Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ಸ್ವರಾಜ್ ಕೌಶಲ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ


 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಸ್ವರಾಜ್ ಕೌಶಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಶ್ರೀ ಸ್ವರಾಜ್ ಕೌಶಲ್ ಅವರು ವಕೀಲರಾಗಿ ಮತ್ತು ದೀನದಲಿತರ ಜೀವನವನ್ನು ಸುಧಾರಿಸಲು ಕಾನೂನು ವೃತ್ತಿಯನ್ನು ಬಳಸುವುದರಲ್ಲಿ ನಂಬಿಕೆ ಇಟ್ಟ ವ್ಯಕ್ತಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಎಂದು ಶ್ರೀ ಮೋದಿ ಅವರು ಹೇಳಿದರು. “ಅವರು ಭಾರತದ ಅತ್ಯಂತ ಕಿರಿಯ ರಾಜ್ಯಪಾಲರಾದರು ಮತ್ತು ಅವರ ಗವರ್ನರ್ ಅಧಿಕಾರಾವಧಿಯಲ್ಲಿ ಮಿಜೋರಾಂ ಜನರ ಮೇಲೆ ಶಾಶ್ವತವಾದ ಪ್ರಭಾವ ಬೀರಿದರು. ಸಂಸದರಾಗಿ ಅವರ ಒಳನೋಟಗಳು ಸಹ ಗಮನಾರ್ಹವಾಗಿವೆ”, ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಹೀಗೆ ಹೇಳಿದ್ದಾರೆ:

“ಶ್ರೀ ಸ್ವರಾಜ್ ಕೌಶಲ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರು ವಕೀಲರಾಗಿ ಮತ್ತು ದೀನದಲಿತರ ಜೀವನವನ್ನು ಸುಧಾರಿಸಲು ಕಾನೂನು ವೃತ್ತಿಯನ್ನು ಬಳಸುವುದರಲ್ಲಿ ನಂಬಿಕೆ ಇಟ್ಟ ವ್ಯಕ್ತಿಯಾಗಿ ತಮ್ಮನ್ನು ಗುರುತಿಸಿಕೊಂಡರು. ಅವರು ಭಾರತದ ಅತ್ಯಂತ ಕಿರಿಯ ರಾಜ್ಯಪಾಲರಾದರು ಮತ್ತು ಅವರ ಗವರ್ನರ್ ಅಧಿಕಾರಾವಧಿಯಲ್ಲಿ ಮಿಜೋರಾಂ ಜನರ ಮೇಲೆ ಶಾಶ್ವತವಾದ ಪ್ರಭಾವ ಬೀರಿದರು. ಸಂಸದರಾಗಿ ಅವರ ಒಳನೋಟಗಳು ಸಹ ಗಮನಾರ್ಹವಾಗಿವೆ. ಈ ದುಃಖದ ಸಮಯದಲ್ಲಿ ಅವರ ಮಗಳು ಬಾನ್ಸುರಿ ಮತ್ತು ಇತರ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು. ಓಂ ಶಾಂತಿ.”

 

****