ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಭಾರತ ಮತ್ತು ವಿಶ್ವ ಸಂಸ್ಥೆಯ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ಕಾಯ(ಯುಎನ್- ಮಹಿಳೆ)ದೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಈ ಪ್ರಸ್ತಾಪವು, ಕಾಯಿದೆ, ನೀತಿ ಮತ್ತು ಕಾರ್ಯಕ್ರಮಗಳ ಮೂಲಕ ರೂಪಿಸಿರುವ ಲಿಂಗ ಸಮಾನತೆಯ ಅವಕಾಶಗಳನ್ನು ಉತ್ತಮವಾಗಿ ಸದುಪಯೋಗಪಡಿಸಿಕೊಳ್ಳಲು ಪಂಚಾಯ್ತಿರಾಜ್ ಸಂಸ್ಥೆಗಳ (ಪಿಆರ್.ಐ.ಗಳು) ಸೇರಿದಂತೆ ಸಾಂಸ್ಥಿಕ ಆಡಳಿತ ಸಾಮರ್ಥ್ಯವನ್ನು ಬಲಪಡಿಸಲು ಪಂಚಾಯತಿರಾಜ್ ಸಚಿವಾಲಯಕ್ಕೆ ತಾಂತ್ರಿಕ ಬೆಂಬಲ ಒದಗಿಸುತ್ತದೆ.
ಪಂಚಾಯ್ತಿರಾಜ್ ಸಚಿವಾಲಯ ಮತ್ತು ವಿಶ್ವಸಂಸ್ಥೆ – ಮಹಿಳೆ ಎರಡೂ ಸೇರಿ ಪಂಚಾಯ್ತಿರಾಜ್ ಸಂಸ್ಥೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಉತ್ತೇಚಿಸಲು, ಚುನಾಯಿತ ಮಹಿಳಾ ಪ್ರತಿನಿಧಿಗಳ ಸಾಮರ್ಥ್ಯವರ್ಧನೆಗೆ ಅವರನ್ನು ಸಬಲೀಕರಿಸುವುದು ಮತ್ತು ಅವರ ಸಾಮರ್ಥ್ಯ ಹೆಚ್ಚಳ ಮಾಡಲು ಸಹಯೋಗದಿಂದ ಕೆಲಸ ಮಾಡಿವೆ,
ಹಿಂದಿನ ಲಾಭದ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ಈಗ ಲಿಂಗ ಪ್ರತಿಕ್ರಿಯಾತ್ಮಕ ಆಡಳಿತ ಉತ್ತೇಜಿಸಲು ಕಾನೂನು, ನೀತಿ ಮತ್ತು ಕಾರ್ಯಕ್ರಮಗಳ ಪರಿಣಾಮಕಾರಿ ಜಾರಿ ಮತ್ತು ಸಕ್ರಿಯ ಆಡಳಿತ ವಿನ್ಯಾಸಕ್ಕಾಗಿ ಒಗ್ಗೂಡಿ ಶ್ರಮಿಸಲಿವೆ. ಸಾಮರ್ಥ್ಯಾಭಿವೃದ್ಧಿ ಪ್ರಯತ್ನಗಳು, ಪರಸ್ಪರರಿಗೆ ಲಾಭ ತರುವಂಥ ಮತ್ತು ಉತ್ತಮ ಆಡಳಿತದ ಹಂಚಿಕೆಯ ಅಭಿಯಾನ, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ಸೇರಿದಂತೆ ಪಂಚಾಯ್ತಿರಾಜ್ ಸಚಿವಾಲಯದ ಉಪಕ್ರಮಗಳನ್ನು ಕಾರ್ಯಗತಗೊಳಿಸಲು ಎರಡೂ ಪಕ್ಷಗಳು ಒಪ್ಪಿಗೆ ನೀಡಿವೆ. ದೀರ್ಘಾವಧಿಯಲ್ಲಿ, ಇದು ಭಾರತದಲ್ಲಿ ಗ್ರಾಮೀಣ ಮಹಿಳೆಯರ ಸ್ಥಾನಮಾನದ ಸುಧಾರಣೆಗೆ ಅವಕಾಶ ಕಲ್ಪಿಸುತ್ತದೆ, ಜೊತೆಗೆ ಸುಸ್ಥಿರ ಅಭಿವೃದ್ಧಿ ಗುರಿಗಳು ಕುರಿತ ಬೀಜಿಂಗ್ ಕ್ರಿಯಾ ವೇದಿಕೆಯ ತನ್ನ ಬದ್ಧತೆಯಂತೆ ಮಹಿಳೆಯರ ವಿರುದ್ಧದ ಎಲ್ಲ ರೀತಿಯ ತಾರತಮ್ಯ (ಸಿಇಡಿಎಡಬ್ಲ್ಯು) ನಿವಾರಿಸುವುದಕ್ಕೆ ಕೊಡುಗೆಯನ್ನೂ ನೀಡಲಿದೆ.
ಈ ಉದ್ದೇಶಿತ ತಿಳಿವಳಿಕೆ ಒಪ್ಪಂದವು, ವಿಶ್ವಸಂಸ್ಥೆಯ ಅಭಿವೃದ್ಧಿ ನೆರವು ಚೌಕಟ್ಟಿನ ಅಡಿಯಲ್ಲಿ ವಿಸ್ತೃತ ಸಹಕಾರಿ ಚೌಕಟ್ಟಿನಲ್ಲಿ ಪಂಚಾಯ್ತಿ ರಾಜ್ ಸಚಿವಾಲಯ ಮತ್ತು ವಿಶ್ವಸಂಸ್ಥೆ- ಮಹಿಳೆ ಗುರುತಿಸಿರುವ ನಿರ್ದಿಷ್ಟ ಚಟುವಟಿಕೆಗಳ ಜಾರಿಯಲ್ಲಿ ಕಾಲಮಿತಿಯ ಫಲಿತಾಂಶ ಸಾಧನೆಗೆ ಅವಕಾಶ ಕಲ್ಪಿಸುತ್ತದೆ. ಈ ತಿಳಿವಳಿಕೆ ಒಪ್ಪಂದವು ಆ ಮೂಲಕ ಈ ಮಹತ್ವದ ಪಾಲುದಾರಿಕೆಯ ಕಾರ್ಯಾಚರಣೆಗೆ ಅವಕಾಶ ನೀಡುತ್ತದೆ.
ಈ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿನ ಕಾರ್ಯಚಟುವಟಿಕೆಗಳು ಆರು ರಾಜ್ಯಗಳು ಅಂದರೆ ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ, ಕರ್ನಾಟಕ, ರಾಜಾಸ್ತಾನ ಮತ್ತು ಮಧ್ಯಪ್ರದೇಶಗಳ ಜಿಲ್ಲೆಗಳು ಮತ್ತು ಉಪ ಜಿಲ್ಲಾ ಮಟ್ಟದಲ್ಲಿ ಜಾರಿಗೆ ಬರಲಿವೆ.
AKT/VBA/SH