Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ನರೇಶ್ ಚಂದ್ರ ನಿಧನಕ್ಕೆ ಪ್ರಧಾನಿ ಸಂತಾಪ


ಮಾಜಿ ನಾಗರಿಕ ಸೇವಾಧಿಕಾರಿ ಶ್ರೀ. ನರೇಶ್ ಚಂದ್ರ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

“ಶ್ರೀ. ನರೇಶ್ ಚಂದ್ರ ಅವರು ಅಪ್ರತಿಮ ನಾಗರಿಕ ಸೇವಾ ಅಧಿಕಾರಿಯಾಗಿದ್ದರು, ಅವರು ನೀತಿ ಮತ್ತು ಆಡಳಿತದಲ್ಲಿ ಅಳಿಸಲಾಗದ ಹೆಜ್ಜೆಗುರುತು ಮೂಡಿಸಿದ್ದರು. ಅವರ ನಿಧನದಿಂದ ದುಃಖವಾಗಿದೆ.

ಅಮೆರಿಕಾ ರಾಯಭಾರಿಯಾಗಿದ್ದ ನರೇಶ್ ಅವರು ನನ್ನನ್ನು ಭೋಜನಕ್ಕೆ ಆಹ್ವಾನಿಸಿದ್ದರು, ಆಗ ಅವರೊಂದಿಗೆ ಒಳನೋಟ ಬೀರಬಲ್ಲ ಚರ್ಚೆ ನಡೆಸಿದ್ದು ನನಗೆ ನೆನಪಿದೆ. ಬಲಿಷ್ಠ ಭಾರತ-ಯುಎಸ್ಎ ಬಾಂಧವ್ಯದ ಬಗ್ಗೆ ನಂಬಿಕೆ ಇಟ್ಟಿದ್ದರು. “ಎಂದು ಪ್ರಧಾನಿ ತಿಳಿಸಿದ್ದಾರೆ.

****

AKT/NT