಅಭಿನಂದನೆಗಳು. ಅವರೊಂದಿಗೆ ಭಾರತ-ಯುಕೆ ಸಂಬಂಧ ಬಲಪಡಿಸಲು ಒಗ್ಗೂಡಿ ಶ್ರಮಿಸಲು ಎದಿರು ನೋಡುತ್ತಿದ್ದೇನೆ.

ಅಲ್ಲದೆ ನಾನು ಡೇವಿಡ್ ಕೆಮರಾನ್ ಅವರು ಭಾರತ –ಯುಕೆ ಬಾಂಧವ್ಯ ಬಲಪಡಿಸಲು ನೀಡಿದ ಗಣನೀಯ ಕೊಡುಗೆಯನ್ನು ಪ್ರಶಂಸಿಸುತ್ತೇನೆ.”, ಎಂದು ಪ್ರಧಾನಿ ತಿಳಿಸಿದ್ದಾರೆ.

AKT/AK