ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ವಡೋದರಾ ವಿಮಾನ ನಿಲ್ದಾಣದ ನೂತನ ಸಮಗ್ರ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾ>ನಾಡಿದ ಅವರು, ಆರ್ಥಿಕತೆಗೆ ಅದರಲ್ಲೂ ಪ್ರವಾಸೋದ್ಯಮ ವಲಯಕ್ಕೆ ವಾಯು ಸಂಪರ್ಕ ಮಹತ್ವವಾದ್ದು ಎಂದು ಒತ್ತಿ ಹೇಳಿದರು. ಕೇಂದ್ರ ಸರ್ಕಾರ ವಾಯುಯಾನ ನೀತಿಯನ್ನು ತಂದಿದ್ದು, ಇದು ಈ ವಲಯದ ಪ್ರಗತಿ ಮತ್ತು ಭವಿಷ್ಯದ ದಿಕ್ಕು ತೋರುತ್ತದೆ ಎಂದರು.
ವಡೋದರ ವಿಮಾನ ನಿಲ್ದಾಣ ಕೋಚ್ಚಿಯ ಬಳಿಕ ದೇಶದ ಎರಡನೇ ಪರಿಸರ ಸ್ನೇಹಿ ವಿಮಾನ ನಿಲ್ದಾಣವಾಗಿದೆ ಎಂದು ಹೇಳಿದರು.
ದಿವ್ಯಾಂಗದವರಿಗೆ ನೆರವು ಮತ್ತು ಸಾಧನ ಸಲಕರಣೆ ವಿತರಿಸಿದ ಬಳಿಕ ಮಾತನಾಡಿದ ಪ್ರಧಾನಿ, ಮೂಲಸೌಕರ್ಯವನ್ನು ಸೃಷ್ಟಿಸುವಾಗ ಸದಾ ದಿವ್ಯಾಂಗದವರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕು ಎಂದರು. ಉದ್ದೇಶಿತ ಫಲಾನುಭವಿಗಳಿಗೆ ಯೋಜನೆಗಳು ಮತ್ತು ಉಪಕ್ರಮಗಳ ಲಾಭ ತಲುಪುವುದನ್ನು ಖಾತ್ರಿಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಅದಕ್ಕೆ ಅತ್ಯುನ್ನತ ಆದ್ಯತೆ ನೀಡಿದೆ ಎಂದರು. ದಲಿತರಿಗೆ ಮತ್ತು ಅಂಚಿನಲ್ಲಿರುವವರಿಗೆ ರೂಪಿಸಿರುವ ಉಪಕ್ರಮಗಳು ಕೇಂದ್ರ ಸರ್ಕಾರದ ಕಾರ್ಯವಿಧಾನದಲ್ಲಿ ಮಧ್ಯ ವೇದಿಕೆಯಲ್ಲಿವೆ ಎಂದರು.
ಬಡತನ, ಶಿಕ್ಷಣದ ಕೊರತೆ ಮತ್ತು ಆರೋಗ್ಯರಕ್ಷಣೆಯ ಲಭ್ಯತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಅಭಿವೃದ್ಧಿಯೊಂದೇ ಕೀಲಿಕೈ ಎಂದು ಪ್ರಧಾನಿ ಹೇಳಿದರು.
AKT/HS
A great gift for the citizens of Vadodara…the new terminal building is a big boost to the city’s infrastructure. pic.twitter.com/mdZcNbwyzn
— Narendra Modi (@narendramodi) October 22, 2016
Aviation sector’s growth will bring more tourists to India, which means more economic opportunities for citizens. https://t.co/78aMS8mW41
— Narendra Modi (@narendramodi) October 22, 2016
Always special to spend time with my Divyang sisters and brothers. Meeting their families was also very humbling & inspiring. pic.twitter.com/J14scFRCgq
— Narendra Modi (@narendramodi) October 22, 2016
Be it timely distribution of equipment, job opportunities & focus on accessibility, talked about initiatives of NDA Govt for Divyang welfare
— Narendra Modi (@narendramodi) October 22, 2016
Let us ensure that every infrastructure we create is sensitive to the requirements of Divyang sisters & brothers. https://t.co/VJv6ZBnWaU
— Narendra Modi (@narendramodi) October 22, 2016