ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ರಕ್ಷಣಾ ಭೂಮಿಯನ್ನುಮೊಬೈಲ್ ಗೋಪುರ ಸ್ಥಾಪನೆಗಾಗಿ ತೆರವುಗೊಳಿಸುವಿಕೆಗೆ ಸಂಬಂಧಿಸಿದಂತೆ ದೂರಸಂಪರ್ಕ ಇಲಾಖೆ (ಡಿ.ಓ.ಟಿ) ನೀಡಿದ ನೀತಿ ಮತ್ತು ಮಾರ್ಗದರ್ಶಿ ಸೂತ್ರಗಳನ್ನು ಅನುಷ್ಠಾನಗೊಳಿಸುವಲ್ಲಿನ ಅನುಭವದ ಆಧಾರದ ಮೇಲೆ ಸಂವಹನ ಕಾರ್ಯನಿರ್ವಹಣೆದಾರರಿಗೆ ಹಂಚಿಕೆಯ ಸಂವಹನ ಗೋಪುರ ಮತ್ತು ಇತರ ಮೂಲಸೌಕರ್ಯ ನಿರ್ಮಾಣಕ್ಕಾಗಿ ಒದಗಿಸಲು ರಕ್ಷಣಾ ಸಚಿವಾಲಯದ ನೀತಿ ಪರಿಷ್ಕರಣೆಯ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.
ಪರಿಷ್ಕೃತ ನೀತಿಯು ರಕ್ಷಣಾ ಭೂಮಿಯನ್ನು ಗುತ್ತಿಗೆ ಮತ್ತು ರಕ್ಷಣಾ ಪ್ರದೇಶದ ಮತ್ತು ದಂಡು ಪ್ರದೇಶಗಳನ್ನು ಡಿಓಟಿಯಲ್ಲಿ ಐಪಿ-ಐ ಆಗಿ ನೋಂದಣಿಯಾಗಿರುವ ಕಂಪನಿಗಳಿಗೆ ಸೇವಾ ಪರವಾನಗಿಯ ಪ್ರವೇಶಕ್ಕಾಗಿ ಹಂಚಿಕೆಯ ಸಂವಹನ ಗೋಪುರ ಮತ್ತು ಪೂರಕ ಮೂಲಸೌಕರ್ಯ ನಿರ್ಮಾಣಕ್ಕಾಗಿ ಅನುಮತಿಯ ಮೇರೆಗೆ ಮಂಜೂರು ಮಾಡುವುದನ್ನೂ ಒಳಗೊಂಡಿರುತ್ತದೆ.
ಇದು ದಂಡು ಪ್ರದೇಶ ಮತ್ತು ಸೇನಾ ನಿಲ್ದಾಣಗಳಲ್ಲಿ ಸಂವಹನ ಸೇವೆಯ ಗುಣಮಟ್ಟವನ್ನು ಸುಧಾರಣೆ ಮಾಡಲಿದೆ.
******