Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಆರ್ಮೇನಿಯಾ ನಡುವೆ ಎಂ.ಓ.ಯು.ಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಆರ್ಮೇನಿಯಾ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದವು, ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿನ ಸಹಕಾರವನ್ನು ಹೆಚ್ಚಿಸಲಿದೆ ಮತ್ತು ವಿಪತ್ತಿನ ಸಂದರ್ಭದಲ್ಲಿ ಎರಡೂ ರಾಷ್ಟ್ರಗಳ ಜನತೆಯ ಸುರಕ್ಷತೆಗೆ ಮತ್ತು ಕ್ಷೇಮಕ್ಕೆ ಕೊಡುಗೆ ನೀಡಲಿದೆ. ಪರಸ್ಪರ ಹಿತದಲ್ಲಿರುವ ವಿಪತ್ತು ನಿರ್ವಹಣೆಯ ಸಂಬಂಧಿತ ಕ್ಷೇತ್ರಗಳ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಇದು ಕಾರಣವಾಗಲಿದೆ.

ಈ ತಿಳಿವಳಿಕೆ ಒಪ್ಪಂದವು ಮತ್ತೊಂದು ರಾಷ್ಟ್ರದ ವಿಪತ್ತು ನಿರ್ವಹಣೆ ವ್ಯವಸ್ಥೆಯಿಂದ ಭಾರತ ಮತ್ತು ಆರ್ಮೇನಿಯಾ ಎರಡಕ್ಕೂ ಲಾಭವಾಗುವಂಥ ಮತ್ತು ಸನ್ನದ್ಧತೆ, ಸ್ಪಂದನೆ ಮತ್ತು ಸಾಮರ್ಥ್ಯವರ್ಧನೆ ಕ್ಷೇತ್ರವನ್ನು ಬಲಪಡಿಸಲು ನೆರವಾಗಲಿದೆ.