ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಮತ್ತು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಬರೆದಿರುವ ಲೇಖನವೊಂದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಮತ್ತು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಲೇಖನದಲ್ಲಿ, ಕೃಷಿಯೊಂದಿಗೆ ಸೌರಶಕ್ತಿ ಉತ್ಪಾದನೆಯನ್ನು ಸಂಯೋಜಿಸುವ ‘ಅಗ್ರಿವೋಲ್ಟಾಯಿಕ್ಸ್’ ವ್ಯವಸ್ಥೆಯು ರೈತರ ಆದಾಯವನ್ನು ವರ್ಧಿಸಬಲ್ಲ ಸಾಮರ್ಥ್ಯದ ಬಗ್ಗೆ ಬರೆದಿದ್ದಾರೆ. ಅಗ್ರಿವೋಲ್ಟಾಯಿಕ್ಸ್ ಹೇಗೆ ಹೆಚ್ಚುವರಿ ಆದಾಯ ಒದಗಿಸಬಲ್ಲದು, ಇಂಧನ ವೆಚ್ಚವನ್ನು ತಗ್ಗಿಸಬಲ್ಲದು ಮತ್ತು ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಲು ನೆರವಾಗಬಲ್ಲದು ಎಂಬುದನ್ನು ಲೇಖನ ವಿವರಿಸಿದೆ. ಅಲ್ಲದೇ, ಕೃಷಿ ಪ್ರದೇಶಗಳಿಗೆ ಇಂಧನ ಒದಗಿಸುವ ಮತ್ತು ಗ್ರಾಮೀಣ ಸಮೃದ್ಧಿಯನ್ನು ಮುನ್ನಡೆಸುವ ಕುರಿತಂತೆ ಒಂದು ಅರ್ಥಪೂರ್ಣ ಒಳನೋಟ ನೀಡಿದೆ.
ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ:
ಕೇಂದ್ರ ಸಚಿವರಾದ ಶ್ರೀ @JoshiPralhad ಮತ್ತು ಶ್ರೀ @ChouhanShivraj ಅವರು ಕೃಷಿಯೊಂದಿಗೆ ಸೌರಶಕ್ತಿ ಉತ್ಪಾದನೆಯನ್ನು ಸಂಯೋಜಿಸುವ ‘ಅಗ್ರಿವೋಲ್ಟಾಯಿಕ್ಸ್’ ವ್ಯವಸ್ಥೆಯು ರೈತರ ಆದಾಯವನ್ನು ಹೇಗೆ ಹೆಚ್ಚಿಸಬಲ್ಲದು ಎಂಬುದರ ಬಗ್ಗೆ ಬರೆದಿದ್ದಾರೆ. ಇದು ಹೇಗೆ ಹೆಚ್ಚುವರಿ ಆದಾಯ ಒದಗಿಸಬಲ್ಲದು, ಇಂಧನ ವೆಚ್ಚ ತಗ್ಗಿಸಬಲ್ಲದು ಮತ್ತು ಬೆಳೆ ಉತ್ಪಾದಕತೆ ಹೆಚ್ಚಿಸಲು ಹೇಗೆ ಪೂರಕವಾಗಬಲ್ಲದು ಎಂಬುದನ್ನು ಅವರು ವಿವರಿಸಿದ್ದಾರೆ.
ಕೃಷಿ ಕ್ಷೇತ್ರಗಳಿಗೆ ಇಂಧನ ಒದಗಿಸುವಿಕೆ ಮತ್ತು ಗ್ರಾಮೀಣ ಸಮೃದ್ಧಿ ಉತ್ತೇಜನ ಕುರಿತಾದ ಆಳವಾದ ಮಾಹಿತಿಯುಳ್ಳ ಲೇಖನವಿದು.
*****
Union Ministers Shri @JoshiPralhad and Shri @ChouhanShivraj write about the potential of agrivoltaics to strengthen farmers' incomes by combining solar power generation with agriculture. They highlight how it can provide additional revenue, reduce energy costs and support crop productivity. An insightful read on powering farms and advancing rural prosperity. https://t.co/zEGdyd0hRq
— PMO India (@PMOIndia) October 21, 2026