Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಮಾ ಮೇಲ್ವಿಚಾರಕರ ಅಂತಾರಾಷ್ಟ್ರೀಯ ಸಂಘ (ಐಎಐಎಸ್)ಕ್ಕೆ ಐ.ಆರ್.ಡಿ.ಎ.ಐ ಅನ್ನು ಸಹಿದಾರನಾಗಿ ಸೇರಿಸಿಕೊಳ್ಳಲು, ಬಹುಪಕ್ಷೀಯ ತಿಳಿವಳಿಕೆ ಒಪ್ಪಂದ (ಎಂಎಂಓಯು)ಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ವಿಮಾ ಮೇಲ್ವಿಚಾರಕರ ಅಂತಾರಾಷ್ಟ್ರೀಯ ಸಂಘ (ಐಎಐಎಸ್)ಕ್ಕೆ ಐ.ಆರ್.ಡಿ.ಎ.ಐ ಅನ್ನು ಸಿಗ್ನೇಟರಿಯಾಗಿ ಸೇರಿಸಿಕೊಳ್ಳಲು, ಬಹುಪಕ್ಷೀಯ ತಿಳಿವಳಿಕೆ ಒಪ್ಪಂದ (ಎಂಎಂಓಯು)ಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

ವಿಮಾ ಮೇಲ್ವಿಚಾರಕರ ಅಂತಾರಾಷ್ಟ್ರೀಯ ಸಂಘಟನೆಯು ವಿಮಾ ಮೇಲ್ವಿಚಾರಕರ ನಡುವೆ ಮಾಹಿತಿಯ ವಿನಿಮಯಕ್ಕಾಗಿ ಇರುವ ಒಂದು ಜಾಗತಿಕ ಸಹಕಾರ ಚೌಕಟ್ಟಾಗಿದೆ.

ವಿಮಾ ಮೇಲ್ವಿಚಾರಕರ ಅಂತಾರಾಷ್ಟ್ರೀಯ ಸಂಘದ ಬಹು ಪಕ್ಷೀಯ ತಿಳಿವಳಿಕೆ ಒಪ್ಪಂದವು ಮಾಹಿತಿಯ ವಿನಿಮಯ ಸಹಕಾರ ಮತ್ತು ಮಾಹಿತಿಯ ಮನವಿಗಳನ್ನು ನಿರ್ವಹಿಸುವ ಪ್ರಕ್ರಿಯೆಯಲ್ಲಿ ಅದರ ಸಹಿದಾರರ ಹೇಳಿಕೆಯಾಗಿದೆ. ಹಣಕಾಸು ಮಾರುಕಟ್ಟೆಯ ಸಂಘಟಿತ ಹೆಚ್ಚಳದೊಂದಿಗೆ ಮತ್ತು ಅಂತಾರಾಷ್ಟ್ರೀಯ ಸಕ್ರಿಯ ವಿಮಾ ಕಂಪನಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಮಾ ಮೇಲ್ವಿಚಾರಕರ ನಡುವೆ ಮಾಹಿತಿಯ ವಿನಿಮಯ ಮತ್ತು ಪರಸ್ಪರ ಸಹಕಾರದ ಅಗತ್ಯ ಹೆಚ್ಚಾಗಿತ್ತು.

ಈ ಹಿನ್ನೆಲೆಯಲ್ಲಿ ಐಆರ್.ಡಿ.ಎ.ಐ. ವಿಮಾ ಮೇಲ್ವಿಚಾರಕರ ಅಂತಾರಾಷ್ಟ್ರೀಯ ಸಂಘಟನೆಯ, ಬಹು ಪಕ್ಷೀಯ ತಿಳಿವಳಿಕೆ ಒಪ್ಪಂದದಲ್ಲಿ ಸಹಿ ಹಾಕುವ ಸದಸ್ಯನಾಗಿದೆ. ಗಡಿಯಾಚಿಗಿನ ವಿಚಾರಗಳು ಉದ್ಭವಿಸಿದಾಗ, ಯಾವುದೇ ದ್ವಿಪಕ್ಷೀಯ ಒಪ್ಪಂದದ ಅನುಪಸ್ಥಿತಿಯಲ್ಲಿ ಐಎಐಎಸ್, ಎಂ.ಎಂ.ಓ.ಯು. ಸಹಿ ಪ್ರಾಧಿಕಾರಗಳ ನಡುವೆ ವಿಮಾ ಕಂಪನಿಗಳ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಔಪಚಾರಿಕ ಆಧಾರದ ಸಹಕಾರ ಮತ್ತು ಮಾಹಿತಿ ವಿನಿಮಯಕ್ಕೆ ಅವಕಾಶ ಕೊಡುತ್ತದೆ.

ಐ.ಎ.ಐ.ಎಸ್. ಎಂ.ಎಂ.ಓ.ಯು. ಸ್ವರೂಪ ಹಾಲಿ ಇರುವ ಒಪ್ಪಂದಗಳಿಗಿಂತಲೂ ವಿಸ್ತಾಪವಾಗಿದ್ದು, ಇದು ಇತರ ನಿಯಂತ್ರಿತ ಪ್ರಾಧಿಕಾರಗಳು ಅಂದರೆ ಅಕ್ರಮ ಹಣ ವರ್ಗಾವಣೆ ಅಡಿಯಲ್ಲಿನ ವಿಮಾ ಮಧ್ಯವರ್ತಿಗಳು (ಎಎಂಎಲ್) ಮತ್ತು ಭಯೋತ್ಪಾದಕತೆಗೆ ಹಣಕಾಸು ಪೂರೆಕೆ ನಿಗ್ರಹ (ಸಿಎಫ್.ಟಿ.)ಗಳ ಮೇಲ್ವಿಚಾರಣೆಗೂ ಅವಕಾಶ ಕೊಡುತ್ತದೆ.

****

AKT/VBA/SH