Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಣಿ ರಶ್ಮೋನಿ ಜನ್ಮ ವಾರ್ಷಿಕೋತ್ಸವಕ್ಕೆ ಪ್ರಧಾನಮಂತ್ರಿ ಗೌರವ ಸಲ್ಲಿಕೆ 


ರಾಣಿ ರಶ್ಮೋನಿ ಅವರ ಜನ್ಮ ವಾರ್ಷಿಕೋತ್ಸವ ದಿನವಾದ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದ್ದಾರೆ. ರಾಣಿ ರಶ್ಮೋನಿ ಅವರು ಧೈರ್ಯ, ಕರುಣೆ ಮತ್ತು ದೃಢಸಂಕಲ್ಪದ ಅತ್ಯುನ್ನತ ವ್ಯಕ್ತಿ ಎಂದು ಶ್ರೀ ಮೋದಿ ಶ್ಲಾಘಿಸಿದ್ದಾರೆ. 

ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು:

“ರಾಣಿ ರಶ್ಮೋನಿ ಅವರು ಧೈರ್ಯ, ಕರುಣೆ ಮತ್ತು ದೃಢಸಂಕಲ್ಪದ ಅತ್ಯುನ್ನತ ವ್ಯಕ್ತಿಯಾಗಿದ್ದರು. ಅವರನ್ನು ದೂರದೃಷ್ಟಿಯ ನಾಯಕಿ ಮತ್ತು ಲೋಕೋಪಕಾರಿ ಎಂದು ಪ್ರೀತಿಯಿಂದ ಸ್ಮರಿಸಲಾಗುತ್ತದೆ. ಅವರು ಶಾಶ್ವತ ಸಂಸ್ಥೆಗಳನ್ನು ನಿರ್ಮಿಸಿದ್ದರು. ಆಧ್ಯಾತ್ಮಿಕತೆಗೆ ಹಾಗೂ ಬಡವರ ಉನ್ನತಿಗಾಗಿ ಅಚಲವಾದ ಬದ್ಧತೆಯನ್ನು ಹೊಂದಿದ್ದರು. ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸುತ್ತೇನೆ.” 

 

 

*****