ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತೀಯ ರೈಲ್ವೆ ಮತ್ತು ಎಸ್.ಎನ್.ಸಿ.ಎಫ್. ಮೊಬಿಲಿಟೀಸ್ (ಫ್ರೆಂಚ್ ರಾಷ್ಟ್ರದ ಒಡೆತನದ ಒಂದು ಕಂಪನಿ) ನಡುವೆ ರೈಲ್ವೆ ವಲಯದ ತಾಂತ್ರಿಕ ಸಹಕಾರ ಕುರಿತಂತೆ ಆಗಿರುವ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರಿಸಲಾಯಿತು. ಈ ತಿಳಿವಳಿಕೆ ಒಪ್ಪಂದಕ್ಕೆ 2018ರ ಮಾರ್ಚ್ 10ರಂದು ಅಂಕಿತ ಹಾಕಲಾಗಿತ್ತು.
ಈ ತಿಳಿವಳಿಕೆ ಒಪ್ಪಂದವು ಭಾರತೀಯ ರೈಲ್ವೆಗೆ ರೈಲ್ವೆ ವಲಯದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಜ್ಞಾನ ಕುರಿತಂತೆ ಚರ್ಚಿಸಲು ಮತ್ತು ಹಂಚಿಕೊಳ್ಳಲು ವೇದಿಕೆ ಕಲ್ಪಿಸುತ್ತದೆ. ಈ ತಿಳಿವಳಿಕೆ ಒಪ್ಪಂದವು, ತಾಂತ್ರಿಕ ಪರಿಣತರ, ವರದಿಗಳ ಮತ್ತು ತಾಂತ್ರಿಕ ದಸ್ತಾವೇಜುಗಳವಿನಿಮಯಕ್ಕೆ ಮತ್ತು ಜ್ಞಾನ ವಿನಿಮಯಕ್ಕಾಗಿ ಮತ್ತು ಇತರ ಸಂವಾದಕ್ಕಾಗಿ ನಿರ್ದಿಷ್ಟ ತಾಂತ್ರಿಕ ಕ್ಷೇತ್ರಗಳ ಮೇಲೆ ಗಮನವಿಟ್ಟ ತರಬೇತಿ ಮತ್ತು ವಿಚಾರಗೋಷ್ಠಿ/ಕಾರ್ಯಾಗಾರಗಳಿಗೆ ಅವಕಾಶ ಕಲ್ಪಿಸುತ್ತದೆ.
ಈ ತಿಳಿವಳಿಕೆ ಒಪ್ಪಂದವು ಈ ಕೆಳಕಂಡ ಪ್ರಮುಖ ಕ್ಷೇತ್ರಗಳಲ್ಲಿ ಗಮನವಿಟ್ಟ ದೃಷ್ಟಿಕೋನದ ಚೌಕಟ್ಟಿನ ಸಹಕಾರವನ್ನು ಒದಗಿಸುತ್ತದೆ:-
ಹಿನ್ನೆಲೆ:
ರೈಲ್ವೆ ಸಚಿವಾಲಯವು ರೈಲು ವಲಯದ ತಾಂತ್ರಿಕ ಸಹಕಾರಕ್ಕಾಗಿ ಹಲವು ವಿದೇಶೀ ಸರ್ಕಾರಗಳೊಂದಿಗೆ ಮತ್ತು ರಾಷ್ಟ್ರೀಯ ರೈಲ್ವೆಯೊಂದಿಗೆ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಿವೆ. ಸಹಕಾರಕ್ಕಾಗಿ ಗುರುತಿಸಲಾದ ಇತರ ಕ್ಷೇತ್ರಗಳಲ್ಲಿ ಹೈಸ್ಪೀಡ್ ಕಾರಿಡಾರ್, ಹಾಲಿ ಇರುವ ಮಾರ್ಗಗಳಲ್ಲಿ ವೇಗ ವರ್ಧನೆ, ವಿಶ್ವದರ್ಜೆಯ ನಿಲ್ದಾಣಗಳ ಅಭಿವೃದ್ಧಿ, ರೈಲು ಮೂಲಸೌಕರ್ಯ ಆಧುನೀಕರಣ ಮತ್ತು ಭಾರಿ ಪ್ರಯಾಣ ನಿರ್ವಹಣೆ ಇತ್ಯಾದಿ ಒಳಗೊಂಡಿದೆ. ಈ ಸಹಕಾರವನ್ನು ರೈಲ್ವೆ ತಂತ್ರಜ್ಞಾನ ಮತ್ತು ಕಾರ್ಯಾಚರಣೆಯ ಕ್ಷೇತ್ರದ ಬೆಳವಣಿಗೆಗಳ ಮಾಹಿತಿಯ ವಿನಿಮಯ, ಜ್ಞಾನ ವಿನಿಮಯ, ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ತಾಂತ್ರಿಕ ಭೇಟಿ, ತರಭೇತಿ ಮತ್ತು ವಿಚಾರಸಂಕಿರಣ ಹಾಗೂ ಕಾರ್ಯಾಗಾರಗಳ ಮೂಲಕ ಸಾಧಿಸಲಾಗುತ್ತದೆ.