Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನುಸರಣೆಗಾಗಿ “ನದಿಗಳ ಜೋಡಣೆಗಾಗಿ ವಿಶೇಷ ಸಮಿತಿ’’ ರಚನೆ ಮತ್ತು ವಸ್ತುಸ್ಥಿತಿ ಸಹಿತ ಪ್ರಗತಿ ವರದಿಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸರ್ವೋನ್ನತ ನ್ಯಾಯಾಲಯವು ನದಿಗಳ ಜಾಲಕ್ಕೆ ಸಂಬಧಿಸಿದ ರಿಟ್ ಅರ್ಜಿ ಸಂಖ್ಯೆ 668/2002 ಸೇರಿದಂತೆ ರಿಟ್ ಅರ್ಜಿ (ಸಿವಿಲ್)512/2002 ಪ್ರಕರಣಕ್ಕೆ ಸಂಬಂಧಿಸಿದಂತೆ 27.2.2012ರಂದು ನೀಡಿರುವ ತೀರ್ಪಿನ ಅನುಸರಣೆಗಾಗಿ “ನದಿಗಳ ಜೋಡಣೆಗಾಗಿ ವಿಶೇಷ ಸಮಿತಿ’’ ರಚನೆ ಮತ್ತು ವಸ್ತುಸ್ಥಿತಿ ಸಹಿತ ಪ್ರಗತಿ ವರದಿಗೆ ತನ್ನ ಅನುಮೋದನೆ ನೀಡಿದೆ.

ಸಚಿವ ಸಂಪುಟದ ಅನುಮೋದನೆಯು ಭಾರತ ಸರ್ಕಾರದ ರಾಷ್ಟ್ರೀಯ ದೃಷ್ಟಿಯ ಯೋಜನೆ 1980 ಅಡಿಯಲ್ಲಿ ಕೈಗೊಳ್ಳಲಾಗುವ ಅಮೂಲ್ಯ ನದಿಗಳ ಜೋಡಣೆ ಯೋಜನೆಗಳ ಮೇಲೆ ನಿಗಾ ಇಡಲು ನೆರವಾಗಲಿದೆ. ನದಿಗಳ ಜೋಡಣೆ ಕುರಿತ ವಿಶೇಷ ಸಮಿತಿಯ ವಸ್ತುಸ್ಥಿತಿ ಸಹಿತ ಪ್ರಗತಿಯ ವರದಿಯನ್ನು ವರ್ಷದಲ್ಲಿ ಎರಡು ಬಾರಿ ಸಂಪುಟದ ಮಾಹಿತಿಗಾಗಿ ಸಲ್ಲಿಸಲಾಗುತ್ತದೆ, ಇದು ಎಷ್ಟು ಸಾಧ್ಯವೋ ಅಷ್ಟು ಬೇಗ ದೇಶದ ಹಿತಾಸಕ್ತಿಯಿಂದ ತ್ವರಿತವಾಗಿ ಮತ್ತು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ಅನುವಾಗುತ್ತದೆ.

***