ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡಮಿ (ಐ.ಎನ್.ಎಸ್.ಎ) ಮತ್ತು ಬೆಲಾಸರ್ ನ ರಾಷ್ಟ್ರೀಯ ವಿಜ್ಞಾನ ಅಕಾಡಮಿ (ಎನ್.ಎ.ಎಸ್.ಬಿ.) ನಡುವೆ ವಿಜ್ಞಾನ, ತಂತ್ರಜ್ಞಾನ, ಕೃಷಿ, ಇತ್ಯಾದಿ ಕ್ಷೇತ್ರದಲ್ಲಿ ಪರಸ್ಪರರ ಪ್ರಯೋಜನಕ್ಕಾಗಿ ಆಗಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರ ಒಪ್ಪಂದದ ಬಗ್ಗೆ ವಿವರಿಸಲಾಯಿತು.
ಬೆಲಾಸರ್ ಅಧ್ಯಕ್ಷ ಘನತೆವೆತ್ತ ಶ್ರೀ ಅಲೆಕ್ಸಾಂಡರ್ ಲುಕಶಂಕೋ ಅವರ ಭೇಟಿ ವೇಳೆ ದೆಹಲಿಯಲ್ಲಿ 2017ರ ಸೆಪ್ಟೆಂಬರ್ 12ರಂದು ಈ ಒಪ್ಪಂದದ ವಿನಿಮಯ ಆಗಿತ್ತು.
ಈ ಒಪ್ಪಂದವು ಭಾರತ ಮತ್ತು ಬೆಲಾಸರ್ ನಿಂದ ಜಾಗತಿಕವಾಗಿ ಸ್ಪರ್ಧಾತ್ಮಕವಾದ ತಂತ್ರಜ್ಞಾನವನ್ನು ಗುರುತಿಸಿ, ನಿರ್ಧರಿಸಿ, ಅಭಿವೃದ್ಧಿಪಡಿಸಿ ಮತ್ತು ವಾಣಿಜ್ಯೀಕರಣ ಮಾಡುವ ಗುರಿಯನ್ನು ಹೊಂದಿದೆ. ಇದು ಎರಡೂ ದೇಶಗಳಲ್ಲಿನ ಸಂಸ್ಥೆಗಳಿಗೆ ಸಂಶೋಧನೆ, ತಂತ್ರಜ್ಞಾನ ವರ್ಗಾವಣೆ, ವೈಜ್ಞಾನಿಕ ಮತ್ತು ಆರ್ಥಿಕ ಲಾಭಕ್ಕಾಗಿ ಜಂಟಿ ಕಾರ್ಯಾಗಾರ ಮತ್ತು ಭೇಟಿಯ ವಿನಿಮಯಕ್ಕೆ ಬೆಂಬಲ ನೀಡುತ್ತದೆ.