Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂಸತ್ ಭವನದ ಸಮುಚ್ಚಯದಲ್ಲಿ ವಿಶೇಷ ಬೆಳಕಿನ ವ್ಯವಸ್ಥೆ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಭಾರತ, ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗುತ್ತಿರುವ ಹೊತ್ತಿನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2019ರ ಆಗಸ್ಟ್ 13ರಂದು ಸಂಜೆ ಸಂಸತ್ ಭವನದ ಸಮುಚ್ಚಯದಲ್ಲಿ ವಿಶೇಷ ಬೆಳಕು ವ್ಯವಸ್ಥೆ (ಡೈನಮಿಕ್ ಲೈಟಿಂಗ್ ) ಯನ್ನು ಉದ್ಘಾಟಿಸಿದರು. ಬೆಳಕಿನ ಪ್ರದರ್ಶನಕ್ಕೆ ಕ್ಷಣ ಕಾಲ ಅವರು ಸಾಕ್ಷಿಯೂ ಆದರು. ಇಂಥ ಬೆಳಕಿನ ವ್ಯವಸ್ಥೆಯನ್ನು ಪ್ರಮುಖ ಸರ್ಕಾರಿ ಕಟ್ಟಡಗಳು ಅಂದರೆ, ರಾಷ್ಟ್ರಪತಿ ಭವನದ ಉತ್ತರ ಭಾಗ, ದಕ್ಷಿಣ ಭಾಗದಲ್ಲಿ ಮಾಡಲಾಗಿದೆ. ಈ ದೀಪದ ವ್ಯವಸ್ಥೆಯು ಅತ್ಯಂತ ಜನಪ್ರಿಯವಾಗಿದ್ದು, ದೆಹಲಿಯ ಹೃದಯ ಭಾಗದಲ್ಲಿರುವ ಈ ಮಹತ್ವದ ಕಟ್ಟಡಗಳನ್ನು ಕಾಣಲು ಜನರಿಗೆ ಪ್ರೇರಣೆ ನೀಡುತ್ತದೆ.