Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಶಸ್ತ್ರ ಪಡೆಗಳಿಗೆ ಈ ದೀಪಾವಳಿಯನ್ನು ವಿಶಿಷ್ಟಗೊಳಿಸಲು ಜನತೆಯ ಸಂದೇಶ


ನಮ್ಮ ಸಶಸ್ತ್ರಪಡೆಗಳ ಬಗ್ಗೆ ದೇಶಕ್ಕೆ ಶ್ರೇಷ್ಠ ಗೌರವ ಮತ್ತು ಮೆಚ್ಚುಗೆ ಇದ್ದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದಿರುವ ಅನನ್ಯ ಅಭಿಯಾನದ ಮೂಲಕ ಈ ಹಬ್ಬದ ಸಂದರ್ಭದಲ್ಲಿ ಅದು ಅಭಿವ್ಯಕ್ತಿಗೊಳ್ಳಲಿದೆ.

#Sandesh2Soldiers (ಯೋಧರಿಗೆ ಸಂದೇಶ) ಅಭಿಯಾನವು, ದೇಶದ ಪ್ರತಿಯೊಬ್ಬ ನಾಗರಿಕರಿಗೆ ತಮ್ಮ ಸಂತೋಷವನ್ನು ನಮ್ಮ ದೇಶದ ಗಡಿಗಳನ್ನು ಕಾಯುತ್ತಿರುವ ಮತ್ತು ದೀಪಾವಳಿಯ ಸಂದರ್ಭದಲ್ಲಿ ತಮ್ಮ ಪ್ರೀತಿಪಾತ್ರರಿಂದ ದೂರ ಇರುವ ಭಾರತೀಯ ಸಶಸ್ತ್ರಪಡೆಗಳೊಂದಿಗೆ ಹಂಚಿಕೊಳ್ಳಲು ಮತ್ತು ಹುರಿದುಂಬಿಸಲು ಅವಕಾಶ ನೀಡುತ್ತದೆ.

ನಮ್ಮ ಸಶಸ್ತ್ರ ಪಡೆಗಳಿಗೆ ಸಂದೇಶ ಮತ್ತು ಪತ್ರಗಳನ್ನು ಕಳುಹಿಸಲು ಜನತೆಗೆ ಮನವಿ ಮತ್ತು ಆಹ್ವಾನ ನೀಡಲು ಈ ಸಮಗ್ರ ದೃಷ್ಟಿಕೋನದ ಅಭಿಯಾನವನ್ನು ಆರಂಭಿಸಲಾಗಿದೆ. ಈ ಪ್ರಯತ್ನಕ್ಕೆ ಮುಂದಾಗಿರುವ ಪ್ರಧಾನಮಂತ್ರಿಯವರು ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಸಂದೇಶ ಕಳುಹಿಸುವ ತಮ್ಮ ಈ ಮನವಿಯನ್ನು ಸಾಮಾಜಿಕ ತಾಣ, ವಿಶೇಷ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಕೆಲವೇ ಗಂಟೆಗಳಲ್ಲಿ, ಈ ವಿಡಿಯೋ ಫೇಸ್ ಬುಕ್ ಮತ್ತು ಟ್ವಿಟರ್ ನಂಥ ಸಾಮಾಜಿಕ ವೇದಿಕೆಗಳಲ್ಲಿ ಅದ್ಭುತ ಆಸಕ್ತಿ ಮೂಡಿಸಿದೆ.

ಜನರು ತಮ್ಮ ಸಂದೇಶಗಳನ್ನು ನರೇಂದ್ರ ಮೋದಿ ಆಪ್, MyGov.in ಮೂಲಕ ಹಾಗೂ ಸಶಸ್ತ್ರ ಪಡೆಗಳೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಲು ಆಕಾಶವಾಣಿ, ದೂರದರ್ಶನ ರೂಪಿಸುವ ಕಾರ್ಯಕ್ರಮಗಳ ಮೂಲಕವೂ ಕಳುಹಿಸಬಹುದಾಗಿದೆ.

ನರೇಂದ್ರ ಮೋದಿ ಆಪ್ ನಲ್ಲಿ ಇದಕ್ಕಾಗಿ ವಿಶೇಷ ಮಾಡ್ಯೂಲ್ ಆರಂಭಿಸಲಾಗಿದ್ದು, ಇದು ಸಶಸ್ತ್ರ ಪಡೆಗಳಿಗೆ ತಮ್ಮ ಕೈಬರಹದ ಸಂದೇಶ ಮತ್ತು ಸಂದೇಶ ಪತ್ರಗಳನ್ನು ಕಳುಹಿಸಲು ಜನತೆಗೆ ಅವಕಾಶ ಕಲ್ಪಿಸುತ್ತದೆ.

#Sandesh2Soldiers ಅಭಿಯಾನವು ಜನತೆ ಮತ್ತು ಸಶಸ್ತ್ರ ಪಡೆಗಳ ನಡುವೆ ಸಂವಾದವನ್ನು ಹೆಚ್ಚಿಸುತ್ತದೆ. ಈ ತಿಂಗಳ ಆರಂಭದಲ್ಲಿ, ಭೋಪಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ನಮ್ಮ ಧೈರ್ಯಶಾಲೀ ಯೋಧರ ಮಾನವೀಯ ಅಂಶಗಳ ಬಗ್ಗೆ ಗಮನ ಹರಿಸಿದ್ದರು. ಯೋಧರು ಸಿಕ್ಕಾಗ ಅವರನ್ನು ಪ್ರಶಂಸಿಸುವಂತೆ ಮಾಡಿದ್ದ ಮನವಿ ಸಾಮಾಜಿಕ ತಾಣಗಳಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿತ್ತು.
ಪ್ರಧಾನಮಂತ್ರಿ ಆದ ಬಳಿಕ ನರೇಂದ್ರ ಮೋದಿ ಅವರು ತಮ್ಮ ಎರಡೂ ದೀಪಾವಳಿಗಳನ್ನು ಸಶಸ್ತ್ರ ಪಡೆಗಳೊಂದಿಗೇ ಕಳೆದಿದ್ದಾರೆ.

***

AKT/AK