ಪಿಎಂಇಂಡಿಯಾ
ಗೌರವಾನ್ವಿತರಾದ ಸ್ಪೀಕರ್ ಮೇಡಂ ಅವರೇ,
ರಾಷ್ಟ್ರಪತಿಗಳ ಭಾಷಣಕ್ಕೆ ನನ್ನ ಕೃತಜ್ಞತೆಗಳನ್ನು ವ್ಯಕ್ತಪಡಿಸುವುದಕ್ಕಾಗಿ ನಾನು ಸದನದಲ್ಲಿಯ ಕೆಲವು ಅಂಶಗಳನ್ನು ಬೆಂಬಲಿಸುತ್ತಲೇ, ಕೆಲವು ಸಂಗತಿಗಳನ್ನು ಇಲ್ಲಿ ಹೇಳಲು ಇಚ್ಚಿಸುತ್ತೇನೆ. ಲೋಕ ಸಭೆಯ ಹಲವು ಸದಸ್ಯರು ನಿನ್ನೆ ಸದನದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯಕ್ಕೆ ಸಂಬಂಧಿಸಿ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ. ಸುಮಾರು 34 ಮಂದಿ ಗೌರವಾನ್ವಿತ ಸದಸ್ಯರುಗಳಾದ, ಶ್ರೀ ಮಲ್ಲಿಕಾರ್ಜುನ ಖರ್ಗೇ ಜೀ, ಶ್ರೀ ಮಹಮ್ಮದ್ ಸಲೀಂ ಜೀ , ಶ್ರೀ ವಿನೋದ್ ಕುಮಾರ್ ಜೀ, ಶ್ರೀ ನರಸಿಂಹ ತೋಟಾ ಜೀ, ಶ್ರೀ ತಾರೀಖ್ ಅನ್ವರ್ ಜೀ, ಶ್ರೀ ಪ್ರೇಮ್ ಸಿಂಗ್ ಜೀ, ಶ್ರೀ ಅನ್ವರ್ ಜೀ, ಜೈ ಪ್ರಕಾಶ್ ನಾರಾಯಣ್ ಯಾದವ್, ಕಲ್ಯಾಣ್ ಬ್ಯಾನರ್ಜಿ, , ಶ್ರೀ ವೇಣು ಗೋಪಾಲ್ , ಆನಂದ ರಾವ್ ಅಡ್ಸೂಲ್ ಜೀ, ಆರ್.ಕೆ. ಭಾರತಿ ಮೋಹನ್ ಜೀ, ಮತ್ತಿತರರು ತಮ್ಮ ವಿಚಾರಗಳನ್ನು ಹೇಳಿದ್ದಾರೆ. ಅಲ್ಲಿ ವಿವರವಾದ ಚರ್ಚೆ ನಡೆದಿದೆ. ಕೆಲವರು ಪರವಾಗಿ ಮತ್ತು ಕೆಲವರು ವಿರೋಧವಾಗಿ ಮಾತನಾಡಿದ್ದಾರೆ. ಆದರೆ ಅದು ಅರ್ಥಪೂರ್ಣ ಚರ್ಚೆಯಾಗಿದೆ. ಮತ್ತು ರಾಷ್ಟ್ರಪತಿಗಳ ಭಾಷಣ ಒಂದು ಪಕ್ಷದ ಪರವಾಗಿ ಇರಲಿಲ್ಲ. ಅವರ ಭಾಷಣ ದೇಶದ ಭರವಸೆಯ , ಆಶೋತ್ತರಗಳ ಅಭಿವ್ಯಕ್ತಿಯಾಗಿತ್ತು. ಮತ್ತು ಆ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ವಿವರಗಳನ್ನುಒಳಗೊಂಡಿತ್ತು. ಆ ಹಿನ್ನೆಲೆಯಲ್ಲಿ, ರಾಷ್ಟ್ರಪತಿಗಳ ಭಾಷಣಕ್ಕೆ ಗೌರವ ನೀಡಬೇಕು. ವಿರೋಧಿಸಬೇಕು ಎಂಬ ಏಕೈಕ ಕಾರಣಕ್ಕೆ ಅದನ್ನು ವಿರೋಧಿಸುವುದು ನ್ಯಾಯೋಚಿತವೇ ?.
ಸ್ಪೀಕರ್ ಮೇಡಂ,
ಈ ದೇಶದ ಕೆಲವು ರಾಜ್ಯಗಳು ಗೌರವಾನ್ವಿತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿಂದ ರೂಪಿಸಲ್ಪಟ್ಟಿವೆ. ಮೂರು ಹೊಸ ರಾಜ್ಯಗಳನ್ನು ರೂಪಿಸಲಾಗಿದೆ. ಉತ್ತರಪ್ರದೇಶದಿಂದ ಉತ್ತರಾಖಂಡವನ್ನೂ, ಮಧ್ಯಪ್ರದೇಶದಿಂದ ಛತ್ತೀಸ್ ಗಡವನ್ನೂ, ಮತ್ತು ಬಿಹಾರದಿಂದ ಜಾರ್ಖಂಡವನ್ನೂ ರೂಪಿಸಲಾಗಿದೆ. ಈ ರೀತಿಯ ರಾಜ್ಯ ವಿಭಜನೆ, ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯುತ್ತದೆ ಎಂಬ ಚಿಂತನೆಯನ್ನು ಸರಕಾರ ಹೊಂದಿತ್ತು.ನಾಯಕತ್ವ ದೂರದೃಷ್ಟಿಯನ್ನು ಹೊಂದಿದ್ದರೆ, ಸರಿಯಾದ ನಿರ್ಧಾರವನ್ನು ಕೈಗೊಳ್ಳಬಹುದು. ಮತ್ತು ರಾಜಕೀಯ ಹಿತಾಸಕ್ತಿಯನ್ನು ಅನುಲಕ್ಷಿಸಿ ತುರ್ತಾಗಿ ನಿರ್ಧಾರಗಳನ್ನು ಕೈಗೊಳ್ಳಲಾಗದು. ಈ ದೇಶ ಅಟಲ್ ಬಿಹಾರಿ ವಾಜಪೇಯಿ ಅವರ ದೊಡ್ಡ ನಿರ್ಧಾರವಾದ 3 ರಾಜ್ಯಗಳ ರಚನೆಗೆ ಒಂದು ದೊಡ್ಡ ಉದಾಹರಣೆಯಾಗಿದೆ. ನೀವು ದೇಶವನ್ನು ವಿಭಜಿಸಿ ವಿಷದ ಬೀಜಗಳನ್ನು ಬಿತ್ತಿದ್ದೀರಿ.ಇಂದು ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ 125 ಕೋಟಿ ಭಾರತೀಯರು ಈಗಲೂ ನಿಮ್ಮ ಪಾಪದ ಪರಿಣಾಮವನ್ನು ಅನುಭವಿಸಬೇಕಾಗಿದೆ.
ನೀವು ದೇಶವನ್ನು ಆ ರೀತಿಯಲ್ಲಿ ವಿಭಜಿಸಿದ್ದೀರಿ. ಬರಲಿರುವ ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡು ನೀವು ತೆಲಂಗಾಣವನ್ನು ರಚಿಸಲು ಕ್ರಮ ಕೈಗೊಂಡಿರಿ. ಸಂಸತ್ತಿನ ದ್ವಾರಗಳು ಮುಚ್ಚಿದ್ದ ಸಮಯದಲ್ಲಿ , ಸದನ ಸೇರಿಲ್ಲದ ಸಮಯದಲ್ಲಿ ಈ ನಿರ್ಧಾರ ಕೈಗೊಂಡಿರಿ. ಆಂಧ್ರಪ್ರದೇಶದ ಜನರ ಭಾವನೆಗಳನ್ನು ನೀವು ಗಣನೆಗೆ ತೆಗೆದುಕೊಳ್ಳಲಿಲ್ಲ.. ನಾವು ತೆಲಂಗಾಣ ರಚನೆಗೆ ಪರವಾಗಿದ್ದರೂ ನೀವದನ್ನು ಗಮನಿಸಲಿಲ್ಲ. ಮತ್ತು ಇಂದೂ ನಾವು ತೆಲಂಗಾಣ ಪ್ರಗತಿಯಾಗಬೇಕು ಎಂದು ಆಶಿಸುತ್ತೇವೆ. ಆದರೆ ನೀವು ಆ ದಿನ ಬಿತ್ತಿದ ಬೀಜಗಳು ಆಂಧ್ರದಲ್ಲಿ ಮತ್ತು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆ ರಾಜ್ಯವನ್ನು ವಿಭಜಿಸಿ ರೂಪಿಸಿದ ತುರ್ತಿನಿಂದಾಗಿ 4 ವರ್ಷಗಳ ಬಳಿಕ ಈಗಲೂ ಸಮಸ್ಯೆಗಳು ಬಗೆಹರಿದಿಲ್ಲ. ಆದ್ದರಿಂದ ಇಂತಹ ಕ್ರಮಗಳನ್ನು ನಿಮ್ಮಿಂದ ನಿರೀಕ್ಷಿಸಿರಲಿಲ್ಲ.
ಸ್ಪೀಕರ್ ಮೇಡಂ,
ನಿನ್ನೆ ನಾನು ಕಾಂಗ್ರೆಸ್ ನಾಯಕ ಶ್ರೀ ಖರ್ಗೆ ಜೀ ಅವರ ಭಾಷಣವನ್ನು ಕೇಳುತ್ತಿದ್ದೆ. ಅವರು ಆಡಳಿತ ಪಕ್ಷದ ಸದಸ್ಯರನ್ನುದೇಶಿಸಿ ಮಾತನಾಡುತ್ತಿದ್ದಾರೋ, ಕರ್ನಾಟಕದ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದಾರೋ, ಅಥವಾ ಅವರದೇ ಪಕ್ಷದ ನೀತಿ ನಿರೂಪಕರನ್ನು ಸಂತೋಷಪಡಿಸಲು ಪ್ರಯತ್ನಿಸುತ್ತಿದ್ದಾರೋ ಎಂಬುದು ನನಗೆ ಅರ್ಥವಾಗಲಿಲ್ಲ. ಖರ್ಗೆ ಜೀ ಅವರು ಬಶೀರ್ ಬದ್ರ ಅವರ ಕವನವನ್ನು ಉದಾಹರಿಸಿದರು ಮತ್ತು ಅವರು ಉದಾಹರಿಸಿದ , ವಿವರಿಸಿದ ಕಾವ್ಯವನ್ನು ಕರ್ನಾಟಕದ ಮುಖ್ಯಮಂತ್ರಿಗಳು ಕೇಳಿರಬಹುದು ಎಂದು ನಾನು ಭಾವಿಸುತ್ತೇನೆ. ಅವರು ಉದ್ಘರಿಸಿದ ಕಾವ್ಯದ ಸಾಲುಗಳ ಸಾಮಾನ್ಯವಾದ ಅರ್ಥ –ದ್ವೇಷದಲ್ಲಿಯೂ ಕೂಡಾ ಅಲ್ಲಿ ಮತ್ತೊಮ್ಮೆ ಸ್ನೇಹಿತರಾಗುವ ಅವಕಾಶ ಇರಬೇಕು ಎಂಬುದಾಗಿದೆ.
ನಾನು ನಂಬುತ್ತೇನೆ, ಕರ್ನಾಟಕದ ಮುಖ್ಯಮಂತ್ರಿ ಇದನ್ನು ಕೇಳಿರುತ್ತಾರೆ ಎಂದು. ಖರ್ಗೆ ಅವರು ಬಶೀರ್ ಬದ್ರ ಅವರ ಕವನದ ಇನ್ನಷ್ಟು ಸಾಲುಗಳನ್ನು ಉದ್ಘರಿಸಿದ್ದರೆ ಮತ್ತಷ್ಟು ಉತ್ತಮವಿತ್ತು. ಹಾಗಾಗಿದ್ದ ಪಕ್ಷದಲ್ಲಿ ಈ ದೇಶ ನೀವು ಎಲ್ಲಿ ನಿಂತಿದ್ದೀರಿ ಎಂಬುದನ್ನು ತಿಳಿದುಕೊಳ್ಳುತ್ತಿತ್ತು. ಅದೇ ಕಾವ್ಯದಲ್ಲಿ ಬಶೀರ್ ಬದ್ರ ಮುಂದೆ ಹೇಳುವ ಸತ್ಯವನ್ನು ಹೇಳುವ ಧೈರ್ಯವನ್ನು ಅವರು ತೋರಿಸಲಿಲ್ಲ.
ನನಗೆ ಗೊತ್ತಿಲ್ಲ ಕರ್ನಾಟಕ ಚುನಾವಣೆಗಳ ಬಳಿಕ , ಖರ್ಗೆ ಅವರು ಇದೇ ಸ್ಥಾನದಲ್ಲಿರುವರೋ, ಇಲ್ಲವೋ ಎಂಬುದು. ಮತ್ತು ಇದರಿಂದಾಗಿ ಇದು ಅವರ ಬೀಳ್ಕೊಡುಗೆಯ ಭಾಷಣವಾಗಿರಲೂಬಹುದು. ಆದ್ದರಿಂದ ಸಾಮಾನ್ಯವಾಗಿ ಓರ್ವ ಸದಸ್ಯ ಮೊದಲ ಬಾರಿಗೆ ಸದನದಲ್ಲಿ ಮಾತನಾಡುತ್ತಿರುವಾಗಲೂ ಪ್ರತೀಯೊಬ್ಬರೂ ಗೌರವದಿಂದ ನೋಡುತ್ತಾರೆ, ಆಲಿಸುತ್ತಾರೆ. ಅದೇ ರೀತಿ ಬೀಳ್ಕೊಡುಗೆಯ ಭಾಷಣವನ್ನು ಗೌರವದಿಂದ ಆಲಿಸುತ್ತಾರೆ. ನಿನ್ನೆ ಕೆಲವು ಗೌರವಾನ್ವಿತ ಸದಸ್ಯರು ತಮ್ಮನ್ನು ತಾವು ನಿಯಂತ್ರಿಸಿಕೊಂಡು ಮಾನ್ಯ ಖರ್ಗೆ ಜೀ ಅವರ ಭಾಷಣವನ್ನು ಅಷ್ಟೇ ಗೌರವದಿಂದ ಕೇಳಿದ್ದರೆ ಉತ್ತಮವಿತ್ತು. ಇದು ಪ್ರಜಾಪ್ರಭುತ್ವಕ್ಕೆ ಬಹಳ ಅಗತ್ಯ. ಅಲ್ಲಿ ಪ್ರತಿಭಟನೆಗೆ ಹಕ್ಕಿದೆ. ಆದರೆ ಸದನಕ್ಕೆ ಅಗೌರವ ತೋರಲು ಯಾರಿಗೂ ಹಕ್ಕಿಲ್ಲ..
ಸ್ಪೀಕರ್ ಮೇಡಂ,
ನಿನ್ನೆ ವಿರೋಧ ಪಕ್ಷದ ಕೆಲವರು ನಮ್ಮ ನೀತಿಗಳನ್ನು ಟೀಕಿಸುತ್ತಲೇ ಹೋದಾಗ ನಾನು ಗಮನಿಸಿದ್ದೇನೆಂದರೆ ಅವರಲ್ಲಿ ಸಾಕಷ್ಟು ವಾಸ್ತವಾಂಶಗಳು ಅಥವಾ ನೆಲೆಗಳು, ಆಧಾರಗಳು ಇರಲಿಲ್ಲ. ಆದರೆ ಅದೇ ವೇಳೆ ಅವರದೇ ಹಳೆಯ ಸಾಧನೆಗಳ ಅದೇ ದಾಖಲೆಗಳನ್ನು ಪ್ರಸ್ತಾವಿಸಲು ಆರಂಭಿಸಿದರು. ಆದರೆ ಮರೆಯಬೇಡಿ , ಭಾರತ ವಿಮೋಚನೆಗೊಂಡಿದೆ. ಮತ್ತು ನಮ್ಮ ಬಳಿಕವೂ ಅನೇಕ ದೇಶಗಳು ವಿಮೋಚನೆಗೊಂಡಿವೆ. ಮತ್ತು ಅವುಗಳು ನಮಗಿಂತ ಬಹಳ ಮುಂದೆ ಹೋಗಿವೆ. ನಾವು ಆ ಮಟ್ಟದಲ್ಲಿ, ಆ ವೇಗದಲಿ ಪ್ರಗತಿ ಹೊಂದಲಿಲ್ಲ ಎಂಬ ಅಂಶವನ್ನು ಒಪ್ಪಿಕೊಳ್ಳಲೇಬೇಕಿದೆ. ಭಾರತ ಮಾತೆಯನ್ನು ನೀವು ವಿಬಜನೆ ಮಾಡಿದ ಬಳಿಕವೂ ಈ ದೇಶ ನಿಮ್ಮೊಂದಿಗೇ ಇತ್ತು. ಆ ಸಮಯದಲ್ಲಿ ನೀವು ದೇಶವನ್ನು ಆಳುತ್ತಿದ್ದೀರಿ. ಆರಂಭದ 3-4 ದಶಕಗಳ ಕಾಲ ವಿರೋಧ ಪಕ್ಷ ಎನ್ನುವುದು ಬರೇ ನಾಮಕಾವಸ್ತೆಯಾಗಿತ್ತು. ಆ ಸಮಯದಲ್ಲಿ ಮಾಧ್ಯಮಗಳ ವಿಸ್ತರಣೆ ಅಷ್ಟಾಗಿರಲಿಲ್ಲ. ಮತ್ತು ಆಗಿದ್ದ ಮಾಧ್ಯಮಗಳು ಸರಕಾರದಿಂದ ದೇಶಕ್ಕೆ ಒಳಿತಾಗುತ್ತದೆ ಎಂಬ ಕಾರಣಕ್ಕಾಗಿ ಸರಕಾರದ ಪರವಾಗಿದ್ದವು. ರೇಡಿಯೋವನ್ನು ನಿಮ ಪರವಾದ ಹಾಡು ಹಾಡುವುದಕ್ಕೆ ಬಳಸಲಾಗುತ್ತಿತ್ತು. ಮತ್ತು ಆ ಬಳಿಕ ಟೆಲಿವಿಶನ್ ಬಂದಾಗ ಅದು ನಿಮಗಾಗಿಯೇ ಮೀಸಲಾಗಿರುವಂತೆ ನೋಡಿಕೊಂಡಿರಿ. ಆ ಕಾಲದಲ್ಲಿ ನ್ಯಾಯಾಂಗದ ಉನ್ನತ ಹುದ್ದೆಗಳಿಗೆ ಕಾಂಗ್ರೆಸ್ ಪಕ್ಷದಿಂದ ನೇಮಿಸಲ್ಪಡುತ್ತಿದ್ದರು. ನಿಮ್ಮ ಬಳಿ ಎಲ್ಲ ಐಷಾರಾಮವೂ ಇತ್ತು. ಆ ಕಾಲದಲ್ಲಿ ನ್ಯಾಯಾಲಯಗಳಲ್ಲಿ ಐ.ಪಿ.ಎಲ್. ಇರಲಿಲ್ಲ. ಸಾಕಷ್ಟು ಎನ್.ಜಿ.ಓ.ಗಳೂ ಇರಲಿಲ್ಲ. ಆ ಕಾಲದಲ್ಲಿ ನಿಮಗೆ ಇಂತಹ ಅನುಕೂಲಕರ ವಾತಾವರಣ ಇತ್ತು. ಮತ್ತು ಅದರಲ್ಲಿ ನೀವು ಬೆಳೆದಿರಿ. ಅಂದು ಪ್ರತಿಭಟನೆಗಳು ಇರಲಿಲ್ಲ. ಪಂಚಾಯತಿನಿಂದ ಹಿಡಿದು ಸಂಸತ್ತಿನವರೆಗೂ ನಿಮ್ಮದೇ ಬಾವುಟಗಳು ಇದ್ದವು. ಆದರೆ ನೀವು ಇಡೀ ಕಾಲಾವಧಿಯನ್ನು ಒಂದು ಕುಟುಂಬವನ್ನು ಹಾಡಿ ಹೊಗಳುವ ಮೂಲಕ ಕಳೆದಿರಿ. ಇಡೀ ದೇಶ ಒಂದು ಕುಟುಂಬವನ್ನು ಮಾತ್ರವೇ ನೆನಪಿಸಿಕೊಳ್ಳಬೇಕು ಎಂಬ ಗುರಿಯೊಂದಿಗೆ ನಿಮ್ಮೆಲ್ಲ ಶಕ್ತಿಯನ್ನು ವ್ಯಯಿಸಿದಿರಿ. ದೇಶದ ಇತಿಹಾಸವನ್ನು ನಿರ್ಲಕ್ಷಿಸಿದಿರಿ. ಸ್ವಾತಂತ್ರ್ಯಾನಂತರ ದೇಶವಾಸಿಗಳಲ್ಲಿ ವಿಭಿನ್ನವಾದ ಆಶೋತ್ತರಗಳಿದ್ದವು. ಹುರುಪುಗಳಿದ್ದವು. ಈ ಉತ್ಸಾಹ, ಆಶೋತ್ತರಗಳು ದೇಶವನ್ನು ಮುಂದೆ ಕೊಂಡೊಯ್ಯುವ ನಿಟ್ಟಿನಲ್ಲಿ ಇದ್ದವು. ನೀವೂ ಅದೇ ಜವಾಬ್ದಾರಿಯಿಂದ ಕಾರ್ಯಾಚರಿಸಿದ್ದರೆ , ಆಗ ಈ ದೇಶದ ಜನರ ಶಕ್ತಿ, ಬಲಗಳು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿತ್ತು. ಆದರೆ ನೀವು ನಿಮ್ಮ ವೈಯಕ್ತಿಕ ಕಾರ್ಯಪಟ್ಟಿಯಲ್ಲಿ ಕಾರ್ಯಪವೃತ್ತರಾಗಿ ವಿರಾಮ ಇಲ್ಲದಂತಿದ್ದಿರಿ. ಸರಿಯಾದ ದಿಕ್ಕಿನಲ್ಲಿ ನೀವು ಸಾಗಿದ್ದರೆ, ನಿಮ್ಮ ಉದ್ದೇಶಗಳು ಪ್ರಾಮಾಣಿಕವಾಗಿದ್ದರೆ, ಮತ್ತು ನೀವು ಜವಾಬ್ದಾರಿಯುತ ನೀತಿ, ನಿರ್ಧಾರಗಳನ್ನು ಕೈಗೊಂಡಿದ್ದರೆ ಈ ಹೊತ್ತಿಗೆ ದೇಶವು ತನ್ನ ಕಾಲಕ್ಕಿಂತ ಬಹಳ ಮುಂದಿರುತ್ತಿತ್ತು ಎಂಬ ವಾಸ್ತವಾಂಶವನ್ನು ನೀವ್ಯಾರೂ ನಿರಾಕರಿಸಲು ಸಾಧ್ಯವಿಲ್ಲ. ನೀವು ನಿರಾಕರಿಸಲಾರಿರಿ. ಕಾಂಗ್ರೆಸ್ ಪಕ್ಷದ ನಾಯಕರು ಭಾರತ ಎಂಬ ದೇಶ 1947 ರ ಆಗಸ್ಟ್ 15 ರಂದು ಹುಟ್ಟಿತು ಎಂದು ತಿಳಿದುಕೊಂಡದ್ದು ತೀರಾ ದುರದೃಷ್ಟಕರ. ಅದಕ್ಕೆ ಮೊದಲು ಈ ದೇಶ ಅಸ್ತಿತ್ವದಲ್ಲಿರಲಿಲ್ಲ ಎಂದವರು ಭಾವಿಸಿದ್ದರು , ಮತ್ತು ನಿನ್ನೆ ನಾನು ಕೆಲವು ವಿಷಯಗಳನ್ನು ಕೇಳಿಕೊಂಡು ಆಶ್ಚರ್ಯಚಕಿತನಾದೆ. !. ಅದನ್ನು ನಾನು ಅಹಂಕಾರ ಅಥವಾ ಹುಚ್ಚುತನ, ಮೂರ್ಖತನ ಎಂದು ಕರೆಯಲೇ? ಅಥವಾ ಮಳೆಗಾಲದಲ್ಲಿ ಅವರ ಪಟ್ಟವನ್ನು ರಕ್ಷಿಸಿಕೊಳ್ಳುವ ಯತ್ನ ಎಂದು ಕರೆಯಲೇ ?. .ನೆಹರೂ ಈ ದೇಶಕ್ಕೆ ಪ್ರಜಾಪ್ರಭುತ್ವ ತಂದರು ಎಂದು ಅವರು ಹೇಳಿದ್ದನ್ನು ನಾನು ಕೇಳಿದೆ. ಕಾಂಗ್ರೆಸ್ ದೇಶದಲ್ಲಿ ಪ್ರಜಾಪ್ರಭುತ್ವ ತಂದಿತು ಎಂದರು. ವಾಹ್ ! ಖರ್ಗೆ ಸಾಹೇಬ್ , ಇದು ನಿಜವಾಗಿಯೂ ಮುಜುಗರದ ಸಂಗತಿ. ನೀವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವಾಗ, ಬುದ್ದ ತತ್ವ ಇದ್ದಾಗ, ಲಿಚ್ಚಾವಿ ಸಾಮ್ರಾಜ್ಯದ ಆಡಳಿತ ಇದ್ದಾಗ , ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಇತ್ತೆಂಬುದನ್ನು ನೀವು ತಿಳಿದುಕೊಳ್ಳಬೇಕಿತ್ತು. ಕಾಂಗ್ರೆಸ್ ಪಕ್ಷ ಮತ್ತು ನೆಹರೂ ಜೀ ಅವರು ಪ್ರಜಾಪ್ರಭುತ್ವ ತಂದದ್ದಲ್ಲ.
ಬುದ್ದ ಸಂಘಗಳು ಚರ್ಚೆಯ, ಸಮಾಲೋಚನೆಯ ಆಧಾರದ ಮೇಲೆ ತೀರ್ಮಾನಗಳನ್ನು ಮಾಡುತ್ತಿದ್ದವು.ಮತ್ತು ಖರ್ಗೆ ಜೀ ನೀವು ಕರ್ನಾಟಕಕ್ಕೆ ಸೇರಿದವರು. ನಿಮಗೆ ಕರ್ನಾಟಕ ಚುನಾವಣೆಯ ಬಳಿಕ ಒಂದೇ ಕುಟುಂಬದ ನಿಷ್ಟೆಗಾಗಿ ನಿಮಗಾಗಿ ಇಲ್ಲಿ ಸ್ಥಾನ ಸಿಗಬಹುದು. ಆದರೆ ಕನಿಷ್ಟ ಜಗದ್ಗುರು ಬಸವೇಶ್ವರ ಜೀ ಅವರನ್ನು ಅವಮಾನ ಮಾಡಬೇಡಿ. ನಿಮಗೆ ಗೊತ್ತಿರಬೇಕು, ನೀವು ಕರ್ನಾಟಕಕ್ಕೆ ಸೇರಿದವರಾಗಿರುವುದರಿಂದ , ಆ ಜಗದ್ಗುರು ಬಸವೇಶ್ವರ ಅವರು ತಮ್ಮ ಕಾಲದಲ್ಲಿ, 12 ನೇ ಶತಮಾನದಲ್ಲಿ ಅನುಭವ ಮಂಟಪ ವ್ಯವಸ್ಥೆಯನ್ನು ಸ್ಥಾಪಿಸಿದರು. ಮತ್ತು ಎಲ್ಲ ನಿರ್ಧಾರಗಳನ್ನು , ಗ್ರಾಮೀಣ ಪ್ರಜಾಪ್ರಭುತ್ವ ರೀತಿಯಲ್ಲಿ ಕೈಗೊಂಡರು. ಎಲ್ಲಕ್ಕಿಂತ ಮಿಗಿಲಾಗಿ ಮಹಿಳಾ ಸಶಕ್ತೀಕರಣಕ್ಕೆ ಕ್ರಮಗಳನ್ನು ಕೈಗೊಂಡರು. ಈ ಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ಕಡ್ದಾಯವಾಗಿತ್ತು. ಅದು 12 ನೇ ಶತಮಾನದಲ್ಲಿ ಜಗದ್ಗುರು ಬಸವೇಶ್ವರಾಜಿ ಕಾಲದಲ್ಲಿ ಪ್ರಜಾಪ್ರಭುತ್ವ ಇತ್ತು. ಪ್ರಜಾಪ್ರಭುತ್ವ ನಮ್ಮ ರಕ್ತ ನಾಳಗಳಲ್ಲಿದೆ ಮತ್ತು ಅದು ನಮ್ಮ ಸಂಪ್ರದಾಯವೂ ಆಗಿದೆ. ಮತ್ತು ಬಿಹಾರದ ಚರಿತ್ರೆಯೂ ಇದನ್ನು ಸಾಕ್ಷೀಕರಿಸುತ್ತದೆ. ನಾವು ಲಿಚ್ಚಾವಿ ಸಾಮ್ರಾಜ್ಯದ ಪ್ರಾಚೀನ ಚರಿತ್ರೆಯತ್ತ ನೋಟ ಬೀರಿದರೆ , ಅಲ್ಲಿ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೊಂದು 2,500 ವರ್ಷಗಳ ಹಿಂದೆ ಇದ್ದದ್ದು ಗೋಚರಿಸುತ್ತದೆ. ಅದು ಪ್ರಜಾಪ್ರಭುತ್ವದ ವ್ಯವಸ್ಥೆ. ನಾವು ಜನರ ಒಪ್ಪಿಗೆ ಮತ್ತು ಭಿನ್ನಮತಕ್ಕೆ ಪ್ರಾತಿನಿಧ್ಯ ಕೊಟ್ಟಿದ್ದೇವೆ.
ನೀವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತೀರಾ ?. ಚುನಾವಣೆ ಸಂಧರ್ಭದಲ್ಲಿ ನಿಮ್ಮ ಪಕ್ಷದ ಸಚಿವರೊಬ್ಬರು , ಮನಮೋಹನ ಸಿಂಗ್ ಸರಕಾರದಲ್ಲಿದ್ದವರು ಮಾಧ್ಯಮಗಳ ಎದುರು ಏನೋ ಒಂದು ಹೇಳಿಕೆ ನೀಡಿದ್ದರು. ಅವರು ಹೇಳಿದ್ದರು-ಶಹಜಹಾನ್ ಜಹಾಂಗೀರ್ ಅವರನ್ನು ಸ್ಥಳಾಂತರಿಸಿದ, ಔರಂಗಜೇಬ್ ಶಹಜಹಾನ್ ಅವರನ್ನು ಸ್ಥಳಾಂತರಿಸಿ ಆಡಳಿತ ಕೈಗೆತ್ತಿಕೊಂಡ ಎಂದು. ಆ ಅವಧಿಯಲ್ಲಿ ಯಾವುದಾದರೂ ಚುನಾವಣೆ ನಡೆಯುತ್ತಿತ್ತೇ?. ಅಂತಹದೇ ಪ್ರಕರಣ ಈಗ ಇಲ್ಲಿದೆ. ನೀವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತೀರಾ?. ನಾನು ನಿಮ್ಮನ್ನು ಕೇಳಲು ಇಚ್ಚಿಸುತ್ತೇನೆ. ನೀವು ಮಾತನಾಡುತ್ತಿರುವ ಪ್ರಜಾಪ್ರಭುತ್ವ ಯಾವುದು? ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರನ್ನು ಎದುರುಗೊಳ್ಳಲು ಹೈದರಾಬಾದಿನ ವಿಮಾನ ನಿಲ್ದಾಣಕ್ಕೆ ಬಂದಿದ್ದ , ನಿಮ್ಮದೇ ಪಕ್ಷದ ಪರಿಶಿಷ್ಟ ಜಾತಿಯ ಮುಖ್ಯಮಂತ್ರಿಯನ್ನು ಅವಮಾನ ಮಾಡಿದರಲ್ಲ !. ನೀವು ಒಂದು ಕಡೆ ನೆಹರೂ ಜೀ ಹೆಸರಿನಲ್ಲಿ , ಇನ್ನೊಂದು ಕಡೆ ರಾಜೀವ್ ಗಾಂಧಿ ಹೆಸರಿನಲ್ಲಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ವ್ಯಕ್ತಪಡಿಸಿ ಮಾತನಾಡುತ್ತೀರಿ. ರಾಜೀವ್ ಗಾಂಧಿ ಅವರು ದಲಿತ ಮುಖ್ಯಮಂತ್ರಿ ಟಿ. ಆಂಜಯ್ಯ ಅವರನ್ನು ಅವಮಾನಿಸಿದ್ದರು. ಅವರು ಆಯ್ಕೆಯಾದ ಪ್ರತಿನಿಧಿಯಾಗಿದ್ದರು. ಆದರೂ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಅವಮಾನಿಸಲಾಗಿತ್ತು. ಈ ಅವಮಾನದ ಪರಿಣಾಮ ದಂತಕತೆಯಾಗಿರುವ ನಟ ಎನ್.ಟಿ.ರಾಮ ರಾವ್ ಅವರು ಚಲನ ಚಿತ್ರರಂಗ ಬಿಟ್ಟು ತೆಲುಗುದೇಶಂ ಪಕ್ಷ (ಟಿ.ಡಿ.ಪಿ.) ಸ್ಥಾಪನೆಗೆ ಕಾರಣರಾದರು. ನೀವು ನಮಗೆ ಪ್ರಜಾಪ್ರಭುತ್ವ ಬೋಧಿಸುತ್ತೀರಾ ?. ಈ ದೇಶದಲ್ಲಿ 90 ಬಾರಿ, 90 ಕ್ಕೂ ಅಧಿಕ ಬಾರಿ ಸೆಕ್ಷನ್ 356 ನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇಂತಹ ರಾಜ್ಯಗಳಲ್ಲಿ ಉದಯಿಸುತ್ತಿದ್ದ ಪಕ್ಷಗಳು ರಚಿಸಿದ ಸರಕಾರಗಳಿಗೆ ನೀವು ಹೊಡೆತವನ್ನು ಕೊಟ್ಟಿದ್ದೀರಿ. ನೀವು ಪಂಜಾಬಿನಲ್ಲಿ ಅಕಾಲಿದಳಕ್ಕೆ ಮಾಡಿದ್ದೇನು?. ತಮಿಳುನಾಡಿನಲ್ಲಿ ನೀವು ಮಾಡಿದ್ದೇನು ?. ಕೇರಳದಲ್ಲಿ ನೀವು ಮಾಡಿದ್ದೇನು? . ನೀವು ಈ ದೇಶದ ಪ್ರಜಾಪ್ರಭುತ್ವ ಬೆಳೆಯಲು ಬಿಡಲಿಲ್ಲ. ನಿಮ್ಮ ಕುಟುಂಬದ ಪ್ರಜಾಪ್ರಭುತ್ವ ಮಾತ್ರ ನಿಜವಾದ ಪ್ರಜಾಪ್ರಭುತ್ವ ಎಂದು ನೀವು ಭಾವಿಸಿದಿರಿ, ಮತ್ತು ನೀವು ದೇಶವನ್ನು ತಪ್ಪುದಾರಿಗೆ ಎಳೆಯುತ್ತಿದ್ದೀರಿ.
ಕಾಂಗ್ರೆಸ್ ಪಕ್ಷ ಅನುಸರಿಸುತ್ತಿರುವ ಪ್ರಜಾಪ್ರಭುತ್ವ ಯಾವುದು? . ಪ್ರಜಾಪ್ರಭುತ್ವವನ್ನು ತುಳಿದಾಗೆಲ್ಲ ಆತ್ಮದ ಧ್ವನಿ ಏಳುತ್ತದೆ. ನಿಮಗೆ ಗೊತ್ತಿದೆ. ನೀಲಂ ಸಂಜೀವ ರೆಡ್ಡಿಯವರನ್ನು ಕಾಂಗ್ರೆಸ್ ಪಕ್ಷವು ರಾಷ್ಟ್ರಪತಿ ಅಭ್ಯರ್ಥಿ ಎಂದು ಆಯ್ಕೆ ಮಾಡಿತ್ತು. ಮತ್ತು ರಾತ್ರಿ ಬೆಳಗಾಗುವುದರೊಳಗೆ ಅವರಿಗೆ ಬೆನ್ನಿಗೆ ಇರಿಯಲಾಯಿತು. ಅಭ್ಯರ್ಥಿ ಸೋಲುಂಡರು. ಗಮನಿಸಿ ಅವರು ಕೂಡಾ ಆಂಧ್ರದವರು. ನೀವು ಸಂಜೀವ ರೆಡ್ಡಿಯವರನ್ನು ಮತ್ತು ಟಿ. ಅಂಜಯ್ಯ ಅವರನ್ನು ಅವಮಾನಿಸಿದಿರಿ. ನೀವು ಹೇಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತೀರಿ ?. ಅದು ಮಾತ್ರವಲ್ಲ, ಡಾ. ಮನಮೋಹನ್ ಸಿಂಗ್ ಈ ದೇಶದ ಮಾಜಿ ಪ್ರಧಾನ ಮಂತ್ರಿಗಳು. ಅವರು ಸಂಪುಟದ ಜತೆಗೂಡಿ ಒಂದು ನಿರ್ಧಾರ ಕೈಗೊಂಡಿದ್ದರು ಮತ್ತು ನಿಮ್ಮ ಪಕ್ಷದ ಓರ್ವ ಪದಾಧಿಕಾರಿ ಮನಮೋಹನ್ ಸಿಂಗ್ ಸಂಪುಟ ಅಂಗೀಕರಿಸಿದ ಆದ್ಯಾದೇಶಗಳನ್ನು ಹರಿದು ಹಾಕಿದರು. ನಿಮ್ಮ ಬಾಯಿಯಿಂದ ಪ್ರಜಾಪ್ರಭುತ್ವ ಶಬ್ದ ಕೇಳುವುದು ಅಷ್ಟೊಂದು ಹಿತವೆನಿಸದು. ಆದ್ದರಿಂದ ದಯವಿಟ್ಟು ನಮಗೆ ಪ್ರಜಾಪ್ರಭುತ್ವದ ಪಾಠ ಕಲಿಸಬೇಡಿ.
ನಾನು ನಿಮ್ಮೆಲ್ಲರಿಗೂ ಇನ್ನೊಂದು ಘಟನೆಯನ್ನು ಇಂದು ನೆನಪು ಮಾಡಲು ಇಚ್ಚಿಸುತ್ತೇನೆ. ಕಾಂಗ್ರೆಸ್ ಪಕ್ಷದಲ್ಲಿ ಅದರ ನಾಯಕನನ್ನು ಆಯ್ಕೆ ಮಾಡುವ ಚುನಾವಣೆಗಳು ನಡೆಯುತ್ತಿದ್ದವು ಎನ್ನುವುದು ಸತ್ಯವಲ್ಲವೇ ?. 15 ಕಾಂಗ್ರೆಸ್ ಸಮಿತಿಗಳ ಪೈಕಿ, 12 ಸಮಿತಿಗಳು ಸರ್ದಾರ್ ವಲ್ಲಭಭಾಯಿ ಪಟೇಲರನ್ನು ಆಯ್ಕೆ ಮಾಡಿದ್ದವಲ್ಲ. ಮೂರು ಸಮಿತಿಗಳು ನೋಟಾ ಆಯ್ಕೆ ಮಾಡಿದವು. ಅಂದರೆ ಅವುಗಳು ಯಾರಿಗೂ ಮತ ನೀಡದಿರುವ ನಿರ್ಧಾರ ಕೈಗೊಂಡವು. ಆದಾಗ್ಯೂ ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ನಾಯಕತ್ವ ನೀಡಲಿಲ್ಲ. ಅದೆಂತಹ ಪ್ರಜಾಪ್ರಭುತ್ವವಾಗಿತ್ತು. ?. ಬದಲಾಗಿ ಪಂಡಿತ್ ನೆಹರೂ ಆಯ್ಕೆಯಾದರು. ಸರ್ದಾರ್ ವಲ್ಲಭಭಾಯೀ ಪಟೇಲರು ಮೊದಲ ಪ್ರಧಾನ ಮಂತ್ರಿಯಾಗಿದ್ದರೆ ಕಾಶ್ಮೀರದ ಭಾಗ ಇಂದು ಪಾಕಿಸ್ತಾನದ ನಿಯಂತ್ರಣದಲ್ಲಿ ಇರುತ್ತಿರಲಿಲ್ಲ.
ಇತ್ತೀಚೆಗೆ ಡಿಸೆಂಬರ್ ತಿಂಗಳಲ್ಲಿ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ನಡೆಯಿತು. ಅದು ಚುನಾವಣೆಯಾಗಿತ್ತೇ ಅಥವಾ ಪಟ್ಟಾಭಿಷೇಕವಾಗಿತ್ತೇ ?. ನಿಮ್ಮ ಪಕ್ಷದ ಯುವಕ ತಾನು ಅಭ್ಯರ್ಥಿಯಾಗಲು ಅರ್ಜಿ ಸಲ್ಲಿಸುವುದಾಗಿ ದ್ವನಿ ಎತ್ತಿದ. ನೀವು ಆತನಿಗೆ ಅವಕಾಶವನ್ನೇ ಕೊಡಲಿಲ್ಲ. ಮತ್ತು ನೀವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿದ್ದೀರಿ. ನನಗೆ ಖಚಿತವಾಗಿ ಗೊತ್ತಿದೆ. ಈ ರೀತಿಯ ದ್ವನಿಯನ್ನು ಅಡಗಿಸುವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಟೀಕೆಯನ್ನು ಎದುರಿಸುವ ಧೈರ್ಯ ಇರಬೇಕು. ಆದ್ದರಿಂದ ಸ್ಪೀಕರ್ ಮೇಡಂ , ಪ್ರತ್ಯೇಕ ಕೆಲಸದ ಸಂಸ್ಕೃತಿ ನಮ್ಮ ಸರಕಾರದ ವೈಶಿಷ್ಟ್ಯ. ನಾವು ಬರೇ ಹೊಸ ಯೋಜನೆಗಳನ್ನು ಘೋಷಿಸುವುದರಲ್ಲಾಗಲೀ, ಪತ್ರಿಕೆಗಳಲ್ಲಿ ಆ ಮೂಲಕ ಮುಖ್ಯಾಂಶದ ಸುದ್ದಿಯಾಗಿ ಕಂಗೊಳಿಸುವುದರಲ್ಲಾಗಲೀ , ಮತ್ತು ಈ ರೀತಿಯಲ್ಲಿ ಸಾರ್ವಜನಿಕರನ್ನು ವಂಚಿಸುವುದರಲ್ಲಾಗಲೀ ಆಸಕ್ತಿ ಹೊಂದಿಲ್ಲ.. ಇದು ನಮ್ಮ ಕೆಲಸದ ಸಂಸ್ಕೃತಿ ಅಲ್ಲ. ನಾವು ಸಾಧಿಸಲು ಶಕ್ಯ ಇರುವ ಸಂಗತಿಗಳನ್ನಷ್ಟೇ ಘೋಷಿಸುತ್ತೇವೆ. ಹಿಂದಿನ ಸರಕಾರದ ಅವಧಿಯಲ್ಲಿ ಬಾಕಿಯುಳಿದಿರುವ ಎಲ್ಲಾ ಕೆಲಸಗಳನ್ನು ಪೂರೈಸಲು ನಾವು ಪ್ರಯತ್ನಿಸುತ್ತೇವೆ. ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ಸರಕಾರಗಳು ಬರುತ್ತವೆ ಮತ್ತು ಹೋಗುತ್ತವೆ. ಆದರೆ ದೇಶ ಎಂದೆಂದಿಗೂ ಇರುತ್ತದೆ. ನಾವು ಆ ತತ್ವದಲ್ಲಿ ನಂಬಿಕೆ ಇಟ್ಟವರು. ಇವೆಲ್ಲ ಅದೇ ಕಡತಗಳು, ಅವೇ ಅಧಿಕಾರಿಗಳು ಎಂಬುದು ಸತ್ಯವಲ್ಲವೇ ?. ಹಿಂದಿನ ಸರಕಾರ ದಿನವೊಂದಕ್ಕೆ ಬರೇ 11 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸುತ್ತಿತ್ತು. ಆದರೆ ಇಂದು ದಿನವೊಂದಕ್ಕೆ 22 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿದೆ. ರಸ್ತೆಗಳನ್ನು ಎಲ್ಲಾ ಸರಕಾರಗಳು ನಿರ್ಮಿಸುತ್ತವೆ. ಹಿಂದಿನ ಸರಕಾರ 80,000 ಕಿಲೋ ಮೀಟರ್ ರಸ್ತೆಯನ್ನು ಅದರ ಅಧಿಕಾರದ ಕೊನೆಯ ಮೂರು ವರ್ಷಗಳಲ್ಲಿ ನಿರ್ಮಿಸುತ್ತಿತ್ತು. ಮತ್ತು ನಾವು 1 ಲಕ್ಷದ 20 ಸಾವಿರ ಕಿಲೋ ಮೀಟರ್ ರಸ್ತೆಯನ್ನು ಕಳೆದ ಮೂರು ವರ್ಷಗಳಲ್ಲಿ ನಿರ್ಮಿಸಿದ್ದೇವೆ. ಹಿಂದಿನ ಸರಕಾರದ ಕೊನೆಯ ಮೂರು ವರ್ಷಗಳ ಆಡಳಿತದಲ್ಲಿ 1,100 ಕಿಲೋ ಮೀಟರ್ ಹೊಸ ರೈಲು ಮಾರ್ಗವನ್ನು ನಿರ್ಮಿಸಲಾಯಿತು. ಆದರೆ ನಮ್ಮ ಸರಕಾರ 3 ವರ್ಷಗಳಲ್ಲಿ 2,100 ಕಿಲೋ ಮೀಟರ್ ರೈಲು ಮಾರ್ಗವನ್ನು ನಿರ್ಮಿಸಿತು.ಹಿಂದಿನ ಸರಕಾರ ಮೂರು ವರ್ಷಗಳಲ್ಲಿ 2,500 ಕಿಲೋ ಮೀಟರ್ ರೈಲು ಮಾರ್ಗವನ್ನು ವಿದ್ಯುದ್ದೀಕರಿಸಿತು. ಆದರೆ ಈ ಸರಕಾರ 3 ವರ್ಷದಲ್ಲಿ 4,300 ಕೀ.ಮೀ.ಗೂ ಅಧಿಕ ರೈಲು ಮಾರ್ಗವನ್ನು ವಿದ್ಯುದ್ದೀಕರಿಸಿತು. ಆಪ್ಟಿಕಲ್ ಫೈಬರ್ ಜಾಲ- ಈಗ ನೀವು ಹೇಳಬಹುದು, ಈ ಯೋಜನೆ ರೂಪಿಸಿದವರು ನಾವು ಎಂದು. ಮತ್ತು ಅದರ ಖ್ಯಾತಿ ನಮಗೆ ದಕ್ಕಬೇಕು ಎಂದೂ ಹೇಳಬಹುದು. ನೀವು ಕೆಲಸ ಮಾಡಲು ಅನುಸರಿಸಿದ ಹಾದಿ ಯಾವುದು ?. ನೀವು ವಿಭಜನವಾದಿ ರಾಜಕೀಯದಲ್ಲಿ ನಂಬಿಕೆ ಇಟ್ಟಿರಿ. 2011 ಮತ್ತು 2014 ರ ನಡುವೆ ನೀವು 59 ಪಂಚಾಯತ್ ಗಳಿಗೆ ಮಾತ್ರವೇ ಆಪ್ಟಿಕಲ್ ಫೈಬರ್ ಕೇಬಲ್ ಜಾಲ ಹರಡಿದಿರಿ. ನಾವು ಆಯ್ಕೆಯಾದ ಬಳಿಕ ಅದನ್ನು 1 ಲಕ್ಷ ಪಂಚಾಯತ್ ಗಳಿಗೆ ಒದಗಿಸಿದ್ದೇವೆ. ಅದೂ ಕಡಿಮೆ ಅವಧಿಯಲ್ಲಿ. ಒಂದೆಡೆ ಮೂರು ವರ್ಷಗಳಲ್ಲಿ 60 ಗ್ರಾಮಗಳಿಗೂ ಕಡಿಮೆ ಇವೆ. ಇನ್ನೊಂದೆಡೆ 3 ವರ್ಷಗಳಲ್ಲಿ 1 ಲಕ್ಷಕ್ಕೂ ಅಧಿಕ ಗ್ರಾಮಗಳಿವೆ. ಈ ಅಂಕಿ ಅಂಶಗಳು ಹೋಲಿಕೆಗಿಂತ ಬಹಳ ದೂರದಲ್ಲಿವೆ. ಹಿಂದಿನ ಸರಕಾರ 939 ನಗರಗಳಲ್ಲಿ ಶಹರಿ ಆವಾಸ್ ಯೋಜನಾ ಜಾರಿಗೆ ತಂದಿತು. ಇಂದು ಪ್ರಧಾನ ಮಂತ್ರಿ ಆವಾಸ್ ಯೋಜನಾ (ನಗರ) 4320 ನಗರಗಳಲ್ಲಿ ಅನುಷ್ಟಾನಕ್ಕೆ ಬರುತ್ತಿದೆ. ನಿಮ್ಮ ಅಂಕಿ ಅಂಶಗಳು ಸಾವಿರಕ್ಕೂ ಕಡಿಮೆ, ನಮ್ಮ ಅಂಕಿ ಅಂಶಗಳು 4000 ಕ್ಕೂ ಅಧಿಕ. ಹಿಂದಿನ ಸರಕಾರ ಮೂರು ವರ್ಷಗಳಲ್ಲಿ 12,000 ಮೆ.ವಾ. ಪುನರ್ಬಳಕೆ ವಿದ್ಯುತ್ ಸಾಮರ್ಥ್ಯವನ್ನು ಸೇರಿಸಿದ್ದರೆ, ಈ ಸರಕಾರ ಮೂರು ವರ್ಷಗಳಲ್ಲಿ 22,000 ಮೆ.ವಾ. ಗೂ ಅಧಿಕ ಪುನರ್ಬಳಕೆ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸೇರಿಸಿದೆ. ಶಿಪ್ಪಿಂಗ್ ಉದ್ಯಮ, ಸರಕು ನಿರ್ವಹಣೆ, ಋಣಾತ್ಮಕ ಬೆಳವಣಿಗೆಯಲ್ಲಿತ್ತು. ಈ ಸರಕಾರದಲ್ಲಿ ಈ ವಲಯ 11 % ಗೂ ಅಧಿಕ ಬೆಳವಣಿಗೆಯನ್ನು ಕಳೆದ 3 ವರ್ಷಗಳಲ್ಲಿ ತೋರಿಸಿದೆ. ನೀವು ನಿಜ ಸ್ಥಿತಿಯ ಬಗ್ಗೆ ಜಾಗೃತರಾಗಿದ್ದರೆ, ನೀವು ಇಂತಹ ಗೊಂದಲ , ಗೋಜಲುಗಳಿಗೆ, ಬೀಳುತ್ತಿರಲಿಲ್ಲ. ಖರ್ಗೆ ಜೀ ಈ ಎರಡು ಸಂಗತಿಗಳನ್ನು ಪ್ರಸ್ತಾವಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ರೈಲ್ವೇ ಮತ್ತು ಕರ್ನಾಟಕವನ್ನು ಅವರು ಪ್ರಸ್ತಾವಿಸಿದ್ದಾರೆ. ನೀವು ಬೀದರ್ –ಗುಲಬರ್ಗಾ ರೈಲು ಮಾರ್ಗವನ್ನು ಪ್ರಸ್ತಾವಿಸಿದಿರಿ. ದೇಶ ಸತ್ಯವನ್ನು ತಿಳಿಯಬೇಕು. ಇದನ್ನು ಕಾಂಗ್ರೆಸ್ ಪ್ರಸ್ತಾವಿಸಿರಲಿಲ್ಲ. ಉದ್ಘಾಟನಾ ಸಮಾರಂಭದಲ್ಲಿ ಇದನ್ನು ಹೇಳಿರಲಿಲ್ಲ. ನೀವು ವಸ್ತುಸ್ಥಿತಿಯನ್ನು ಒಪ್ಪಲೇಬೇಕು. 110 ಕಿಲೋ ಮೀಟರ್ ಉದ್ದದ ರೈಲ್ವೇ ಮಾರ್ಗದ ಯೋಜನೆಯನ್ನು ಅಂಗೀಕರಿಸಿದ್ದು ಅಟಲ್ ಬಿಹಾರಿ ವಾಜಪೇಯಿ ಜೀ ಅವರ ಸರಕಾರ. ನಿಮ್ಮ ಸರಕಾರ 2013 ರ ವರೆಗೆ ಅಧಿಕಾರದಲ್ಲಿತ್ತು. ಮತ್ತು ನೀವು ರೈಲ್ವೇ ಸಚಿವರಾಗಿದ್ದಿರಿ. ಅದು ನಿಮ್ಮ ಸಂಸದೀಯ ಕ್ಷೇತ್ರ. ಅಟಲ್ ಜೀ ಅವರ ಸರಕಾರದ ಬಳಿಕ ಹಲವು ವರ್ಷಗಳು ಕಳೆದುಹೋದವು.ಮತ್ತು ಬರೇ 37 ಕಿಲೋ ಮೀಟರ್ ಮಾತ್ರ ಹೊಸ ರೈಲು ಮಾರ್ಗ ನಿರ್ಮಾಣವಾಗಿತ್ತು. ಬರೇ 37 ಕಿಲೋ ಮೀಟರ್. !. ಅದಕ್ಕಿಂತ ಹೆಚ್ಚಾಗಿ ಈ ಸಣ್ಣ ಕೆಲಸವನ್ನು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮಾಡಲಾಯಿತು. ಕೇಂದ್ರ ಸರಕಾರದ ಆಗ್ರಹಗಳಿಗೆ ಅವರು ಒಪ್ಪಿಗೆ ನೀಡಿದರು. ಆ ಬಳಿಕವಷ್ಟೇ ಅಟಲ್ ಜೀ ಅವರ ಕನಸಿನ ಯೋಜನೆಯ ನಿಟ್ಟಿನಲ್ಲಿ ನಿಮ್ಮ ಸರಕಾರ ಮುಂದಡಿ ಇಟ್ಟಿತು. ಎಲ್ಲಕ್ಕಿಂತ ಹೆಚ್ಚಾಗಿ ಅದು ಚುನಾವಣೆಗಳ ಕಾಲವಾಗಿತ್ತು. ಈ ರೈಲ್ವೇ ಮಾರ್ಗದ ಕಾಮಗಾರಿ ಆರಂಭಿಸುವುದು ನಿಮ್ಮ ಚುನಾವಣೆಗಳಿಗೆ ಅನುಕೂಲಕರವಾಗಬಹುದು ಎಂದು ನೀವು ಭಾವಿಸಿದಿರಿ. 110 ಕಿಲೋ ಮೀಟರಿಗೆ ಬದಲಾಗಿ ನೀವು ಬರೇ 30.5 ಕಿಲೋ ಮೀಟರ್ ರೈಲ್ವೇ ಮಾರ್ಗಕ್ಕೆ ಸಂತೋಷಪಟ್ಟಿರಿ. ಉಳಿದದ್ದನ್ನು ನಾವು ಕ್ರಮ ಕೈಗೊಂಡು ಪೂರ್ಣಗೊಳಿಸಿದೆವು. ಉಳಿದ 72 ಕಿಲೋ ಮೀಟರ್ ರೈಲು ಮಾರ್ಗವನ್ನು ಸ್ವಲ್ಪವೇ ಅವಧಿಯಲ್ಲಿ ನಾವು ಪೂರ್ಣಗೊಳಿಸಿದೆವು. ಅದು ವಿರೋಧ ಪಕ್ಷದವರ ಸಂಸದೀಯ ಕ್ಷೇತ್ರದಲ್ಲಿದೆ ಎಂಬ ಕಾರಣಕ್ಕೆ ನಾವು ಈ ಯೋಜನೆಯನ್ನು ನಿರ್ಲಕ್ಷಿಸುವ ಯೋಚನೆಯನ್ನೇ ಮಾಡಲಿಲ್ಲ. ಅದು ನಿಮ್ಮ ಮತ ಕ್ಷೇತ್ರ. ಆದರೆ ಕೆಲಸ ಆಗಬೇಕಿರುವುದು ದೇಶದ ಕೆಲಸ. ನಾವು ದೇಶದ ಒಳಿತಿಗಾಗಿ ಕೆಲಸವನ್ನು ಪೂರ್ಣಗೊಳಿಸಿದೆವು. ನಾನು ಈ ಮಾರ್ಗವನ್ನು ಉದ್ಘಾಟಿಸಿದೆ ಎಂಬ ಕಾರಣಕ್ಕಾಗಿ ನಿಮಗೆ ನೋವಾಯಿತು. ಈ ನೋವಿಗೆ ಮದ್ದೆಂದರೆ, ನಾನು ನಂಬಿದ ಹಾಗೆ, ಈ ದೇಶದ ಜನರು ನಿಮಗೆ ಬಹಳ ಹಿಂದೆಯೇ ಕೊಟ್ಟಿದ್ದಾರೆ.
ಸ್ಪೀಕರ್ ಮೇಡಂ,
ಬರ್ಮಾರಿನ ತೈಲ ಶುದ್ದೀಕರಣಾಗಾರದ ವಿಷಯ ಚರ್ಚೆಯಾಯಿತು. ಚುನಾವಣೆಗೆ ಮೊದಲು ಬರೇ ಶಿಲಾನ್ಯಾಸ ಮಾಡಿದರೆ ಸಾಕು. ಅದು ಚುನಾವಣೆಯನ್ನು ಗೆಲ್ಲಲ್ಲು ಸಹಾಯ ಮಾಡುತ್ತದೆ ಎಂದು ಯೋಚಿಸಿದರು. ಬರ್ಮಾರಿನ ಶುದ್ದೀಕರಣಾಗಾರಕ್ಕೆ ನೀವು ಶಿಲಾನ್ಯಾಸ ಮಾಡಿದಿರಿ. ನಾವು ಅಧಿಕಾರಕ್ಕೆ ಬಂದು ಕಾಗದ ಪತ್ರಗಳನ್ನು ನೋಡಿದಾಗ ಸತ್ಯಾಂಶ ತಿಳಿಯಿತು. ತೈಲ ಶುದ್ದೀಕರಣಾಗಾರಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ. ಇದೆಲ್ಲವೂ ಕಾಗದ ಪತ್ರಗಳಲ್ಲಿತ್ತು, ಆ ನೆಲದಲ್ಲಿ ಏನೇನೂ ಇರಲಿಲ್ಲ. ಅಲ್ಲಿ ಅನುಮೋದನೆ ಇರಲಿಲ್ಲ. ಭೂಮಿಯೂ ಇರಲಿಲ್ಲ. ಕೇಂದ್ರ ಸರಕಾರದ ಜತೆ ಅಂತಿಮ ಒಪ್ಪಂದವೂ ಆಗಿರಲಿಲ್ಲ. ಕೇಂದ್ರ ಸರಕಾರ ಮತ್ತು ರಾಜಸ್ಥಾನ ಸರಕಾರಗಳು ನಿಮ್ಮ ತಪ್ಪುಗಳನ್ನು ಸರಿ ಮಾಡಲು ಬಹಳ ತ್ರಾಸ ಅನುಭವಿಸಬೇಕಾಯಿತು. ಮತ್ತು ಯೋಜನೆಗೆ ಒಂದು ಆಕಾರ ನೀಡಲು ಹರಸಾಹಸ ಮಾಡಬೇಕಾಯಿತು. ಎಲ್ಲವನ್ನು ಸರಿಪಡಿಸಿದ ಬಳಿಕ ನಾವು ಈಗ ಈ ಕೆಲಸವನ್ನು ಕೈಗೆತ್ತಿಕೊಂಡಿದ್ದೇವೆ.
ನಾನು ಅಸ್ಸಾಂನಲ್ಲಿಯ ಧೋಲಾ ಸಾಡಿಯಾ ಸೇತುವೆಯನ್ನು ಉದ್ಘಾಟನೆ ಮಾಡುವಾಗ ಅದು ಕೆಲವರಿಗೆ ಹಿತ ಎಂದೆನಿಸಲಿಲ್ಲ. ಅವರು ಅದು ನಾವು ಆರಂಭಿಸಿದ ಕೆಲಸ ಎಂದು ಹೇಳತೊಡಗಿದರು. ಈ ಯೋಜನೆಯ ಕಲ್ಪನೆಯನ್ನು ಮಾಡಿ , ಅದಕ್ಕೆ ಅನುಮೋದನೆ ನೀಡಿದ್ದು ವಾಜಪೇಯಿ ಸರಕಾರ ಎಂಬುದನ್ನು ಪ್ರಸ್ತಾವಿಸುವ ಪ್ರಾಮಾಣಿಕತೆಯನ್ನು ಅವರು ತೋರಿಸಲಿಲ್ಲ. ಓರ್ವ ಬಿಜೆಪಿ ನಾಯಕರು ವಿಸ್ತಾರವಾದ ಅಧ್ಯಯನದ ಬಳಿಕ ಅದನ್ನು ಹೇಳಿದರು. 2014 ರ ಬಳಿಕ ನಾವು ಅಧಿಕಾರಕ್ಕೆ ಬಂದಾಗ , ಈಶಾನ್ಯ ಭಾರತದ ಅಭಿವೃದ್ದಿಗೆ ಆದ್ಯತೆ ಕೊಡತೊಡಗಿದೆವು ಮತ್ತು ಕೆಲಸವನ್ನು ತ್ವರಿತಗೊಳಿಸಿದೆವು. ಇದರ ಪರಿಣಾಮ ಸೇತುವೆಯ ಕನಸು ನನಸಾಯಿತು. ಈ ಸರಕಾರ ಅತ್ಯಂತ ಉದ್ದದ ಸುರಂಗವನ್ನು, ಉದ್ದದ ಅನಿಲ ಕೊಳವೆ ಮಾರ್ಗವನ್ನು, ಸಮುದ್ರದ ಮೇಲೆ ಉದ್ದದ ಸೇತುವೆಯನ್ನು , ಅತ್ಯಂತ ವೇಗದ ರೈಲು ಯೋಜನೆಯನ್ನು ಸಾಕಾರಗೊಳಿಸಲು ಆರಂಭಿಕ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಲು ನನಗೆ ಹೆಮ್ಮೆ ಇದೆ. ಇಂತಹ ನಿರ್ಧಾರಗಳನ್ನು ಈ ಸರಕಾರ ಮಾತ್ರ ಕೈಗೊಳ್ಳಬಲ್ಲುದು. ಮತ್ತು ನಿಗದಿತ ಕಾಲಮಿತಿಯೊಳಗೆ ಸಾಕಷ್ಟು ಕೆಲಸ ಆಗಿದೆ. ಆದುದರಿಂದ ಈ ಅವಧಿಯಲ್ಲಿ ದಾಖಲೆ 104 ಉಪಗ್ರಹಗಳನ್ನು ಒಟ್ಟಾಗಿ ನಭಕ್ಕೆ ಕಳುಹಿಸಲಾಯಿತು.
ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಪ್ರಸ್ತಾವಿಸಿದ ವಸ್ತುಸ್ಥಿತಿಯನ್ನು ನಾವು ನಿರಾಕರಿಸಲಾರೆವು. ಪ್ರಜಾಪ್ರಭುತ್ವ ಯಾವ ರೀತಿ ಇದೆ ಮತ್ತು ಸರಕಾರದಲ್ಲಿರುವ ಪ್ರತೀಯೊಬ್ಬರಿಗೂ ಹೇಗೆ ಗೌರವ ಸಲ್ಲುತ್ತದೆ ಎಂಬುದನ್ನು ನಾನು ವಿವರಿಸುತ್ತೇನೆ. ಕೆಂಪು ಕೋಟೆಯಿಂದ ಪ್ರತೀಯೊಬ್ಬ ಪ್ರಧಾನ ಮಂತ್ರಿ ಮಾಡಿದ ಭಾಷಣದತ್ತ ಗಮನಹರಿಸಿ, ಯಾರಾದರೂ ಪ್ರತೀ ಸರಕಾರವು ಒಂದಲ್ಲ ಒಂದು ರೀತಿಯ ಕೊಡುಗೆ ನೀಡಿದೆ ಎಂದು ಹೇಳಿದ್ದಾರೆಯೇ ?. ಯಾರೇ ಕಾಂಗ್ರೆಸ್ ನಾಯಕರು ಹೀಗೆ ಒಪ್ಪಿಕೊಂಡು ಹೇಳಿದ್ದಾರೆಯೇ?. ಈ ನರೇಂದ್ರ ಮೋದಿ ಎಲ್ಲ ಹಿಂದಿನ ಸರಕಾರಗಳೂ, ರಾಜ್ಯ ಸರಕಾರಗಳೂ ಹಾಗು ನಾಗರಿಕರೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ. ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳುವ ಧೈರ್ಯ ನಮಗಿದೆ. ಇದು ನಮ್ಮ ಗುಣ.
ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ , ಆ ಅವಧಿಯಲ್ಲಿ ನಾವು ಗುಜರಾತಿನ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದೆವು. ಸುವರ್ಣ ಮಹೋತ್ಸವ ವರ್ಷ ಆಚರಣೆಯ ಕಾರ್ಯಕ್ರಮದಲ್ಲಿ ರಾಜ್ಯಪಾಲರ ಭಾಷಣಗಳೂ ಇದ್ದವು. ರಾಜ್ಯಪಾಲರ ಭಾಷಣಗಳು ಎಂದರೇನು?. ರಾಜ್ಯಪಾಲರ ಭಾಷಣಗಳೆಂದರೆ ಅವು ರಾಷ್ಟ್ರಪತಿಗಳ ಭಾಷಣದಂತೆ. ಅವು ಸರಕಾರದ ಕಾರ್ಯಚಟುವಟಿಕೆಗಳನ್ನು ಹೇಳುತ್ತವೆ. ರಾಜ್ಯಪಾಲರ ಭಾಷಣವು ಆ ಅವಧಿಯಲ್ಲಿ ರಾಜ್ಯ ಸರಕಾರ ಮಾಡಿದ ಕೆಲಸವನ್ನು ಪ್ರದರ್ಶಿಸುತ್ತದೆ ಅಥವಾ ತೋರಿಸುತ್ತದೆ. ಆದಾಗ್ಯೂ ಗುಜರಾತ್ ರಾಜ್ಯ ರೂಪುಗೊಂಡು 50 ವರ್ಷಗಳವರೆಗೆ ಅಲ್ಲಿ ಕಾಂಗ್ರೆಸ್ ಆಡಳಿತ ಇತ್ತು. ಮತ್ತು ಆ ಅವಧಿಯ ಎಲ್ಲಾ ರಾಜ್ಯಪಾಲರ ಭಾಷಣಗಳನ್ನು ವಿಸ್ತಾರವಾಗಿ ನಾವು ಪ್ರಮುಖ ವಿಷಯಗಳನ್ನಾಗಿಸಿದೆವು. ಇದನ್ನು ಪ್ರಜಾಪ್ರಭುತ್ವ ಎನ್ನುತ್ತಾರೆ.!. ನೀವು ಹೇಳಿಕೊಳ್ಳುತ್ತೀರಿ-ಎಲ್ಲವನ್ನೂ ನಾವೇ ಮಾಡಿದ್ದು ಮತ್ತು ಆ ಕುಟುಂಬ ಮಾಡಿದ್ದು ಎಂದು. !. ಇಂದು ನೀವು ಅಲ್ಲಿ ಕುಳಿತುಕೊಳ್ಳಬೇಕಾಗಿ ಬಂದಿರುವುದಕ್ಕೆ ಮುಖ್ಯ ಕಾರಣ ಈ ಮನಸ್ಥಿತಿ. !. ನೀವು ದೇಶವನ್ನು ಗಮನಿಸುವುದಿಲ್ಲ. ಇಂದು ರೈಲ್ವೇ ಮಾರ್ಗಗಳನ್ನು ಬಹಳ ವೇಗವಾಗಿ ವಿಸ್ತರಿಸಲಾಗುತ್ತಿದೆ. ಬಂದರು ಅಭಿವೃದ್ದಿ ಆದ್ಯತೆಯ ಪಟ್ಟಿಯಲ್ಲಿದೆ. ಅನಿಲ ಕೊಳವೆ ಮಾರ್ಗಗಳನ್ನು ಹಾಕಲಾಗುತ್ತಿದೆ. ಬಾಗಿಲು ಹಾಕಿದ್ದ ರಸಗೊಬ್ಬರ ಕಾರ್ಖಾನೆಗಳನ್ನು ಮರಳಿ ಕಾರ್ಯಾರಂಭ ಮಾಡಲಾಗಿದೆ. ಕೋಟ್ಯಾಂತರ ಮನೆಗಳಲ್ಲಿ ಶೌಚಾಲಯಗಳನ್ನು ಕಟ್ಟಲಾಗುತ್ತಿದೆ. ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ.
ನಾನು ಕಾಂಗ್ರೆಸ್ ಪಕ್ಷದಲ್ಲಿರುವ ನನ್ನ ಸ್ನೇಹಿತರಿಗೆ ಹೇಳಬಯಸುತ್ತೇನೆ, ಮತ್ತು ಉದ್ಯೋಗ ಹಾಗು ನಿರುದ್ಯೋಗಕ್ಕೆ ಸಂಬಂಧ ಪಟ್ಟ ಜನರನ್ನು ಕೇಳ ಬಯಸುತ್ತೇನೆ. ನೀವು ನಿರುದ್ಯೋಗದ ಅಂಕಿ ಅಂಶಗಳನ್ನು ಪ್ರಸ್ತಾವಿಸಿದಾಗೆಲ್ಲಾದನ್ನು ನೀವು ಇಡೀ ದೇಶಕ್ಕೆ ಸಂಬಂಧಿಸಿದಂತೆ ಕೊಡುತ್ತೀರಿ. ಆಗ ನೀವು ಇಡೀ ದೇಶದ ಉದ್ಯೋಗಗಳ ಬಗ್ಗೆ ಯಾಕೆ ಅಂಕಿ ಅಂಶ ಕೊಡುವುದಿಲ್ಲ.?. ಈಗ ನೀವು ನನ್ನನ್ನು ನಂಬಲಾರಿರಿ. ನಾನು ಕೆಲವು ಸಂಗತಿಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ನೀವು ದಾಖಲೆಗಳನ್ನು ಪರಿಶೀಲಿಸಬಹುದು. ಪಶ್ಚಿಮ ಬಂಗಾಳ ಸರಕಾರ, ಕರ್ನಾಟಕ ಸರಕಾರ, ಒಡಿಶಾ ಸರಕಾರ, ಮತ್ತು ಕೇರಳ ಸರಕಾರಗಳು 3-4 ವರ್ಷಗಳಲ್ಲಿ ಒಂದು ಕೋಟಿ ಜನರಿಗೆ ಉದ್ಯೋಗ ನೀಡಲಾಗಿದೆ ಎಂದು ಹೇಳಿಕೊಂಡಿವೆ. ನಮ್ಮ ಪಕ್ಷ ಅಲ್ಲಿಯ ಸರಕಾರಗಳನ್ನು ನಡೆಸುತ್ತಿಲ್ಲ. ಎನ್.ಡಿ.ಎ. ಕೂಡಾ ಅಲ್ಲಿಲ್ಲ. ಹಾಗಿದ್ದರೂ ಕೂಡಾ ನೀವು ಈ ಅಂಶವನ್ನು ನಿರಾಕರಿಸಬಲ್ಲಿರಾ?. ನೀವು ಇದನ್ನು ಉದ್ಯೋಗ ಎಂದು ಪರಿಗಣಿಸುವುದಿಲ್ಲವೇ ?. ಇಲ್ಲಿ ನಾನು ದೇಶದ ಅಭಿವೃದ್ದಿ ಹೊಂದಿದ ರಾಜ್ಯಗಳ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿ ಅಥವಾ ಎನ್.ಡಿ.ಎ. ಆಡಳಿತ ನಡೆಸುತ್ತಿರುವ ರಾಜ್ಯಗಳ ಬಗ್ಗೆಯೂ ನಾನು ಮಾತನಾಡುತ್ತಿಲ್ಲ.ನಾನು ನಿಮ್ಮ ಪಕ್ಷಗಳು ಮತ್ತು ನಿಮ್ಮ ಮಿತ್ರ ಪಕ್ಷಗಳು ನಡೆಸುತ್ತಿರುವ ಸರಕಾರ ಇರುವ ರಾಜ್ಯಗಳ ಬಗ್ಗೆ ಮಾತ್ರವೇ ಮಾತನಾಡುತ್ತಿದ್ದೇನೆ. ಅವರು ಉದ್ಯೋಗಾವಕಾಶಗಳಲ್ಲಿ ಹೆಚ್ಚಳವಾಗಿದೆ ಎಂದು ಹೇಳುತ್ತಿದ್ದಾರೆ. ಕರ್ನಾಟಕ ಸರಕಾರ ಕೊಟ್ಟ ಅಂಕಿ ಅಂಶಗಳು ಸುಳ್ಳೆಂದು ನೀವು ಹೇಳುತ್ತೀರಾ? ಹೇಳಿ ನನಗೆ?
ಆದುದರಿಂದ ದೇಶವನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸಬೇಡಿ, ಭಾರತ ಸರಕಾರದ ಉದ್ಯೋಗ ಸೃಷ್ಟಿಯ ಪ್ರಯತ್ನಕ್ಕೆ ಸಂದ ಫಲಗಳು ಇವು. ನಿಮಗೆ ಗೊತ್ತಿದೆ ಒಂದು ವರ್ಷದಲ್ಲಿ 70 ಲಕ್ಷ ಇ.ಪಿ.ಎಫ್. ಖಾತೆಗಳನ್ನು ನೊಂದಾಯಿಸಲಾಗಿದೆ. ಇವು 18 ರಿಂದ 25 ವರ್ಷದೊಳಗಿನ ಯುವಕರ ಖಾತೆಗಳು. ಇದು ಉದ್ಯೋಗವಲ್ಲವೇ?. ಇದಕ್ಕಿಂತ ಹೆಚ್ಚಿನ ವೈದ್ಯರು, ಇಂಜಿನಿಯರುಗಳು, ವಕೀಲರು ಮತ್ತು ಚಾರ್ಟರ್ಡ್ ಅಕೌಂಟೆಂಟರು ಹೊಸ ಉದ್ಯೋಗಾವಕಾಶಗಳನ್ನು ದೊರಕಿಸಿಕೊಂಡಿದ್ದಾರೆ. ತಮ್ಮ ವ್ಯಾಪಾರದಲ್ಲಿ , ತಮ್ಮ ಕಂಪೆನಿಗಳಲ್ಲಿ, ಅವರು ತಮ್ಮ ವ್ಯಾಪಾರವನ್ನು ಮತ್ತು ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ. ಅದನ್ನೆಲ್ಲ ಹೇಳಲು, ಒಪ್ಪಿಕೊಳ್ಳಲು ನೀವು ತಯಾರಿಲ್ಲ. ನಿಮಗೆ ಚೆನ್ನಾಗಿ ಗೊತ್ತಿದೆ, ವಸ್ತುಸ್ಥಿತಿಯ ಬಗ್ಗೆ. ಔಪಚಾರಿಕ ವಲಯದ ಉದ್ಯೋಗಿಗಳ ಸಂಖ್ಯೆ ಬರೇ 10 % ಮತ್ತು ಉಳಿದ 90 % ಉದ್ಯೋಗಿಗಳು ಅನೌಪಚಾರಿಕೆ ವಲಯದಲ್ಲಿ ಇರುತ್ತಾರೆ. ಅನೌಪಚಾರಿಕಾ ಕ್ಷೇತ್ರವನ್ನು ಔಪಚಾರಿಕಾ ಕ್ಷೇತ್ರವಾಗಿ ಬದಲಾಯಿಸಲು ನಾವು ಪ್ರೋತ್ಸಾಹಧನ ಒದಗಿಸುವ ಯೋಜನೆ ಸಹಿತ ಇತರ ಹಲವು ಯಶಸ್ವೀ ಪ್ರಯತ್ನಗಳನ್ನು ಮಾಡಿದ್ದೇವೆ. ಮಿಗಿಲಾಗಿ ಮಧ್ಯಮ ವರ್ಗದ ಜನತೆ ಇಂದು ಕೆಲಸಕ್ಕಾಗಿ ಬೇಡಲು ಇಚ್ಚಿಸುವುದಿಲ್ಲ. ಅದು ಸ್ವತಂತ್ರ ರೀತಿಯಲ್ಲಿ ಸ್ವಾಭಿಮಾನದಿಂದ ಬದುಕುವುದನ್ನು ಆಶಿಸುತ್ತದೆ. ನಾನು ಹಲವು ಐ.ಎ.ಎಸ್. ಅಧಿಕಾರಿಗಳನ್ನು ಕೇಳಿದ್ದೇನೆ, ಅವರ ಮಕ್ಕಳು ಏನು ಮಾಡಲು ಇಚ್ಚಿಸುತ್ತಾರೆ ಎಂಬುದಾಗಿ ನಾನು ನಿರೀಕ್ಷಿಸಿದ್ದೇನೆಂದರೆ, ಅವರೆಲ್ಲರೂ ಸಂಪ್ರದಾಯವನ್ನು ಅನುಸರಿಸಿ ಸರಕಾರ ಸೇರುತ್ತಾರೆ ಎಂಬ ಉತ್ತರವನ್ನು. ಇಂದು ಅವರು ನನಗೆ ಹೇಳುತ್ತಾರೆ, ಕಾಲ ಬದಲಾಗಿದೆ ಎಂದು. ಅವರು ನನಗೆ ತಿಳಿಸಿದರು ಏನೆಂದರೆ- ’ಸರ್ ನಾವು ನಮ್ಮ ಹಿರಿಯರ ಸಂಪ್ರದಾಯವನ್ನು ಪಾಲಿಸಿದೆವು, ನಮ್ಮ ಮಕ್ಕಳು ಸೇವೆಗೆ ಸೇರಲು ತಯಾರಿಲ್ಲ. ಅವರು ಅವರದೇ ಆದ ನವೋದ್ಯಮ ತೆರೆಯಲು ಇಚ್ಚಿಸುತ್ತಾರೆ. ನನ್ನ ಮಕ್ಕಳು ವಿದೇಶದಲ್ಲಿ ಕಲಿತಿದ್ದಾರೆ. ಅವರು ಈಗ ನವೋದ್ಯಮವನ್ನು ಆರಂಭಿಸಲು ಇಚ್ಚಿಸಿದ್ದಾರೆ.” . ಇದು ವಿದೇಶದಲ್ಲಿ ಕಲಿತು ಬಂದಿರುವ ಇಂದಿನ ಮಕ್ಕಳ ಆಶೋತ್ತರಗಳು.ಆದ್ದರಿಂದ ಪ್ರತೀ ಸರಕಾರವೂ ಇಂತಹ ಸಾಹಸಿ ಮಧ್ಯಮ ವರ್ಗದ ಯುವಕರ ಆಶೋತ್ತರಗಳನ್ನು ಈಡೇರಿಸಲು ಬೆಂಬಲ ಕೊಡಬೇಕು. ನಾವು ಅವರನ್ನು ನಿರಾಸೆಯತ್ತ ದೂಡಬಾರದು. ಅದಕ್ಕಾಗಿ ಮುದ್ರಾ ಯೋಜನಾದಂತಹ ಯೋಜನೆಗಳು, ಕೌಶಲ್ಯ ಅಭಿವೃದ್ದಿ ಯೋಜನೆಗಳು, ಉದ್ಯಮ ಶೀಲತಾ ತರಬೇತಿ ಮತ್ತು ಇತರ ಪ್ರಯತ್ನಗಳು- ಈ ಸಾಹಸಿ , ಮಹತ್ವಾಕಾಂಕ್ಷೆಯ ಯುವಕರ ಆಶೋತ್ತರಗಳನ್ನು ಈಡೇರಿಸುವುದಕ್ಕಾಗಿ ರೂಪುಗೊಂಡಿವೆ. ಇದರ ಫಲಿತಾಂಶವಾಗಿ ಇಂದು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ 10 ಲಕ್ಷ ಕೋ.ರೂ. ಗಳಿಗಿಂತ ಅಧಿಕ ಮೊತ್ತದ ಸಾಲಗಳಿಗೆ ಮಂಜೂರಾತಿ ನೀಡಲಾಗಿದೆ, ಇದು ಸಣ್ಣ ಮೊತ್ತವಲ್ಲ. ಇದುವರೆಗೆ ಸಾಲ ಬಿಡುಗಡೆಗೆ ತೊಡಕಾದ , ಮಧ್ಯವರ್ತಿಗಳಿಂದ ತಡೆಹಿಡಿಯಲ್ಪಟ್ಟ ಒಂದೇ ಒಂದು ದೂರೂ ಇಲ್ಲ. ಇದು ಈ ಸರಕಾರದ ಕೆಲಸದ ಸಂಸ್ಕೃತಿಯ ಫಲಿತಾಂಶ. ನಮ್ಮ ನೀತಿಗಳು ಮತ್ತು ನಿಯಮಗಳ ಕಾರಣದಿಂದಾಗಿ ಯಾರು ಬೇಕಾದರೂ ಸಾಲಕ್ಕಾಗಿ ಬ್ಯಾಂಕಿಗೆ ಹೋಗಬಹುದು. ಗ್ಯಾರಂಟಿ ಕೊಡಬೇಕಾಗಿಲ್ಲ. 10 ಲಕ್ಷ ಕೋ.ರೂ. ಮೊತ್ತದ ಸಾಲಗಳನ್ನು ಮಂಜೂರು ಮಾಡಲಾಗಿದೆ !. ಇವುಗಳಲ್ಲಿ 4 ಲಕ್ಷ ಕೋ.ರೂ.ಗಳನ್ನು ಈಗಾಗಲೇ ವಿತರಣೆ ಮಾಡಲಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಸಾಲ ಕೋರಿದವರಲ್ಲಿ 3 ಕೋಟಿ ಮಂದಿ ಹೊಸ ವ್ಯಾಪಾರೋದ್ಯಮಿಗಳು. ಈ ವ್ಯಕ್ತಿಗಳು ಬಹಳ ಧೀರ್ಘ ಅವಧಿಯಿಂದ ಅವಕಾಶ ವಂಚಿತರಾಗಿದ್ದರು. ಇದು ದೇಶದಲ್ಲಿ ಉದ್ಯೋಗಾವಕಾಶ ಹೆಚ್ಚಳಕ್ಕೆ ಮಾಡಿದ ಪ್ರಯತ್ನ ಅಲ್ಲವೇ.?. ನೀವು ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದೀರಿ. ಆದ್ದರಿಂದ ನೀವು ನಿಮ್ಮನ್ನು ಹಾಡಿ ಹೊಗಳಿಕೊಳ್ಳುತ್ತಿದ್ದೀರಿ. ಈ ಮನಸ್ಥಿತಿ ನಿಮ್ಮನ್ನು ಬೆಳೆಯಲು ಬಿಡುತ್ತಿಲ್ಲ. ಅಟಲ್ ಜೀ ಒಂದು ಸುಂದರ ಉಕ್ತಿ ಹೇಳಿದ್ದರು-“ಸಣ್ಣ ಮನಸ್ಥಿತಿಯಿಂದ ಯಾರೊಬ್ಬರೂ ದೊಡ್ಡವರಾಗಲು ಸಾಧ್ಯವಿಲ್ಲ. “ ಮತ್ತು “ಶಿಥಿಲ ಮನಸ್ಸಿನ ಯಾರೂ ಬೆಳೆಯಲು , ಎದ್ದು ನಿಲ್ಲಲು ಸಾಧ್ಯವಿಲ್ಲ”. ಆದ್ದರಿಂದ ನೀವು ಯಾವತ್ತೂ ಬೆಳವಣಿಗೆ ಹೊಂದಲಾರಿರಿ. ನೀವು ಎಂದೆಂದಿಗೂ ಎಲ್ಲಿ ಇರುತ್ತೀರೋ ಅಲ್ಲೇ ಇರುತ್ತೀರಿ.
ನೀವು ಸತತವಾಗಿ ನಿಮ್ಮನ್ನು ನೀವು ಹೊಗಳಿಕೊಳ್ಳುತ್ತಿದ್ದೀರಿ. ನಾನು ನಿಮಗೆ ಕೆಲವನ್ನು ನೆನಪಿಸಿಕೊಡಲು ಇಚ್ಚಿಸುತ್ತೇನೆ. 1980 ರ ದಶಕದಲ್ಲಿ 21 ನೇ ಶತಮಾನದ ಆಗಮನದ ಕೂಗು ಎಲ್ಲ ಕಡೆಯಿಂದಲೂ ಕೇಳಿ ಬರುತ್ತಿತ್ತು. ಮತ್ತು ಆ ಅವಧಿಯಲ್ಲಿ ಕಾಂಗ್ರೆಸ್ಸಿನ ನಾಯಕರೊಬ್ಬರು ಜನರಿಗೆ 21 ನೇ ಶತಮಾನದ ಕನಸುಗಳನ್ನು ತೋರಿಸುತ್ತಿದ್ದರು. ಅವರು ಯುವ ಮತ್ತು ಹೊಸ ನಾಯಕರಾಗಿದ್ದರು. ಅವರು ತಮ್ಮ ತಾಯಿಯ ಕಡೆಯಿಂದ ಅಜ್ಜನಾಗಿದ್ದವರು ಗೆದ್ದಿದ್ದಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರು. ಆ ಕಾಲದಲ್ಲಿ ನಾನು ಬಹಳ ಕುತೂಹಲದಾಯಕ ವ್ಯಂಗ್ಯ ಚಿತ್ರವೊಂದನ್ನು ನೋಡಿದ್ದೆ. ಒಬ್ಬ ವ್ಯಕ್ತಿ ರೈಲು ನಿಲ್ದಾಣದಲ್ಲಿ ನಿಂತಿದ್ದರು ಮತ್ತು ರೈಲು ಹೋಗುತ್ತಿತ್ತು. ಆ ರೈಲಿನ ಮೇಲೆ 21 ನೇ ಶತಮಾನ ಎಂದು ಬರೆದಿತ್ತು ಮತ್ತು ಮನುಷ್ಯ ಅದನ್ನು ಹಿಡಿಯಲು ಓಡುತ್ತಿದ್ದರು. ಆತನ ಹತ್ತಿರದಲ್ಲಿದ್ದ ಹಳೆಯ ಕಾಲದ ಮನುಷ್ಯ “ನಿಲ್ಲು , ಆ ರೈಲು ಹೇಗಿದ್ದರೂ ಬರುತ್ತದೆ, ನೀನು ಮಾಡಬೇಕಾದ್ದೇನೂ ಇಲ್ಲ “ ಎನ್ನುತ್ತಿದ್ದರು. ಜನರಿಗೆ 1980 ರಲ್ಲಿಯೇ 21 ನೇ ಶತಮಾನದ ಕನಸುಗಳನ್ನು ತೋರಿಸಲಾಗುತ್ತಿತ್ತು. 21 ನೇ ಶತಮಾನದ ಬಗ್ಗೆ ಮಾತನಾಡುತ್ತಿದ್ದ ಸರಕಾರಕ್ಕೆ ವಾಯು ಯಾನ ನೀತಿಯನ್ನು ರೂಪಿಸುವುದಕ್ಕೂ ಸಾಧ್ಯವಾಗಲಿಲ್ಲ !. 21 ನೇ ಶತಮಾನಕ್ಕೆ ವಾಯುಯಾನ ನೀತಿ ರೂಪಿಸುವುದಕ್ಕೂ ಅದಕ್ಕೆ ಸಾಧ್ಯ ಇಲ್ಲದಿದ್ದ ಮೇಲೆ ಅದರ ಅರ್ಥ ಏನು ?. ಅದೇನು ಎತ್ತಿನ ಗಾಡಿಯೇ ? ನೀವು ಆ ರೀತಿಯಲ್ಲಿ ಸಾಗುತ್ತಿದ್ದೀರಿ.
ಸ್ಪೀಕರ್ ಮೇಡಂ, ನಾವು ವಾಯು ಯಾನ ನೀತಿಯನ್ನು ರೂಪಿಸಿ ಸಣ್ಣ ನಗರಗಳಲ್ಲಿ , ಸಣ್ಣ ರನ್ ವೇ ಗಳನ್ನು ಬಳಸಲು ಆರಂಭಿಸಿದ್ದೇವೆ. ಇಂದು 16 ಹೊಸ ಏರ್ ಸ್ಟ್ರಿಪ್ ಗಳನ್ನು ಹೊಂದಿದ್ದೇವೆ. ವಾಯುಯಾನದಲ್ಲಿ ಹಲವಾರು ಸಾಧ್ಯತೆಗಳಿವೆ. ಮತ್ತು ಆ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಶ್ರೇಣಿ-2, ಶ್ರೇಣಿ-3 ನಗರಗಳಿಂದಲೂ ವಿಮಾನಗಳು ಹಾರಾಟ ನಡೆಸಲಿವೆ. ಈಗ ಅಲ್ಲಿ 450 ಕಾರ್ಯಾಚರಿಸುವ ವಿಮಾನಗಳಿವೆ. ನಾವು ಈ ವರ್ಷ 900 ಕ್ಕೂ ಅಧಿಕ ಹೊಸ ವಿಮಾನಗಳನ್ನು ಖರೀದಿಸಲಿದ್ದೇವೆ ಎಂಬುದನ್ನು ತಿಳಿಯಲು ನಿಮಗೆ ಸಂತೋಷವಾಗಬಹುದು. ಆ ನಿಟ್ಟಿನಲ್ಲಿ ಆರಂಭಿಕ ಕ್ರಮಗಳನ್ನು ಕೈಗೊಂಡಿದ್ದೇವೆ. ಇವೆಲ್ಲ ಸಾಧ್ಯವಾಗಿರುವುದು ನಮ್ಮ ದೃಢ ನಿರ್ಧಾರಗಳಿಂದ ಮಾತ್ರವಲ್ಲ ನಾವು ಹೊಸ ತಂತ್ರಜ್ಞಾನವನ್ನು ಬಳಸಿ ಸತತ ನಿಗಾ ಇಡುತ್ತಿರುವುದರಿಂದಾಗಿ. ನಾವು ರಸ್ತೆ ಮತ್ತು ರೈಲು ಕಾಮಗಾರಿಗಳನ್ನು ಡ್ರೋನ್ ಬಳಸಿ ನಿಗಾ ಇಡುತ್ತಿದ್ದೇವೆ. ಉಪಗ್ರಹ ತಂತ್ರಜ್ಞಾನ ಬಳಸಿ ಜಿಯೋ ಟ್ಯಾಗಿಂಗ್ ಮಾಡಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ ನಿರ್ಮಾಣಗೊಂಡ ಶೌಚಾಲಯಗಳನ್ನು ಚಿತ್ರೀಕರಿಸಿ ಮೊಬೈಲ್ ಫೋನುಗಳಲ್ಲಿ ಲಭ್ಯವಾಗುವಂತೆ ಮಾಡಿದ್ದೇವೆ. ತಂತ್ರಜ್ಞಾನದ ಸಹಾಯದಿಂದ ನಿಗಾ ಇಡುವುದರಿಂದಾಗಿ ಕೆಲಸ ಚುರುಕು ಗತಿಯಿಂದ ಸಾಗಲು ನೆರವಾಗುತ್ತದೆ, ನಿಗಾದಿಂದ ಪಾರದರ್ಶಕತೆ ಬಂದಿದೆ.
ನಾನು ಚುನಾವಣೆ ಗೆದ್ದಾಗ ನಿಮ್ಮ ಪಕ್ಷ ಮೋದಿಯವರು ಆಧಾರ್ ಯೋಜನೆಯನ್ನು ಮುಕ್ತಾಯಗೊಳಿಸಬಹುದು ಎಂಬ ಸಂಶಯಗಳನ್ನು ಹರಡಿತ್ತು. ಆದುದರಿಂದ ನೀವು ಮೋದಿ ವಿರುದ್ದ ದಾಳಿಗೆ ಆಧಾರ್ ಬಳಸಿಕೊಂಡಿರಿ. ಯಾಕೆಂದರೆ ಅದನ್ನು ಮೋದಿ ತೆಗೆದು ಹಾಕುತ್ತಾರೆ ಎಂದು ಭಾವಿಸಿದಿರಿ. ಆದರೆ ಮೋದಿ ಆಧಾರ್ ಅನ್ನು ತಂತ್ರಜ್ಞಾನದ ಜತೆ ಜೋಡಿಸಿದ್ದರಿಂದ ನಿಮ್ಮ ಯೋಜನೆ ಸರಿಯಾದ ದಾರಿಯಲ್ಲಿ ಸಾಗಲಿಲ್ಲ. ಮೋದಿ ಅದನ್ನು ಹೊಸ ಮಾದರಿಯಲ್ಲಿ ಮರುಜಾರಿ ಮಾಡುತ್ತಾರೆ ಎಂಬುದು ನಿಮ್ಮ ಕಲ್ಪನೆಯನ್ನೂ ಮೀರಿದುದಾಗಿತ್ತು. ಬಡವರಲ್ಲಿ ಬಡವರು ಈ ಯೋಜನೆಯಿಂದ ಲಾಭ ಪಡೆಯುವಾಗ ನಿಮಗೆ ಬಹಳ ಕೆಟ್ಟದಿದು ಎನಿಸತೊಡಗಿತು. “ತಲೆಗಳನ್ನು ನಾನು ಗೆದ್ದೆ ಮತ್ತು ಬಾಲಗಳನ್ನು ನೀವು ಕಳೆದುಕೊಂಡಿರಿ” . ಇಲ್ಲ ಅದು ಕೆಲಸ ಮಾಡಲಾರದು. ಆದುದರಿಂದ ಇಂದು 115 ಕೋಟಿ ಜನರು ಆಧಾರ್ ಕಾರ್ಡ್ ಹೊಂದಿದ್ದಾರೆ. ಕೇಂದ್ರ ಸರಕಾರದ ಸುಮಾರು 450 ವಿವಿಧ ಯೋಜನೆಗಳ ಹಣಕಾಸು ಬಡವರಲ್ಲಿ ಬಡವರ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ಸೇರುತ್ತಿದೆ. ಹಲವಾರು ವರ್ಷಗಳ ಕಾಲ ನೀವು ಬರೇ ಕಾಗದ ಪತ್ರಗಳಲ್ಲಿ ವಿಧವೆಯರಾಗಿದ್ದ ವಿಧವೆಯರಿಗೆ ಪೆನ್ಷನ್ ನೀಡುತ್ತಿದ್ದಿರಿ. ಮತ್ತು ಅಂತಹ ವಿಧವೆಯರು, ಹೆಣ್ಣುಮಕ್ಕಳು ನಿಜವಾಗಿಯೂ ಅಸ್ತಿತ್ವದಲ್ಲಿ ಇರಲೇ ಇಲ್ಲ. ಮಧ್ಯವರ್ತಿಗಳು ಆ ಹಣವನ್ನು ಲಪಟಾಯಿಸುತ್ತಿದ್ದರು. ಹಿರಿಯ ನಾಗರಿಕರು, ಅಂಗವಿಕಲರ ವಿಷಯದಲ್ಲಿಯೂ ಹೀಗೆಯೇ ಆಗುತ್ತಿತ್ತು. ಅವರಿಗಾಗಿ ಮೀಸಲಿಟ್ಟ ಹಣವನ್ನು ಮಧ್ಯವರ್ತಿಗಳು ಪಡೆಯುತ್ತಿದ್ದರು. 57,000 ಕೋ.ರೂ. ಮಧ್ಯವರ್ತಿಗಳ ಪಾಲಾಗುತ್ತಿತ್ತು. ಇಂದು ನೀವು ಆಧಾರ್ ನಿಂದಾಗಿ ಅಸಂತುಷ್ಟರಾಗಿರುವುದಲ್ಲ, ನೇರ ನಗದು ವರ್ಗಾವಣೆಗೆ ಆಧಾರ್ ಬಳಕೆಯಿಂದಾಗಿ ನಿಮಗೆ ಅಸಂತೋಷ ಉಂಟಾದುದಲ್ಲ. ಮಧ್ಯವರ್ತಿಗಳು ತಮ್ಮ ವ್ಯಾಪಾರ ಕಳೆದುಕೊಂಡರು. ನೆನಪಿಡಿ, ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದ ವಂಚಕರಿಗೆ ಮಾತ್ರ ಅವರ ಆದಾಯ ನಷ್ಟವಾಯಿತು.
ಸ್ಪೀಕರ್ ಮೇಡಂ,
ನಾವು ಸೌಭಾಗ್ಯ ಯೋಜನೆಯನ್ನು 4 ಕೋಟಿ ಬಡವರಿಗೆ ಮತ್ತು ಮಧ್ಯಮ ಆದಾಯ ವರ್ಗದವರಿಗೆ ಉಚಿತ ವಿದ್ಯುತ್ ಸಂಪರ್ಕ ನೀಡುವುದಕ್ಕಾಗಿ ಜಾರಿಗೆ ತಂದೆವು.ಈಗ ನೀವು ಹೇಳುತ್ತಿದ್ದೀರಿ, ಅಂತಹ ಯೋಜನೆಗಳನ್ನು ನಾವು ಕೂಡಾ ಆರಂಭಿಸಿದ್ದೆವು ಎಂದು. ನಾನು ಒಪ್ಪುತ್ತೇನೆ, ಅಲ್ಲಿ ಯೋಜನೆ ಇತ್ತು, ಆದರೆ ಜನರಿಗೆ ವಿದ್ಯುತ್ ಲಭ್ಯ ಇತ್ತೇ? ವಿದ್ಯುತ್ ಪ್ರಸರಣಕ್ಕೆ ಅನುಕೂಲವಾಗುವಷ್ಟು ಪ್ರಸರಣ ಜಾಲವಿತ್ತೇ?. ವಿದ್ಯುತ್ ಕಂಬಗಳನ್ನು ಕೂಡಾ ಹಾಕಿರಲಿಲ್ಲ.ಜನರು 18 ನೇ ಶತಮಾನದಲ್ಲಿ ಬದುಕುತ್ತಿದ್ದಂತೆ ಬದುಕುವಂತೆ ಮಾಡಲಾಗಿತ್ತು. ಮತ್ತು ನೀವು ಯೋಜನೆಯನ್ನು ನಿಮ್ಮದೆಂದು ಹೇಳಿಕೊಳ್ಳುತ್ತೀರಿ. ನಾವು ಏಕಾಂಗಿತನದಲ್ಲಿ, ಪ್ರತ್ಯೇಕತೆಯಲ್ಲಿ ಅಭಿವೃದ್ದಿಯನ್ನು ಕಾಣಲಾರೆವು. ನಾವು ಸಮಗ್ರ ಮತ್ತು ಪೂರ್ಣ ದೃಷ್ಟಿಯ ಧೀರ್ಘಾವಧಿಯ ಧೋರಣೆಗಳನ್ನು ಅನುಸರಿಸುತ್ತೇವೆ. ನಾನು ವಿದ್ಯುತ್ ಶಕ್ತಿಯ ಬಗ್ಗೆ ಮಾತನಾಡಲು ಬಯಸುತ್ತೇನೆ. ನಿಮಗೆ ಸರಕಾರದ ಕಾರ್ಯವೈಖರಿಯ ಬಗ್ಗೆ ಅರ್ಥವಾಗುತ್ತದೆ. ದೇಶದಲ್ಲಿರುವ 25 ಕೋಟಿ ಮನೆಗಳ ಪೈಕಿ 4 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಲಭ್ಯತೆ ಇರಲಿಲ್ಲ. ಇದರ ಅರ್ಥ 20% ಜನಸಂಖ್ಯೆ ಕತ್ತಲಿನಲ್ಲಿಯೇ ಬದುಕುತ್ತಿದೆ. ಇದು ಹೆಮ್ಮೆಪಡುವ ವಿಷಯವೇ ?. ನೀವು ಇದನ್ನು ನಮ್ಮ ಹೆಗಲಿಗೆ ವರ್ಗಾಯಿಸಿದಿರಿ ಮತ್ತು ನಾವದನ್ನು ಮಾಡುವ ಕಾರ್ಯಕ್ಷಮತೆಯನ್ನು ತೋರಿಸುತ್ತಿದ್ದೇವೆ. ಆದರೆ ನಾವದನ್ನು ಹೇಗೆ ಮಾಡುತ್ತಿದ್ದೇವೆ ?. ನಾವು ಈ ಕೆಲಸವನ್ನು 4 ಭಾಗಗಳಾಗಿ ವಿಂಗಡಿಸಿದ್ದೇವೆ. –ವಿದ್ಯುತ್ ಉತ್ಪಾದನೆ, ವಿದ್ಯುತ್ ಪ್ರಸರಣ, ವಿತರಣೆ ಮತ್ತು ಸಂಪರ್ಕ. ನಾವು ಇವೆಲ್ಲವನ್ನು ಒಟ್ಟಾಗಿ ಅಭಿವೃದ್ದಿ ಮಾಡುತ್ತಿದ್ದೇವೆ. ನಾವು ವಿದ್ಯುತ್ ಉತ್ಪಾದನೆಯನ್ನು ಸೌರ ವಿದ್ಯುತ್, ಜಲ ವಿದ್ಯುತ್, ಉಷ್ಣ ವಿದ್ಯುತ್, ಅಣು ವಿದ್ಯುತ್ ಮತ್ತಿತರ ವಿದ್ಯುತ್ ಉತ್ಪಾದನಾ ವಿಧಾನಗಳ ಮೂಲಕ ವಿದ್ಯುತ್ ಉತ್ಪಾದನೆಯ ಹೆಚ್ಚಳಕ್ಕೆ ಒತ್ತು ನೀಡಿದ್ದೇವೆ. ತ್ವರಿತ ಗತಿಯಲ್ಲಿ ಪ್ರಸರಣ ಜಾಲ ನಿರ್ಮಾಣದ ಕಾರ್ಯವನ್ನು ಕೈಗೆತ್ತಿಕೊಂಡಿದ್ದೇವೆ. ನಾವು 1.5 ಲಕ್ಷ ಕೋ.ರೂ. ಗೂ ಅಧಿಕ ಮೌಲ್ಯದ ಯೋಜನೆಗಳನ್ನು ಕಳೆದ 3 ವರ್ಷಗಳಲ್ಲಿ ಕೈಗೊಂಡಿದ್ದೇವೆ. ಇದು ಹಿಂದಿನ ಸರಕಾರದ 3 ವರ್ಷಗಳ ಕಾರ್ಯಕ್ಕೆ ಹೋಲಿಸಿದರೆ 83 % ಹೆಚ್ಚಿನ ಪ್ರಮಾಣದಲ್ಲಿದೆ. 2014 ರ ಬಳಿಕ ನಮ್ಮ ಸರಕಾರ ಪ್ರಸರಣ ಜಾಲ ಸಾಮರ್ಥ್ಯವನ್ನು 31 % ಹೆಚ್ಚಿಸಿದೆ. ಕಳೆದ 3 ವರ್ಷಗಳಲ್ಲಿ ಟ್ರಾನ್ಸ್ ಫಾರ್ಮರ್ ಸಾಮರ್ಥ್ಯವನ್ನು 49 % ಹೆಚ್ಚಿಸಿದ್ದೇವೆ. ನಾವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ಕಚ್ ನಿಂದ ಕಾಮರೂಪದವರೆಗೆ ವಿದ್ಯುತ್ ಪ್ರಸರಣಕ್ಕೆ ಇಡೀಯ ಜಾಲವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ. ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಬಲಪಡಿಸಲು ಉಜ್ವಲ್ ಡಿಸ್ಕಾಂ ಭರವಸೆ ಯೋಜನೆ –ಉದಯ್ ಯೋಜನೆಯನ್ನು ತಂದಿದ್ದೇವೆ. ಮತ್ತು ರಾಜ್ಯಗಳ ಜತೆ ತಿಳುವಳಿಕಾ ಒಡಂಬಡಿಕೆಗಳನ್ನು ಮಾಡಿಕೊಂಡಿದ್ದೇವೆ. ನಾವು ವಿದ್ಯುತ್ ವಿತರಣ ಕಂಪೆನಿಗಳ ಉತ್ತಮ ಕಾರ್ಯಾಚರಣೆಯನ್ನು ಆಶಿಸುತ್ತೇವೆ. ಉತ್ತಮ ಹಣಕಾಸು ನಿರ್ವಹಣೆಯನ್ನು ನಿರೀಕ್ಷಿಸುತ್ತೇವೆ. ಆ ಬಳಿಕ ನಾವು ಮನೆಗಳಿಗೆ ವಿದ್ಯುತ್ ಶಕ್ತಿ ಒದಗಿಸುವ ಸೌಭಾಗ್ಯ ಯೋಜನೆಯನ್ನು ಕಾರ್ಯಾರಂಭ ಮಾಡಿದೆವು. ಒಂದೆಡೆ ನಾವು ವಿದ್ಯುತ್ ಸಂಪರ್ಕ ಒದಗಿಸಲು ಆದ್ಯತೆ ನೀಡುತ್ತಲೇ, ಇನ್ನೊಂದೆಡೆ ವಿದ್ಯುತ್ ಉಳಿತಾಯದತ್ತಲೂ ಗಮನ ಕೊಟ್ಟೆವು. ನಾವು 28 ಕೋಟಿ ಎಲ್.ಇ.ಡಿ. ಬಲ್ಬುಗಳನ್ನು ವಿತರಿಸಿದ್ದೇವೆ. ಸುಮಾರು 15 ಸಾವಿರ ಕೋಟಿ ರೂ.ಗಳಷ್ಟು ವಿದ್ಯುತ್ ಬಿಲ್ ಉಳಿಸಿದ್ದೇವೆ. ನಾವು ಕಾಲ ವ್ಯಯವಾಗುವುದನ್ನು ಮತ್ತು ಹಣಕಾಸು ದುರ್ವ್ಯಯವಾಗುವುದನ್ನು ತಡೆಯಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇವೆ.
ಮೇಡಂ ಸ್ಪೀಕರ್,
ರೈತರಿಗೆ ಸಂಬಂಧಪಟ್ಟ ವಿಷಯಗಳನ್ನು ರಾಜಕೀಕರಣಗೊಳಿಸಲು ಪ್ರಯತ್ನಗಳನ್ನು ಮಾಡಲಾಯಿತು. ಸ್ವಾತಂತ್ರ್ಯ ಬಂದ 70 ವರ್ಷಗಳ ಬಳಿಕವೂ ರೈತರ ಉತ್ಪಾದನೆಗಳಾದ ಹಣ್ಣು, ತರಕಾರಿಗಳು, ಆಹಾರಧಾನ್ಯಗಳು, ಅಥವಾ ಹೂವು ಇತ್ಯಾದಿಗಳು ಸೇರಿದಂತೆ 1 ಲಕ್ಷ ಕೋಟಿ ರೂ, ಮೌಲ್ಯದ ವಸ್ತುಗಳು ದಾಸ್ತಾನುಗಾರಕ್ಕೆ ಮತ್ತು ಮಾರುಕಟ್ಟೆಗೆ ಸಾಗಿಸುವ ಹಾದಿಯಲ್ಲಿ ದಕ್ಷ ಪೂರೈಕೆ, ಸಾಗಾಟ ಜಾಲ ಇಲ್ಲದೆ ಹಾಳಾಗುತ್ತಿವೆ. ನಾವು ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆಯನ್ನು ಈ ಮೂಲ ಸೌಕರ್ಯಗಳನ್ನು ಬಲಪಡಿಸುವುದಕ್ಕಾಗಿ ಆರಂಭಿಸಿದೆವು. ಇದರಿಂದ ರೈತರಿಗೆ ಸೂಕ್ತ ದಾಸ್ತಾನು ಸೌಲಭ್ಯವು ಕೈಗೆಟಕುವ ದರದಲ್ಲಿ ದೊರೆತು ಅವರ ಉತ್ಪಾದನೆಗಳು ಹಾಳಾಗದಿರಲಿ ಎಂಬ ಉದ್ದೇಶ ನಮ್ಮದು.
ಪೂರೈಕೆ ಮೂಲಸೌಕರ್ಯ ಬಲಪಡಿಸಲು ಸರಕಾರ ನಿರ್ಧರಿಸಿದೆ. ಇದರಿಂದ ಉಳಿತಾಯವಾಗುವ 1 ಲಕ್ಷ ಕೋ.ರೂ.ಗಳನ್ನು ಮಧ್ಯಮ ವರ್ಗದ ಯುವಕರು ಆಹಾರ ಸಂಸ್ಕರಣ ವಲಯದಲ್ಲಿ ಅವಕಾಶ ಒದಗಿಸುವುದಕ್ಕಾಗಿ ವಿನಿಯೋಗಿಸಬಹುದು. ನಮ್ಮ ದೇಶದಲ್ಲಿ ಪಶು ಸಂಗೋಪನೆ ಕೂಡಾ ಕೃಷಿಯಷ್ಟೇ ಪ್ರಮುಖವಾದ ಕ್ಷೇತ್ರ. ಎರಡೂ ಕೂಡಾ ಪರಸ್ಪರ ಅವಲಂಬಿ ಕ್ಷೇತ್ರಗಳು ಪ್ರತೀ ವರ್ಷ ಸುಮಾರು 40 ಸಾವಿರ ಕೋ.ರೂ.ಗಳಷ್ಟು ಹಣ ಪಶು ಸಂಗೋಪನಾ ಕ್ಷೇತ್ರದಲ್ಲಿ ಸಾಕಷ್ಟು ಮೂಲಸೌಕರ್ಯಗಳು ಇಲ್ಲದೆ ನಷ್ಟವಾಗುತ್ತದೆ. ನಾವು ಈ ಕ್ಷೇತ್ರಕ್ಕೆ ಆದ್ಯತೆ ನೀಡಲು ಆರಂಭಿಸಿದ್ದೇವೆ. ಮತ್ತು ಕಾಮಧೇನು ಕಾರ್ಯಕ್ರಮವನ್ನು ಬಿರುಸಾಗಿ ಅನುಷ್ಟಾನಿಸುತ್ತಿದ್ದೇವೆ.
ಕಾಮಧೇನು ಆರಂಭಿಕ ಕ್ರಮ ಪಶು ಸಂಗೋಪನೆಯಲ್ಲಿ ತೊಡಗಿರುವವರಿಗೆ ದೊಡ್ದ ಸಮಾಧಾನ, ಪರಿಹಾರ ಕೊಡುವ ಯೋಜನೆ. ನಾವು 2022 ರ ವೇಳೆಗೆ ರೈತರ ಆದಾಯವನ್ನು ದುಪಟ್ಟುಗೊಳಿಸುವ ಬಗ್ಗೆ ಮಾತನಾಡುತ್ತಿದ್ದೇವೆ. 1980 ರಲ್ಲಿ ನೀವು 21 ನೇ ಶತಮಾನದ ಬಗ್ಗೆ ಮಾತನಾಡುವಾಗ ಬಹಳ ಒಳ್ಳೆಯದಿತ್ತು. ಆದರೆ ಮೋದಿ ಯಾವಾಗ 2018 ರಲ್ಲಿ 2022 ರ ಬಗ್ಗೆ ಮಾತನಾಡಲು ಆರಂಭಿಸಿದರೋ, ಆಗ ಅದನ್ನು ಒಪ್ಪಲು ನಿಮಗೆ ಕಷ್ಟವಾಗತೊಡಗಿತು. ನೀವು 80 ರ ರದಶಕದಲ್ಲಿ 21 ನೇ ಶತಮಾನದ ಬಗ್ಗೆ ಮಾತನಾಡುವಾಗ ಕನಸುಗಳನ್ನು ತೋರಿಸುತ್ತಿದ್ದಿರಿ. ಈಗ ನಮ್ಮ ಸರಕಾರ ಕಾಲಮಿತಿ ಆಧಾರದಲ್ಲಿ ಗುರಿಗಳನ್ನು ನಿಗದಿ ಮಾಡಿ ಸ್ವಾತಂತ್ರ್ಯೋತ್ಸವದ 75 ನೇ ವರ್ಷವಾದ 2022 ರಲ್ಲಿ ಜನರನ್ನು ಪ್ರೋತ್ಸಾಹಿಸಲು ಯೋಜನೆಗಳನ್ನು ಹಾಕಿಕೊಂಡು ಜಾರಿಗೆ ತರುವಾಗ ನಿಮಗೆ ಸಮಸ್ಯೆಗಳು ಎದುರಾಗುತ್ತಿವೆ. ನಿಮಗೆ ರೈತರ ಆದಾಯವನ್ನು 2022 ರ ವೇಳೆಗೆ ದುಪ್ಪಟ್ಟುಗೊಳಿಸುವ ನಮ್ಮ ಯೋಜನೆಯ ಗುರಿಯ ಬಗ್ಗೆ ಸಂಶಯಗಳಿವೆ, ಯಕೆಂದರೆ ನೀವು ಯಾವತ್ತೂ ದೊಡ್ಡ ಕನಸುಗಳನ್ನು ಕಂಡವರಲ್ಲ. ಸಣ್ಣ ಮನಸ್ಸಿನಿಂದ ಯಾವುದನ್ನೂ ಸಾಧಿಸುವುದಕ್ಕೆ ಸಾಧ್ಯವಿಲ್ಲ, ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವುದಕ್ಕೆ ನಮಗೆ ರೈತರ ಒಳಸುರಿ ಖರ್ಚುಗಳನ್ನು ಕಡಿಮೆ ಮಾಡುವುದು ಸಾಧ್ಯವಿಲ್ಲವೇ?. ಆರಂಭಿಕ ಕ್ರಮಗಳಾದ ಮಣ್ಣಿನ ಆರೋಗ್ಯ ಕಾರ್ಡ್, ಸೌರ ಪಂಪುಗಳು, ಬೇವು ಲೇಪಿತ ಯೂರಿಯಾ, ಇತ್ಯಾದಿ ಕ್ರಮಗಳು ರೈತರ ಒಳಸುರಿ ಖರ್ಚನ್ನು ಕಡಿಮೆ ಮಾಡಲು ಸಹಾಯ ಮಾಡಿವೆ. ಅದೇ ರೀತಿ ನಾವು ರೈತರಿಗೆ ಅವರ ತೋಟ , ಕೃಷಿ ಭೂಮಿಯ ಅಂಚಿನಲ್ಲಿ ಆದಾಯ ಹೆಚ್ಚಳಕ್ಕಾಗಿ ಬಿದಿರು ಬೆಳೆಯುವಂತೆ ಪ್ರೋತ್ಸಾಹಿಸಿದ್ದೇವೆ. ಬಿದಿರಿಗೆ ಖಚಿತವಾದ ಮಾರುಕಟ್ಟೆ ಇದೆ. ನಿಮ್ಮ ಒಂದು ತಪ್ಪು ನೀತಿಯಿಂದಾಗಿ ಇಂದು ದೇಶವು ಸಾವಿರಾರು ಕೋಟಿ ರೂ. ಮೌಲ್ಯದ ಬಿದಿರನ್ನು ಆಮದು ಮಾಡಿಕೊಳ್ಳುತ್ತಿದೆ. ನೀವು ಬಿದಿರನ್ನು ಮರ ಎಂದು ಪರಿಗಣಿಸಿದಿರಿ ಮತ್ತು ಅದರ ಫಲಿತಾಂಶವಾಗಿ ಯಾರೊಬ್ಬರೂ ಬಿದಿರನ್ನು ಕಡಿಯುವಂತಿರಲಿಲ್ಲ. ಈಶಾನ್ಯ ಭಾರತದ ನನ್ನ ಜನ ತೀವ್ರವಾಗಿ ತೊಂದರೆ ಅನುಭವಿಸುತ್ತಿದ್ದರು. ಬಿದಿರನ್ನು ಹುಲ್ಲಿನ ಜಾತಿಯಲ್ಲಿ ಸೇರಿಸುವ ಧೈರ್ಯವನ್ನು ನಾವು ತೋರಿಸಿದೆವು. ಇದರಿಂದ ರೈತರ ಆದಾಯ ವೃದ್ದಿಯಾಗುತ್ತದೆ. ಆತ ತನ್ನ ಕೃಷಿ ಕ್ಷೇತ್ರದ ಅಂಚಿನಲ್ಲಿ ಬಿದಿರು ಬೆಳೆಸಿದರೆ , ಅದರ ನೆರಳು ಬೆಳೆಗೆ ಧಕ್ಕೆ ತರುವುದಿಲ್ಲ. ಈ ರೀತಿಯಲ್ಲಿ ಆತ ತನ್ನ ಆದಾಯವನ್ನು ಹಲವು ಪಟ್ಟು ಹೆಚ್ಚಿಸಬಹುದು. ನಾವು ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಇಚ್ಚಿಸಿದ್ದೇವೆ. ಜೇನು ಸಾಕಾಣಿಕೆಯನ್ನು ಉತ್ತೇಜಿಸಲು ನಿರ್ಧರಿಸಿದ್ದೇವೆ. ನಿಮಗೆ ಆಶ್ಚರ್ಯವಾಗಬಹುದು, ಜೇನು ಸಾಕಾಣಿಕೆಯಲ್ಲಿ 40 % ಹೆಚ್ಚಳವಾಗಿದೆ. ಕೆಲವೇ ಕೆಲವು ಜನರಿಗೆ ಈ ವಿಷಯ ತಿಳಿದಿದೆ. ಇಂದು ವಿಶ್ವ ಸಮಗ್ರ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದೆ. ಮತ್ತು ಉತ್ತಮ ಜೀವನವನ್ನು ಅಪೇಕ್ಷಿಸುತ್ತಿದೆ. ಆದ್ದರಿಂದ ಅವರು ರಾಸಾಯನಿಕ ಮೇಣಕ್ಕೆ ಬದಲಾಗಿ ಜೇನು ಮೇಣದತ್ತ ಹೊರಳುತ್ತಿದ್ದಾರೆ.ಇಂದು ಜೇನು ಮೇಣಕ್ಕೆ ವಿಶ್ವ ಮಾರುಕಟ್ಟೆಯಲ್ಲಿ ದೊಡ್ಡ ಬೇಡಿಕೆ ಇದೆ.ನಮ್ಮ ರೈತರು ಕೃಷಿಯ ಜತೆ ಜೇನು ಸಾಕಾಣಿಕೆಯನ್ನೂ ಮಾಡಬಹುದು. ಜೇನು ಮೇಣದಿಂದಾಗಿ ಆತನ ಆದಾಯ ಹಲವು ಪಟ್ಟು ಹೆಚ್ಚಬಹುದು. ಜೇನು ಹುಳಗಳು ಬೆಳೆ ಬೆಳೆಯುವಲ್ಲಿ ಸಹಾಯ ಮಾಡುತ್ತವೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ರೈತರ ಆದಾಯವನ್ನು ಹೆಚ್ಚಿಸುವ ಇತರ ಕ್ಷೇತ್ರಗಳೂ ಇವೆ. ಅವುಗಳೆಂದರೆ ಹೈನೋದ್ಯಮ, ಕೋಳಿ ಸಾಕಾಣಿಕೆ, ಮೀನುಗಾರಿಕೆ ವಲಯ, ಬಿದಿರು ಇತ್ಯಾದಿಗಳು. ಆಧಾರ್ ಜಾರಿಗೆ ಬರುವುದಿಲ್ಲ ಎಂದು ಭಾವಿಸಿದವರು, ಜಿ.ಎಸ್.ಟಿ.ಯನ್ನು ಕೂಡಾ ಅನುಷ್ಟಾನಕ್ಕೆ ಬರಲಾರದು ಎಂದು ಭಾವಿಸಿದ್ದರು. ಅವರಿಗೆ ಸರಕಾರ ಕುಸಿಯುವುದು ಬೇಕಾಗಿತ್ತು. ಈಗ ಆಧಾರ್ ಮತ್ತು ಜಿ.ಎಸ್.ಟಿ.ಯನ್ನು ಜಾರಿಗೆ ತರಲಾಗಿದೆ. ಅವರು ಟೀಕಿಸಲು ಹೊಸ ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ. ಮತ್ತು ಸರಕಾರಕ್ಕೆ ಸಮಸ್ಯೆಗಳನ್ನು ತರುತ್ತಿದ್ದಾರೆ. ಅವರು ಈ ರೀತಿ ಆಟ ಆಡುತ್ತಿದ್ದಾರೆ. ದೇಶವನ್ನು ನಿರಾಸೆಗೆ ದೂಡುವಂತಹ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಯಾವುದೇ ರಾಜಕೀಯ ಪಕ್ಷಗಳು ಮುಂದಾಗುವುದಿಲ್ಲ. ಆದರೆ ಒಂದು ಗುಂಪಿನ ಜನರು ದೇಶದ ಜನತೆಯನ್ನು ನಿರಾಸೆಗೆ ದೂಡಲು ಇಂತಹ ದಾರಿಯನ್ನು ಅನುಸರಿಸುತ್ತಿರುತ್ತಾರೆ. ಇಂದು ಜಿ.ಎಸ್.ಟಿ.ಯಿಂದ ಸಾಗಾಣಿಕೆ ಕ್ಷೇತ್ರಕ್ಕೆ ಭಾರೀ ದೊಡ್ದ ಲಾಭವಾಗಿದೆ. ಮೊದಲು ಅಲ್ಲೆಲ್ಲ ಟ್ರಾಫಿಕ್ ಜಾಮ್ ಮತ್ತು ಸಾರಿಗೆ ವೇಳೆ ಟೋಲ್ ತೆರಿಗೆಯಿಂದಾಗಿ ಬಹಳಷ್ಟು ಕಾಲ ವ್ಯಯವಾಗುತ್ತಿತ್ತು. ಇಂದು ಅದನ್ನು ತಡೆಯಲು ಸಾಧ್ಯವಾಗಿದೆ. ನಮ್ಮ ಸಾಗಾಣಿಕೆ ಸಾಮರ್ಥ್ಯ 60 % ಹೆಚ್ಚಾಗಿದೆ. ಒಂದು ಟ್ರಕ್ 5-6 ದಿನಗಳಲ್ಲಿ ಮಾಡಬಹುದಾಗಿದ್ದ ಕೆಲಸವನ್ನು ಇಂದು ಎರಡೂವರೆ- ಮೂರು ದಿನಗಳಲ್ಲಿ ಮಾಡಬಹುದಾಗಿದೆ.ಇದರಿಂದ ದೇಶಕ್ಕೆ ಬಹಳಷ್ಟು ಲಾಭವಾಗಿದೆ. ದೇಶದ ಪ್ರಗತಿಯಲ್ಲಿ ಮಧ್ಯಮ ವರ್ಗಕ್ಕೆ ಪ್ರಮುಖವಾದ ಪಾತ್ರವಿದೆ. ಕೆಲವು ಜನರು ಊಹಾ-ಪೋಹಗಳನ್ನು ಹರಡುವ ಮೂಲಕ ಮಧ್ಯಮ ವರ್ಗವನ್ನು ನಿರಾಸೆಗೊಳಿಸುವ, ದಾರಿ ತಪ್ಪಿಸುವ ಪ್ರಯತ್ನಗಳನ್ನು ಮಾಡಿದರು. ಈ ದೇಶದ ಮಧ್ಯಮವರ್ಗ ಉತ್ತಮ ಆಡಳಿತವನ್ನು ಮತ್ತು ಉತ್ತಮ ಸೌಲಭ್ಯಗಳನ್ನು ಅಪೇಕ್ಷಿಸುತ್ತದೆ. ವ್ಯಕ್ತಿಯೊಬ್ಬ ರೈಲ್ವೇ ಟಿಕೇಟು ಪಡೆಯುತ್ತಾನೆ ಎಂದಾದರೆ ರೈಲಿನಲ್ಲಿ ಆತ ಎಲ್ಲಾ ಸೌಲಭ್ಯಗಳನ್ನು ತನ್ನ ಹಕ್ಕು ಎಂಬಂತೆ ನಿರೀಕ್ಷೆ ಮಾಡುತ್ತಾನೆ. ಆತ ತನ್ನ ಮಕ್ಕಳನ್ನು ಶಾಲೆಗೆ ಕಳುಉಹಿಸುತ್ತಿದ್ದರೆ, ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಅಪೇಕ್ಷೆ ಮಾಡುತ್ತಾನೆ. ಆತ ಆಹಾರ ವಸ್ತುವನ್ನು ಖರೀದಿಸುವಾಗ ಅದು ಉತ್ತಮ ಗುಣಮಟ್ಟದ್ದಾಗಿರಬೇಕು ಎಂದು ಬಯಸುತ್ತಾನೆ. ಶಿಕ್ಷಣಕ್ಕೆ ಉತ್ತಮ ಸಂಸ್ಥೆಗಳನ್ನು , ಕೈಗೆಟಕುವ ದರದಲ್ಲಿ ವಸತಿ ಸೌಲಭ್ಯವನ್ನು , ಉತ್ತಮ ರಸ್ತೆಗಳನ್ನು, ಉತ್ತಮ ಸಾರಿಗೆ ಸೌಲಭ್ಯಗಳನ್ನು , ನಗರ ಮೂಲಸೌಕರ್ಯಗಳನ್ನು ಇತ್ಯಾದಿ ಒದಗಿಸುವುದು ಸರಕಾರದ ಜವಾಬ್ದಾರಿ. ಸರಕಾರ ಈ ನಿಟ್ಟಿನಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಸಕ್ರಿಯ ಕ್ರಮಗಳನ್ನು ಕೈಗೊಂಡು ಉತ್ತಮ ಜೀವನ ಮಟ್ಟಕ್ಕೆ ಸಂಬಂಧಿಸಿದ ಮಧ್ಯಮ ವರ್ಗದವರ ಆಶೋತ್ತರಗಳನ್ನು ಈಡೇರಿಸಲು ಪ್ರಯತ್ನಿಸುತ್ತಿದೆ.ಈ ವಿಶ್ವದಲ್ಲಿಯೇ ಆರಂಭದ ಹಂತದಲ್ಲಿ ಅತ್ಯಂತ ಕಡಿಮೆ ಎಂದರೆ 5 % ಆದಾಯ ತೆರಿಗೆಯ ಸ್ತರವನ್ನು ಹೊಂದಿರುವ ರಾಷ್ಟ್ರ ಭಾರತ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಇಂತಹ ವ್ಯವಸ್ಥೆ ಭಾರತ ಬಿಟ್ಟು ಬೇರಾವ ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಲಭ್ಯವಾಗುವುದಿಲ್ಲ. ಈ ವರ್ಷ ನಾವು 40,000 ರೂ.ಸ್ಟಾಂಡರ್ಡ್ ಡಿಡಕ್ಷನ್ ಅನ್ನು ಅಂಗೀಕರಿಸಿದ್ದೇವೆ. ಹಿರಿಯ ನಾಗರಿಕರಿಗೆ ತೆರಿಗೆ ವಿನಾಯತಿಯ ಪ್ರಸ್ತಾವನೆಗಳಿವೆ. ನಮ್ಮ ಸರಕಾರ ಮದ್ಯಮವರ್ಗದವರಿಗೆ ಲಾಭಗಳನ್ನು ಹೆಚ್ಚಿಸಲು ಪ್ರತೀ ವರ್ಷ 12,000 ಕೋ.ರೂ.ಗಳನ್ನು ಒದಗಿಸುವ ಪ್ರಯತ್ನ ಮಾಡಿದೆ. ನಾವು 31,000 ಕೋ.ರೂ.ಗಳಿಗೂ ಅಧಿಕ ಹಣವನ್ನು ಪ್ರಧಾನ ಮಂತ್ರಿ ಆವಾಸ್ ಯೋಜನಾ (ನಗರ) ಕ್ಕೆ ಒದಗಿಸಿದ್ದೇವೆ. ಇದೇ ಮೊದಲ ಬಾರಿಗೆ ಮಧ್ಯಮವರ್ಗದವರು ಸಾಲದ ಲಾಭ ಪಡೆಯಲಿದ್ದಾರೆ. ಇದನ್ನು ಮಾಡಿರುವುದು ನಮ್ಮ ಸರಕಾರ. ನಾವು ಹೊಸ ಐ.ಐ.ಟಿ.ಗಳು, ಐ.ಐ.ಎಂ.ಗಳು,ಎ.ಐ.ಐ.ಎಂ.ಎಸ್.ಗಳನ್ನು ಆರಂಭಿಸಿದ್ದೇವೆ ಮತ್ತು 11 ದೊಡ್ಡ ನಗರಗಳಲ್ಲಿ ಮೆಟ್ರೋಗಳನ್ನು ಆರಂಭಿಸುತ್ತಿದ್ದೇವೆ. ಮತ್ತು 32 ಲಕ್ಷಕ್ಕೂ ಅಧಿಕ ಎಲ್.ಇ.ಡಿ. ಬೀದಿ ದೀಪಗಳನ್ನು ಒದಗಿಸಿದ್ದೇವೆ .ಇದರಿಂದ ಹೊಸ ಕೈಗಾರಿಕೆಗಳಿಗೆ, ಎಂ.ಎಸ್.ಎಂ.ಇ.ಗಳಿಗೆ ಅನುಕೂಲವಾಗಿರುವುದನ್ನು ಯಾರೂ ನಿರಾಕರಿಸುವಂತಿಲ್ಲ. ಎಂ.ಎಸ್. ಎಂ.ಇ. ವಲಯದ ಜತೆ ಸೇರಿಕೊಂಡಿರುವ ಜನರು ಮಧ್ಯಮವರ್ಗದವರು ಮತ್ತು ಮೇಲ್ಮಧ್ಯಮ ವರ್ಗದ ಕುಟುಂಬದವರು. ನಾವು 2.5 ಕೋಟಿ ರೂ. ವ್ಯವಹಾರದ ಮೇಲಿನ ತೆರಿಗೆಯ ದರವನ್ನು 30 % ನಿಂದ 25 % ಗೆ ಇಳಿಸಿದ್ದೇವೆ. ಮಧ್ಯಮವರ್ಗದವರ ಕಲ್ಯಾಣಕ್ಕಾಗಿ ಇದನ್ನು ಮಾಡಿದ್ದೇವೆ. 2 ಕೋಟಿ ರೂ.ಗಳವರೆಗೆ ವ್ಯಾಪಾರ ವಹಿವಾಟು ನಡೆಸುವ ವ್ಯಾಪಾರಸ್ತರು ಬ್ಯಾಂಕುಗಳ ಮೂಲಕ ವ್ಯವಹರಿಸುತ್ತಾರೆ.ಸರಕಾರ ಅವರ ಆದಾಯವನ್ನು ವಹಿವಾಟಿನ 8 % ಗೆ ಬದಲಾಗಿ 6 % ಎಂದು ಲೆಕ್ಕಾಚಾರ ಮಾಡುತ್ತದೆ. ಇದರ ಅರ್ಥ ಅವರಿಗೆ ತೆರಿಗೆಯಲ್ಲಿ 2 % ಉಳಿತಾಯವಾಗುತ್ತದೆ. ಜಿ.ಎಸ್.ಟಿ. ಅಡಿಯಲ್ಲಿ 1.5 ಕೋ.ರೂ. ವರೆಗೆ ವಹಿವಾಟು ಇರುವವರು ಕಂಪೊಸಿಶನ್ ಯೋಜನೆ ವ್ಯಾಪ್ತಿಗೆ ಬರುವುದರಿಂದ ಮತ್ತು ಅವರು ವಹಿವಾಟಿನ 1 % ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಇದು ಕೂಡಾ ವಿಶ್ವದಲ್ಲಿಯೇ ಅತ್ಯಂತ ಕನಿಷ್ತ ಪ್ರಮಾಣ.
ಗೌರವಾನ್ವಿತ ಸ್ಪೀಕರ್ ಮೇಡಂ
ಜನ್ ಧನ್ ಯೋಜನೆ ಅಡಿಯಲ್ಲಿ 31 ಕೋಟಿಗೂ ಅಧಿಕ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. 18 ಕೋಟಿ ಬಡಜನರು ಆರೋಗ್ಯ ವಿಮೆಯಿಂದ ಲಾಭ ಪಡೆಯುತ್ತಾರೆ. ಸಂಕಷ್ಟದಲ್ಲಿರುವ ಬಡವರು ಈ ಯೋಜನೆಯಡಿ 2000 ಕೋ.ರೂ.ಗಳನ್ನು ಪಡೆದಿದ್ದಾರೆ ಎಂಬುದನ್ನು ತಿಳಿಯಲು ನಿಮಗೆ ಸಂತೋಷವಾಗಬಹುದು.ಇಂತಹ ಅಸಾಮಾನ್ಯ ಕೆಲಸಗಳನ್ನು ನಾವು ಮಾಡಿದ್ದೇವೆ.
3 ಕೋಟಿ 30 ಲಕ್ಷ ಬಡ ತಾಯಂದಿರು ಮತ್ತು ಹೆಣ್ಣು ಮಕ್ಕಳು ಉಜ್ವಲ ಯೋಜನೆಯಿಂದ ಲಾಭ ಪಡೆದಿದ್ದಾರೆ. ಮೊದಲು ಜನರು ಅನಿಲ ಸಂ
Several members of Parliament expressed their thoughts on various subjects. The address by the Honourable President does not belong to any party. It is about the aspirations of every Indian: PM @narendramodi in the Lok Sabha
— PMO India (@PMOIndia) February 7, 2018
When we speak about creating new states, we remember the manner in which Atal Bihari Vajpayee Ji created Uttarakhand, Jharkhand and Chhattisgarh. He showed how farsighted decision making is done: PM @narendramodi in the Lok Sabha https://t.co/0aHXLrts3D
— PMO India (@PMOIndia) February 7, 2018
I see that whenever we are criticised by select Opposition parties, substance is lacking. They go back to saying- when we were in power....
— PMO India (@PMOIndia) February 7, 2018
This is the same party that divided India: PM @narendramodi in the Lok Sabha
For decades, one party devoted all their energies to serving one family. The interests of the nation were looked over just for the interests of one family: PM @narendramodi
— PMO India (@PMOIndia) February 7, 2018
How can one of the leaders say India got a democracy due to Pandit Nehru and the Congress Party? Is this their reading of India's history? What arrogance is this: PM @narendramodi in the Lok Sabha
— PMO India (@PMOIndia) February 7, 2018
India did not get democracy due to Pandit Nehru, as Congress wants us to believe. Please look at our rich history. There are many examples of rich democratic traditions that date back centuries ago. Democracy is integral to this nation and is in our culture: PM @narendramodi
— PMO India (@PMOIndia) February 7, 2018
When Rajiv Gandhi landed in Hyderabad, how did he behave with a Congress leader Mr. T Anjaiah. He humiliated a big leader, who did not belong to a privileged background: PM @narendramodi
— PMO India (@PMOIndia) February 7, 2018
How did the Congress act in Kerala, how did they treat the @Akali_Dal_ in Punjab, how did they behave in Tamil Nadu? Why did Congress dismiss so many state governments at their will. This is no commitment to democracy: PM @narendramodi
— PMO India (@PMOIndia) February 7, 2018
How did the Congress act in Kerala, how did they treat the @Akali_Dal_ in Punjab, how did they behave in Tamil Nadu? Why did Congress dismiss so many state governments at their will. This is no commitment to democracy: PM @narendramodi
— PMO India (@PMOIndia) February 7, 2018
In December, did we witness an 'election' or coronation for the post of Congress President? One youngster raised his voice about this as well: PM @narendramodi in the Lok Sabha
— PMO India (@PMOIndia) February 7, 2018
The NDA Government has changed the work culture in the nation. Projects are not only thought about well but also executed in a timely manner: PM @narendramodi in the Lok Sabha
— PMO India (@PMOIndia) February 7, 2018
The NDA government is building more roads than the previous one. We have given a strong boost to the infrastructure sector across the nation: PM @narendramodi
— PMO India (@PMOIndia) February 7, 2018
More villages are getting optical fibre network in the last three years than they got previously. This is the transformation happening: PM @narendramodi in the Lok Sabha
— PMO India (@PMOIndia) February 7, 2018
Since Kharge Ji spoke about railways and Karnataka, let me tell the truth about the Bidar-Kalburgi rail line. The project was approved by the Vajpayee Government and from 2004 till 2013 nothing was done. It is when a Government under @BSYBJP gave approvals work could begin: PM
— PMO India (@PMOIndia) February 7, 2018
The approvals by the @BSYBJP Government in Karnataka made it possible to work quickly on the rail line. We do not bother who is the local MP or MLA, which party they belong to. We serve the nation and care for 125 crore Indians: PM @narendramodi
— PMO India (@PMOIndia) February 7, 2018
The way people of Rajasthan were misled about the Barmer refinery was appalling. Just for votes, lies were said. It is in the last three years that the Government of India and the Rajasthan Government worked together to sort out the pending issues: PM @narendramodi in LS
— PMO India (@PMOIndia) February 7, 2018
I can see the energy and enthusiasm in our youth. They want to do something on their own, they want to launch their own start-ups. Our Government is giving wings to the aspirations of India's middle class: PM @narendramodi in the Lok Sabha
— PMO India (@PMOIndia) February 7, 2018
Our government had the opportunity to prepare an aviation policy that focuses on smaller cities, towns so that more Indians can fly: PM @narendramodi
— PMO India (@PMOIndia) February 7, 2018
When our Government took office in 2014, the chorus from the opposition was - Modi will scrap @UIDAI but when we made Aadhaar more effective in terms of enabling better and effective service delivery, suddenly the opposition began opposing Aadhaar: PM @narendramodi
— PMO India (@PMOIndia) February 7, 2018
When the corrupt and middlemen are out of work, obviously the Congress will be unhappy: PM @narendramodi
— PMO India (@PMOIndia) February 7, 2018
India's middle class desires good education facilities, affordable housing, good infrastructure. They want 'Ease of Living' which we are committed to providing: PM @narendramodi
— PMO India (@PMOIndia) February 7, 2018
I know the Government's efforts to eliminate corruption & black money are hurting a select group of people. Today, people who served as Chief Ministers are in jail. However powerful one was, if one has been corrupt, that person will be punished. We are in an era of honesty: PM
— PMO India (@PMOIndia) February 7, 2018
The workings of our previous Government are responsible for the NPA mess. They are 100% responsible and nobody else. The banking policies of the previous Governments were not proper. Middlemen were happy, the country was suffering: PM @narendramodi in Lok Sabha
— PMO India (@PMOIndia) February 7, 2018
I have to tell the entire nation about the NPA mess our previous Government created: PM @narendramodi
— PMO India (@PMOIndia) February 7, 2018
Is there any reason why LED bulbs were so expensive till 2014? It was affecting the middle class. The price of LED bulbs today are affordable: PM @narendramodi
— PMO India (@PMOIndia) February 7, 2018
Is there any reason why LED bulbs were so expensive till 2014? It was affecting the middle class. The price of LED bulbs today are affordable: PM @narendramodi
— PMO India (@PMOIndia) February 7, 2018
We have to create a new India. Let us work together to fulfil the dreams of the people: PM @narendramodi
— PMO India (@PMOIndia) February 7, 2018