ಪಿಎಂಇಂಡಿಯಾ
ನೈಜೀರಿಯಾ ಅಧ್ಯಕ್ಷರಾದ ಬೋಲಾ ಅಹ್ಮದ್ ಟಿನುಬು ಅವರ ಆತ್ಮೀಯ ಶುಭಾಶಯಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಧನ್ಯವಾದ ಅರ್ಪಿಸಿದ್ದಾರೆ ಹಾಗೂ ಭಾರತ ಮತ್ತು ನೈಜೀರಿಯಾ ಜಾಗತಿಕ ದಕ್ಷಿಣದ ನಿಕಟ ಪಾಲುದಾರರು ಮತ್ತು ಪ್ರಮುಖ ಧ್ವನಿ ಎಂದು ಪುನರುಚ್ಚರಿಸಿದ್ದಾರೆ. ಭಾರತ ಮತ್ತು ನೈಜೀರಿಯಾ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಇನ್ನಷ್ಟು ಒಳಗೊಂಡ, ಸಮೃದ್ಧ ಮತ್ತು ಶಾಂತಿಯುತ ವಿಶ್ವದ ಹಂಚಿತ ದೃಷ್ಟಿಕೋನವನ್ನು ಮುನ್ನಡೆಸಲು ಶ್ರೀ ಮೋದಿ ಅವರು ತಮ್ಮ ಬದ್ಧತೆ ವ್ಯಕ್ತಪಡಿಸಿದ್ದಾರೆ.
ಶ್ರೀ ಮೋದಿ ಅವರ ಎಕ್ಸ್ ಪೋಸ್ಟ್ ಹೀಗಿದೆ:
ಭಾರತ ಮತ್ತು ನೈಜೀರಿಯಾ ಜಾಗತಿಕ ದಕ್ಷಿಣದ ನಿಕಟ ಪಾಲುದಾರರು ಮತ್ತು ಪ್ರಮುಖ ಧ್ವನಿ. ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಹೆಚ್ಚು ಸಮಗ್ರ, ಸಮೃದ್ಧ ಮತ್ತು ಶಾಂತಿಯುತ ಜಗತ್ತಿಗೆ ನಮ್ಮ ಹಂಚಿತ ದೃಷ್ಟಿಕೋನವನ್ನು ಮುನ್ನಡೆಸಲು ನಮ್ಮ ನಡುವಿನ ಸಹಕಾರವನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ.
@NGRPresident
*****
Thank you, President Tinubu. India and Nigeria are close partners and leading voices of the Global South. I look forward to continuing our cooperation to further strengthen our Strategic Partnership and advance our shared vision for a more inclusive, prosperous and peaceful world. @NGRPresident
— Narendra Modi (@narendramodi) October 7, 2026