ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಈ ಕೆಳಕಂಡ ನಿರ್ಧಾರಗಳಿಗೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ:
i. ಶೇಕಡ 4.5ರ ಬಡ್ಡಿ ದರದಲ್ಲಿ ಸಹಕಾರಿ ಬ್ಯಾಂಕ್ ಗಳಿಗೆ ಸಾಲ ನೀಡಲು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ಪ್ರಸ್ತುತ ಇರುವ ಮಾರುಕಟ್ಟೆ ದರದಲ್ಲಿ ಸುಮಾರು 20,000 ಕೋಟಿ ರೂಪಾಯಿಗಳ ಅಲ್ಪಾವಧಿ ಸಾಲ ಪಡೆಯಲು.
ii. ಈ ಉದ್ದೇಶಕ್ಕಾಗಿ ಕೇಂದ್ರ ಬಜೆಟ್ ನಲ್ಲಿ ನಬಾರ್ಡ್ ಗೆ 2 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಬಂಡವಾಳವನ್ನು ಒದಗಿಸಲಾಗುವುದು. ಆರಂಭದಲ್ಲಿ 500 ಕೋಟಿ ರೂಪಾಯಿಗಳ ಆರಂಭಿಕ ಬಂಡವಾಳವನ್ನು 2016-17ನೇ ಸಾಲಿನಲ್ಲಿಯೇ ನಬಾರ್ಡ್ ಗೆ ಬಿಡುಗಡೆ ಮಾಡಲಾಗುವುದು.
iii. ಶೇಕಡ 1.8ರಷ್ಟು ಬಡ್ಡಿ ರಿಯಾಯಿತಿ ಮತ್ತು ನಬಾರ್ಡ್ ನ ಆಡಳಿತಾತ್ಮಕ ವೆಚ್ಚವಾದ ಶೇ.0.2ನ್ನು ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ (ಡಿಎಸಿ ಮತ್ತು ಎಫ್.ಡಬ್ಲ್ಯು)ಯೋಜನೆಯಂತೆ ಒದಗಿಸಲಾಗುವುದು. ಬಡ್ಡಿಯ ರಿಯಾಯಿತಿಯು ನಬಾರ್ಡ್ ಯಾವ ದರದಲ್ಲಿ ಹಣ ಪಡೆಯುತ್ತದೆ ಎಂಬುದರ ಮೇಲೆ ಬದಲಾಗುತ್ತದೆ.
iv. ನಬಾರ್ಡ್ ಮಿಷನ್ ಮಾದರಿಯಲ್ಲಿ ಸಹಕಾರಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (ಆರ್.ಆರ್.ಬಿ.ಗಳ) ಮೂಲಕ ಕ್ರಿಯಾಶೀಲ/ಜೀವಂತ ಕೆಸಿಸಿಗಳನ್ನು ರುಪೇ / ಎಟಿಎಂ ಬಳಕೆ ಶಕ್ತವಾದ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿಗಳು) ಗಳಾಗಿ ಪರಿವರ್ತಿಸಲು ಸಹಯೋಗ ನೀಡುತ್ತದೆ.
ಉತ್ತಮ ಮುಂಗಾರು ಮತ್ತು ಸಾಲದ ಬೇಡಿಕೆಯ ಹೆಚ್ಚಳದ ನಿರೀಕ್ಷೆಯ ನಿಟ್ಟಿನಲ್ಲಿ ಮತ್ತು ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ, ರೈತರಿಗೆ ಸಹಕಾರಿ ಬ್ಯಾಂಕ್ ಗಳ ಮೂಲಕ ಬೆಂಬಲ ನೀಡುವ ಅಗತ್ಯವಿದೆ, ಅವರಿಗೆ ತಮ್ಮ ಕೃಷಿ ಚಟುವಟಿಕೆ ಚುರುಕುಗೊಳಿಸಲು ಅನುವಾಗುವಂತೆ ಮನೆ ಬಾಗಿಲಿಗೇ ಸಾಲ ಒದಗಿಸಲು ಅವಕಾಶ ನೀಡುತ್ತದೆ.
ಈ ಅನುಮೋದನೆಯು ರೈತರಿಗೆ ಸಹಕಾರಿ ಬ್ಯಾಂಕ್ ಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಅಲ್ಪವಧಿ ಬೆಳೆ ಸಾಲ ಪಡೆಯುವ ಖಾತ್ರಿ ಒದಗಿಸುತ್ತದೆ. ಕ್ರಿಯಾಶೀಲ/ಜೀವಂತ ಕೆಸಿಸಿಗಲನ್ನು ರುಪೇ/ಎಟಿಎಂ ಬಳಕೆ ಶಕ್ತವಾದ ಕೆಸಿಸಿಗಳನ್ನಾಗಿ ಪರಿವರ್ತಿಸುವುದರಿಂದ ಡಿಜಿಟಲ್ ಭಾರತ ಸ್ಪೂರ್ತಿಯನ್ನು ಕಾಪಾಡಿಕೊಂಡು ಮತ್ತು ತಡೆರಹಿತ ಮತ್ತು ಸಲುಭವಾಗಿ ಸಾಲ ಲಭ್ಯತೆಗೆ ಅವಕಾಶ ನೀಡುತ್ತದೆ, ಇದು ರೈತರಿಗೆ ನಗದು ರಹಿತ ಮತ್ತು ಡಿಜಿಟಲ್ ವಹಿವಾಟಿನ ಅವಕಾಶ ನೀಡುತ್ತದೆ.
AKT/VBA/SH