Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವ ಗ್ರಾಹಕ ಹಕ್ಕುಗಳ ದಿನದಂದು ಗ್ರಾಹಕರಿಗೆ ವಂದಿಸಿದ ಪ್ರಧಾನಿ; ಡಿಜಿಟಲ್ ವಹಿವಾಟಿಗೆ ಹೊಂದಿಕೊಳ್ಳುವಂತೆ ಗ್ರಾಹಕರಿಗೆ ಮನವಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ವಿಶ್ವ ಗ್ರಾಹಕ ಹಕ್ಕುಗಳ ದಿನದಂದು ಗ್ರಾಹಕರಿಗೆ ವಂದಿಸಿದ್ದು, ಡಿಜಿಟಲ್ ವಹಿವಾಟಿಗೆ ಹೊಂದಿಕೊಳ್ಳುವಂತೆ ಮನವಿ ಮಾಡಿದ್ದಾರೆ.

“ವಿಶ್ವ ಗ್ರಾಹಕ ಹಕ್ಕುಗಳ ದಿನದಂದು ನಾವು ಗ್ರಾಹಕನಿಗೆ ಗೌರವದಿಂದ ವಂದಿಸುತ್ತೇವೆ, ಆತನ ಖರೀದಿಯ ಶಕ್ತಿಯ ಮೇಲೆ ನಮ್ಮ ಆರ್ಥಿಕತೆ ಪ್ರಗತಿ ನಿಂತಿದೆ.

ಭಾರತ ಸರ್ಕಾರ ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ವಿಚಾರದಲ್ಲಿ ಹಲವು ಉಪಕ್ರಮಗಳಿಂದ ಮುಂಚೂಣಿಯಲ್ಲಿದೆ ಮತ್ತು ಅವರ ಕುಂದುಕೊರತೆಗಳನ್ನು ಪರಿಹರಿಸುವ ಖಾತ್ರಿ ನೀಡಿದೆ.

ಈ ವಿಶ್ವ ಗ್ರಾಹಕ ಹಕ್ಕುಗಳ ದಿನದಂದು ನಾನು, ಡಿಜಿಟಲ್ ವಹಿವಾಟಿಗೆ ಹೊಂದಿಕೊಳ್ಳುವಂತೆ ಮತ್ತು ಕಪ್ಪುಹಣ ಹಾಗೂ ಭ್ರಷ್ಟಾಚಾರವನ್ನು ಕೊನೆಗಾಣಿಸುವ ಆಂದೋಲನದಲ್ಲಿ ಸೇರುವಂತೆ ಗ್ರಾಹಕರಿಗೆ ಮನವಿ ಮಾಡುತ್ತೇನೆ.,” ಎಂದು ಪ್ರಧಾನಿ ಹೇಳಿದ್ದಾರೆ.

***

AKT/SH/HS