ಪಿಎಂಇಂಡಿಯಾ
ಸರ್ಕಾರದ ಮುಖ್ಯಸ್ಥರಾಗಿ ರಾಷ್ಟ್ರಕ್ಕೆ 25 ವರ್ಷಗಳ ಸೇವೆ ಪೂರೈಸಿದ ಸಂದರ್ಭದಲ್ಲಿ ಆತ್ಮೀಯ ಶುಭಾಶಯಗಳನ್ನು ಕೋರಿದ ಇಥಿಯೋಪಿಯಾದ ಫೆಡರಲ್ ಡೆಮಾಕ್ರಟಿಕ್ ರಿಪಬ್ಲಿಕ್ನ ಪ್ರಧಾನಮಂತ್ರಿ ಶ್ರೀ ಅಬಿಯ್ ಅಹ್ಮದ್ ಅಲಿ ಅವರಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಮತ್ತೊಂದು ಅವಧಿಗೆ ಅಧಿಕಾರ ವಹಿಸಿಕೊಂಡಿರುವ ಪ್ರಧಾನಮಂತ್ರಿ ಅಬಿಯ್ ಅಹ್ಮದ್ ಅಲಿ ಅವರಿಗೆ ಪ್ರಧಾನ ಮಂತ್ರಿಗಳು ಅಭಿನಂದನೆ ಮತ್ತು ಶುಭಾಶಯಗಳನ್ನು ಸಹ ತಿಳಿಸಿದರು.
ಕಳೆದ ಡಿಸೆಂಬರ್ನಲ್ಲಿ ತಾವು ಇಥಿಯೋಪಿಯಾಕ್ಕೆ ಭೇಟಿ ನೀಡಿದ್ದನ್ನು ಮತ್ತು ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಅಬಿಯ್ ಅಹ್ಮದ್ ಅಲಿ ಅವರೊಂದಿಗೆ ಇತ್ತೀಚೆಗೆ ನಡೆಸಿದ ಭೇಟಿಯನ್ನು ಶ್ರೀ ಮೋದಿ ಅವರು ಸ್ಮರಿಸಿದರು. ಇಥಿಯೋಪಿಯಾದೊಂದಿಗಿನ ಕಾರ್ಯತಂತ್ರದ ಪಾಲುದಾರಿಕೆಗೆ ಭಾರತವು ಹೆಚ್ಚಿನ ಮಹತ್ವ ನೀಡುತ್ತದೆ ಮತ್ತು ಸಹಕಾರ ಹಾಗೂ ಸ್ನೇಹವನ್ನು ಇನ್ನಷ್ಟು ಬಲಪಡಿಸಲು ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಅವರು ಹೇಳಿದರು.
ಶ್ರೀ ಮೋದಿ ಅವರು ‘ಎಕ್ಸ್’ ಪೋಸ್ಟ್ನಲ್ಲಿ ಹೀಗೆ ಸಂದೇಶ ನೀಡಿದ್ದಾರೆ:
“ಪ್ರಧಾನ ಮಂತ್ರಿ ಅಬಿಯ್ ಅಹ್ಮದ್ ಅಲಿ ಅವರೇ, ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು. ಮತ್ತೊಂದು ಅವಧಿಗೆ ಅಧಿಕಾರ ವಹಿಸಿಕೊಂಡಿರುವ ನಿಮಗೂ ನಾನು ಅಭಿನಂದನೆ ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ.
ಕಳೆದ ಡಿಸೆಂಬರ್ನಲ್ಲಿ ನಾನು ಇಥಿಯೋಪಿಯಾಕ್ಕೆ ಭೇಟಿ ನೀಡಿದ್ದನ್ನು ಮತ್ತು ನವದೆಹಲಿಯಲ್ಲಿ ನಮ್ಮ ಇತ್ತೀಚಿನ ಭೇಟಿಯನ್ನು ನಾನು ಪ್ರೀತಿಯಿಂದ ಸ್ಮರಿಸುತ್ತೇನೆ. ಇಥಿಯೋಪಿಯಾದೊಂದಿಗಿನ ಕಾರ್ಯತಂತ್ರದ ಪಾಲುದಾರಿಕೆಗೆ ಭಾರತವು ಹೆಚ್ಚಿನ ಮಹತ್ವ ನೀಡುತ್ತದೆ ಮತ್ತು ನಮ್ಮ ಸಹಕಾರ ಹಾಗೂ ಸ್ನೇಹವನ್ನು ಇನ್ನಷ್ಟು ಬಲಪಡಿಸಲು ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ.
@AbiyAhmedAli”
*****
Thank you, Prime Minister Abiy Ahmed Ali, for your warm wishes. I also extend my congratulations and best wishes on your assumption of office for another term. I fondly recall my visit to Ethiopia last December and our recent meeting in New Delhi. India greatly values its Strategic Partnership with Ethiopia and I look forward to working closely with you to further deepen our cooperation and friendship. @AbiyAhmedAli
— Narendra Modi (@narendramodi) October 8, 2026