Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಾಷಿಂಗ್ಟನ್ ಡಿ.ಸಿ.ಯಲ್ಲಿ ಪ್ರಧಾನಮಂತ್ರಿಯವರ ಕಾರ್ಯಕ್ರಮ ಜೂನ್ 6, 2016.

ವಾಷಿಂಗ್ಟನ್ ಡಿ.ಸಿ.ಯಲ್ಲಿ ಪ್ರಧಾನಮಂತ್ರಿಯವರ ಕಾರ್ಯಕ್ರಮ ಜೂನ್ 6, 2016.

ವಾಷಿಂಗ್ಟನ್ ಡಿ.ಸಿ.ಯಲ್ಲಿ ಪ್ರಧಾನಮಂತ್ರಿಯವರ ಕಾರ್ಯಕ್ರಮ ಜೂನ್ 6, 2016.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೋಮವಾರ ಮಧ್ಯಾಹ್ನ ವಾಷಿಂಗ್ಟನ್ ಡಿ.ಸಿ.ಗೆ ಆಗಮಿಸಿದರು. ಅರ್ಲಿಂಗ್ಟನ್ ರುದ್ರಭೂಮಿಯಲ್ಲಿ ಅವರು ಅಜ್ಞಾತ ಯೋಧರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.

ಅಲ್ಲದೆ ವ್ಯೋಮನೌಕೆ ಕೊಲಂಬಿಯಾ ಸ್ಮಾರಕಕ್ಕೂ ಅವರು ಪುಷ್ಪಗುಚ್ಛವಿಟ್ಟು ನಮಿಸಿದರು. ಕೊಲಂಬಿಯಾ ದುರಂತದಲ್ಲಿ ಮಡಿದ ವ್ಯೋಮ ಯಾನಿ ಕಲ್ಪನಾ ಚಾವ್ಲಾರ ಪತಿ ಶ್ರೀ ಜೀನ್ ಪಿಯರ್ ಹ್ಯಾರಿಸನ್ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭಾರತಕ್ಕೆ ಪ್ರತಿಮೆಗಳನ್ನು ಮರಳಿಸುವ ಕಾರ್ಯಕ್ರಮದಲ್ಲೂ ಪ್ರಧಾನಿ ಪಾಲ್ಗೊಂಡರು. 200 ಕಲಾಕೃತಿಗಳನ್ನು ಭಾರತಕ್ಕೆ ಮರಳಿಸುವ ಪ್ರಕ್ರಿಯೆ ಆರಂಭವಾಗಿದ್ದು, ಈವರೆಗೆ 12 ಕಲಾಕೃತಿ ಮರಳಿಸಲಾಗಿದೆ ಎಂದು ಅಮೆರಿಕದ ಅಟಾರ್ನಿ ಜನರಲ್ ಲೊರೆಟ್ಟಾ ಲಿಂಚ್ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಪರಂಪರೆ ರಾಷ್ಟ್ರಗಳ ನಡುವೆ ಶ್ರೇಷ್ಠವಾದ ಬಾಂಧವ್ಯದ ಶಕ್ತಿಯಾಗಿದೆ ಎಂದು ಹೇಳಿದರು. ಕೆಲವರು ಈ ಕಲಾಕೃತಿಗಳನ್ನು ಹಣದಿಂದ ಅಳೆಯಬಹುದು. ಆದರೆ ಭಾರತಕ್ಕೆ ಅದರ ಮೌಲ್ಯ ಹಣಕ್ಕಿಂತ ಮಿಗಿಲು, ಏಕೆಂದರೆ ಅವರು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಭಾಗ ಎಂದರು.

ಬ್ರೂಕಿಂಗ್ಸ್ ಸಂಸ್ಥೆ, ಅಟ್ಲಾಂಟಿಕ್ ಮಂಡಲಿ, ಮತ್ತು ಅಂತಾರಾಷ್ಟ್ರೀಯ ಶಾಂತಿಗಾಗಿ ಕಾರ್ನೆಗೀ ಎಂಡೋಮೆಂಟ್ ಸೇರಿದಂತೆ ಚಿಂತಕರ ಚಾವಡಿಯೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು.