ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರೈಲು ಮತ್ತು ರಸ್ತೆ ವಲಯದ ಪ್ರಮುಖ ಮೂಲಸೌಕರ್ಯದ ಪ್ರಗತಿಯ ಪರಿಶೀಲನೆ ನಡೆಸಿದರು.
ರೈಲ್ವೆ ವಲಯದ ಪರಿಶೀಲನೆಯ ವೇಳೆ, 2015-16ನೇ ಸಾಲಿನಲ್ಲಿ 93 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಬಂಡವಾಳ ಹೂಡಿಕೆ ಮಾಡಿರುವುದನ್ನು ಗಮನಕ್ಕೆ ತರಲಾಯಿತು. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 65ರಷ್ಟು ಬೃಹತ್ ಹೆಚ್ಚಳವಾಗಿದೆ ಮತ್ತು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಅದೇ ರೀತಿ 2015-16ನೇ ಸಾಲಿನಲ್ಲಿ 1780 ಕಿಲೋ ಮೀಟರ್ ಮಾರ್ಗವನ್ನು ಅಳವಡಿಸಲಾಗಿದೆ ಮತ್ತು 1730 ಕಿಲೋ ಮೀಟರ್ ಮಾರ್ಗ ವಿದ್ಯುದ್ದೀಕರಣ ಮಾಡಲಾಗಿದೆ, ಇದು ರೈಲ್ವೆ ಇತಿಹಾಸದಲ್ಲಿಯೇ ಅತ್ಯುತ್ತಮ ಸಾಧನೆಯಾಗಿದೆ.
ರೈಲ್ವೆ ನಿಲ್ದಾಣಗಳ ಮರು ಅಭಿವೃದ್ಧಿ ಕಾರ್ಯವನ್ನು ವೇಗಗೊಳಿಸುವ ಅಗತ್ಯವನ್ನು ಪ್ರಧಾನಮಂತ್ರಿಯವರು ಪ್ರತಿಪಾದಿಸಿದರು ಮತ್ತು ಈ ನಿಟ್ಟಿನಲ್ಲಿ ಗಣನೀಯವಾಗಿ ತನ್ನ ಮಟ್ಟವನ್ನು ಹೆಚ್ಚಿಸಿಕೊಳ್ಳುವಂತೆ ರೈಲ್ವೆಗೆ ಒತ್ತಾಯಿಸಿದರು. ರೈಲ್ವೆಯು ತನ್ನ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಿಕೊಂಡು ಮತ್ತು ವೈವಿಧ್ಯತೆಯನ್ನು ಬಳಸುವಂತೆ ಅವರು ಒತ್ತಾಯಿಸಿದರು. ಗ್ರಾಮೀಣ ಪ್ರದೇಶದಲ್ಲಿನ ರೈಲ್ವೆ ಮೂಲಸೌಕರ್ಯವನ್ನು ಕೌಶಲ ಅಭಿವೃದ್ಧಿ ಚಟುವಟಿಕೆಗಳಿಗೂ ಬಳಸಿಕೊಳ್ಳಬಹುದು ಮತ್ತು ಇದು ರೈಲ್ವೆಯ ಪ್ರಯಾಣದರಯೇತರ ಆದಾಯ ಹೆಚ್ಚಿಸುತ್ತದೆ ಎಂದರು.
ರಸ್ತೆ ವಲಯದಲ್ಲಿ 6 ಸಾವಿರ ಕಿಲೋ ಮೀಟರ್ ಉದ್ದದ ಹೆದ್ದಾರಿಯನ್ನು 2015-16ನೇ ಸಾಲಿನಲ್ಲಿ ಪೂರ್ಣಗೊಳಿಸಲಾಗಿದೆ, ಜೊತೆಗೆ ಇದೇ ಅವಧಿಯಲ್ಲಿ 10098 ಕಿಲೋ ಮೀಟರ್ ರಸ್ತೆಗೆ ಗುತ್ತಿಗೆ ನೀಡಲಾಗಿದೆ ಎಂದು ಪ್ರಧಾನಮಂತ್ರಿಯವರಿಗೆ ತಿಳಿಸಲಾಯಿತು.
ದೇಶಾದ್ಯಂತ ರಸ್ತೆ ಅಭಿವೃದ್ಧಿಯ ವಿವಿಧ ಮಾದರಿಗಳನ್ನು ಅಧ್ಯಯನ ಮಾಡುವ ಅಗತ್ಯವಿದೆ ಎಂದು ಪ್ರಧಾನಮಂತ್ರಿಯವರು ಪ್ರತಿಪಾದಿಸಿದರು ಮತ್ತು ಅತ್ಯುತ್ತಮವಾದ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು, ಹಾಗಾದಾಗ ಹೆಚ್ಚಿನ ಖಾಸಗಿ ಬಂಡವಾಳವನ್ನು ಹೆದ್ದಾರಿ ನಿರ್ಮಾಣ ವಲಯಕ್ಕೆ ತರಬಹುದು ಎಂದರು.
ನಿರ್ಣಾಯಕ ಚಾಚಿದ ನಿಬಿಡತೆಯನ್ನು ನಿವಾರಿಸಲು, ಮತ್ತು ಟೋಲ್ ಸಂಗ್ರಹಿಸಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನೂ ಅವರು ಒತ್ತಿ.ಹೇಳಿದರು.
At a high level meeting today, reviewed progress in railways & roads sector. https://t.co/tIkwVCWCDa pic.twitter.com/EQklrn75j2
— Narendra Modi (@narendramodi) May 30, 2016
Progress in commissioning of lines & electrification of lines has been commendable. Discussed speeding up process of redeveloping stations.
— Narendra Modi (@narendramodi) May 30, 2016
Centre is working on upgrading rail infra. In rural areas this will boost skill development & increase non-fare revenue for railways.
— Narendra Modi (@narendramodi) May 30, 2016
As far as roads are concerned, completion of highways is going on at remarkable pace. Spoke on need of more private investment in the sector
— Narendra Modi (@narendramodi) May 30, 2016
Also emphasised on decongesting critical stretches and invigorating the roads & highways sector with latest technology. #TransformingIndia
— Narendra Modi (@narendramodi) May 30, 2016