Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂವತ್ಸರಿ ಅಂಗವಾಗಿ ಶುಭಾಶಯಗಳನ್ನು ಕೋರಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪವಿತ್ರ ಸಂವತ್ಸರಿ ಹಬ್ಬದ ಸಂದರ್ಭದಲ್ಲಿ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. ಕ್ಷಮೆ ಮತ್ತು ಸಹಾನುಭೂತಿಯು ಪ್ರತಿಯೊಂದು ಬಾಂಧವ್ಯವನ್ನೂ ಬಲಪಡಿಸುತ್ತದೆ ಎಂಬುದನ್ನು ಸಂವತ್ಸರಿ ನಮಗೆ ನೆನಪಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ವಿನಯವನ್ನು ಮೈಗೂಡಿಸಿಕೊಳ್ಳುವಂತೆಯೂ ಹಾಗೂ ದಯೆ ಮತ್ತು ಸದ್ಭಾವನೆಗಳು ತಮ್ಮ ಕಾರ್ಯಗಳಿಗೆ ಮಾರ್ಗದರ್ಶಿಯಾಗುವಂತೆ ನೋಡಿಕೊಳ್ಳುವಂತೆಯೂ ಅವರು ಎಲ್ಲರಿಗೂ ಕರೆ ನೀಡಿದರು.

ಪ್ರಧಾನಮಂತ್ರಿ ಅವರು ತಮ್ಮ ‘ಎಕ್ಸ್’ (X) ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

ಕ್ಷಮೆ ಮತ್ತು ಸಹಾನುಭೂತಿಯು ಪ್ರತಿಯೊಂದು ಬಾಂಧವ್ಯವನ್ನೂ ಬಲಪಡಿಸುತ್ತದೆ ಎಂಬುದನ್ನು ಸಂವತ್ಸರಿ ನಮಗೆ ನೆನಪಿಸುತ್ತದೆ.

ಈ ಪವಿತ್ರ ಸಂದರ್ಭದಲ್ಲಿ, ವಿನಮ್ರತೆಯು ನಮಗೆ ಮಾರ್ಗದರ್ಶಿಯಾಗಲಿ ಹಾಗೂ ದಯೆ ಮತ್ತು ಸದ್ಭಾವನೆಗಳು ನಮ್ಮ ಪ್ರತಿಯೊಂದು ಕಾರ್ಯವನ್ನೂ ರೂಪಿಸಲಿ.

ಮಿಚ್ಛಾಮಿ ದುಕ್ಕಡಂ!

 

*****