Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವ ಆನೆ ದಿನಾಚರಣೆಯ ಈ ಸಂದರ್ಭದಲ್ಲಿ ಭಾರತದ ಬಲವಾದ ಸಂರಕ್ಷಣಾ ಪ್ರಯತ್ನಗಳನ್ನು ಎತ್ತಿ ಹಿಡಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಿಶ್ವ ಆನೆ ದಿನದಂದು, ಭಾರತದ ಪರಿಸರ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಭವ್ಯವಾದ ಆನೆಯನ್ನು ನಾವು ಆಚರಿಸುತ್ತೇವೆ ಎಂದು ಹೇಳಿದ್ದಾರೆ. ಭಾರತವು ಜಗತ್ತಿನ ಶೇಕಡಾ 60ಕ್ಕಿಂತ ಹೆಚ್ಚಿನ ಏಷ್ಯನ್ ಕಾಡಾನೆಗಳ ನೆಲೆಯಾಗಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.

ನಮ್ಮ ರಾಷ್ಟ್ರವು 33 ಆನೆ ಮೀಸಲು ಪ್ರದೇಶಗಳನ್ನು ಹೊಂದಿದ್ದು, ಅವು ಆನೆಗಳಿಗೆ ಆವಾಸಸ್ಥಾನಗಳನ್ನು ಒದಗಿಸಿ, ಅವುಗಳ ದೀರ್ಘಕಾಲೀನ ಸಂರಕ್ಷಣೆಯತ್ತ ನಮ್ಮ ಪ್ರಯತ್ನಗಳನ್ನು ಬಲಪಡಿಸುತ್ತವೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಅಂತಹ ಎಲ್ಲಾ ಪ್ರಯತ್ನಗಳ ಅವಿಭಾಜ್ಯವಾಗಿರುವ ಎಲ್ಲಾ ಅರಣ್ಯ ಸಿಬ್ಬಂದಿ, ವಿಜ್ಞಾನಿಗಳು, ಪಶುವೈದ್ಯರು, ಮಾವುತರು ಮತ್ತು ಸ್ಥಳೀಯ ಸಮುದಾಯಗಳ ಬಗ್ಗೆ ಶ್ರೀ ಮೋದಿಯವರು ಹೆಮ್ಮೆ ವ್ಯಕ್ತಪಡಿಸಿದರು.

Xನ ಪೋಸ್ಟ್‌ನಲ್ಲಿ ಪ್ರಧಾನಮಂತ್ರಿಯವರು:

“ವಿಶ್ವ ಆನೆ ದಿನದಂದು, ಭಾರತದ ಪರಿಸರ ಪರಂಪರೆಯ ಅವಿಭಾಜ್ಯ ಅಂಗವಾಗಿ ಉಳಿದಿರುವ ಭವ್ಯ ಆನೆಯನ್ನು ನಾವು ಆಚರಿಸುತ್ತೇವೆ. ವಿಶ್ವದ ಶೇಕಡಾ 60ಕ್ಕಿಂತ ಹೆಚ್ಚು ಕಾಡು ಏಷ್ಯನ್ ಆನೆಗಳಿಗೆ ಭಾರತವು ನೆಲೆಯಾಗಿದೆ ಎಂಬುದು ಸಂತೋಷದ ಸಂಗತಿ. ನಮ್ಮ ದೇಶವು 33 ಆನೆ ಮೀಸಲು ಪ್ರದೇಶಗಳನ್ನು ಹೊಂದಿದ್ದು, ಅವು ಆನೆಗಳಿಗೆ ಆವಾಸಸ್ಥಾನಗಳನ್ನು ಒದಗಿಸುವುದಲ್ಲದೆ ಅವುಗಳ ದೀರ್ಘಕಾಲೀನ ಸಂರಕ್ಷಣೆಯತ್ತ ನಮ್ಮ ಪ್ರಯತ್ನಗಳನ್ನು ಬಲಪಡಿಸುತ್ತವೆ. ಅಂತಹ ಎಲ್ಲಾ ಪ್ರಯತ್ನಗಳ ಅವಿಭಾಜ್ಯವಾಗಿರುವ ಎಲ್ಲಾ ಅರಣ್ಯ ಸಿಬ್ಬಂದಿ, ವಿಜ್ಞಾನಿಗಳು, ಪಶುವೈದ್ಯರು, ಮಾವುತರು ಮತ್ತು ಸ್ಥಳೀಯ ಸಮುದಾಯಗಳ ಬಗ್ಗೆ ನಮಗೆ ಹೆಮ್ಮೆ ಇದೆ.”

 

*****