ಪಿಎಂಇಂಡಿಯಾ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಸಾಗರೋತ್ತರ ಭಾರತೀಯರಿಗಾಗಿನ ಭಾರತ ಅಭಿವೃದ್ದಿ ಪ್ರತಿಷ್ಟಾನವನ್ನು (ಐ.ಡಿ.ಎಫ್- ಓ.ಐ.) ಮುಚ್ಚಲು ತನ್ನ ಅನುಮೋದನೆ ನೀಡಿತು. ಭಾರತ ಸರಕಾರದ ಪ್ರಮುಖ ಕಾರ್ಯಕ್ರಮಗಳಾದ ಗಂಗಾ ಸ್ವಚ್ಚತೆಗಾಗಿನ ರಾಷ್ಟ್ರೀಯ ಆಂದೋಲನ ಮತ್ತು ಸ್ವಚ್ಚ ಭಾರತ್ ಆಂದೋಲನಗಳಿಗೆ ದೇಣಿಗೆಯನ್ನು ವ್ಯವಸ್ಥಿತಗೊಳಿಸಿ ಹೆಚ್ಚಿಸುವ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ.
ಹಿನ್ನೆಲೆ:
ಅ.) ಐ.ಡಿ.ಎಫ್-ಓ.ಐ.ಯನ್ನು ಭಾರತ ಸರಕಾರವು ಸಂಪುಟದ ಅನುಮೋದನೆಯೊಂದಿಗೆ 2008ರಲ್ಲಿ ಸ್ವಾಯತ್ತ ಲಾಭರಹಿತ ಟ್ರಸ್ಟ್ ಆಗಿ ಸ್ಥಾಪನೆ ಮಾಡಿತ್ತು. ಸಾಗರೋತ್ತರ ಭಾರತೀಯ ದಾನಿಗಳು ಭಾರತ ಸರಕಾರದ ಸಾಮಾಜಿಕ ಮತ್ತು ಅಭಿವೃದ್ದಿ ಕಾರ್ಯಕ್ರಮಗಳಿಗೆ ದೇಣಿಗೆ ನೀಡಲು ಅನುಕೂಲವಾಗುವಂತೆ ಇದನ್ನು ರಚಿಸಲಾಗಿತ್ತು.
ಬ) ಪ್ರತಿಷ್ಟಾನ 2008 ರ ಡಿಸೆಂಬರ್ ತಿಂಗಳಿನಿಂದ 2015 ರ ಮಾರ್ಚ್ ತಿಂಗಳವರೆಗೆ ಬರೇ 36.80 ಲಕ್ಷ ರೂ.ಗಳ ದೇಣಿಗೆಯನ್ನು ಮಾತ್ರವೇ ಸಾಗರೋತ್ತರ ಭಾರತೀಯರಿಂದ ಪಡೆಯಲು ಶಕ್ತವಾದುದರಿಂದ 2015 ರಲ್ಲಿ ಐ.ಡಿ.ಎಫ್-ಒ.ಐ.ಯ ಸಮಗ್ರ ಪುನರ್ವಿಮರ್ಶೆ ನಡೆಸಲಾಯಿತು. ಭಾರತ ಸರಕಾರದ ಪ್ರಮುಖ ಕಾರ್ಯಕ್ರಮಗಳಾದ –ಗಂಗಾ ಶುದ್ದೀಕರಣ ರಾಷ್ಟ್ರೀಯ ಯೋಜನೆ ಮತ್ತು ಸ್ವಚ್ಚ ಭಾರತ್ ಆಂದೋಲನ ಹಾಗು ರಾಜ್ಯ ಸರಕಾರಗಳು ಗುರುತಿಸುವ ಸಾಮಾಜಿಕ ಮತ್ತು ಅಭಿವೃದ್ದಿ ಯೋಜನೆಗಳಿಗೆ ಉತ್ತೇಜನವನ್ನು ಐ.ಡಿ.ಎಫ್-ಓ .ಐ. ಯಲ್ಲಿ ಸೇರಿಸಲಾಗಿತ್ತು.
ಸ) 2015 ರ ಏಪ್ರಿಲ್ ಮತ್ತು 2018 ರ ಮಾರ್ಚ್ ನಡುವಿನ ಅವಧಿಯಲ್ಲಿ ಟ್ರಸ್ಟ್ 10.16 ಕೋ.ರೂ,ಗಳ ದೇಣಿಗೆಯನ್ನು ಪಡೆದಿದೆ. ಹೆಚ್ಚಿನ ದೇಣಿಗೆಗಳು ಸ್ವಚ್ಚ ಗಂಗಾ ರಾಷ್ಟ್ರೀಯ ಯೋಜನೆಗಾಗಿ ಇಲ್ಲವೇ ಸ್ವಚ್ಚ ಭಾರತ್ ಆಂದೋಲನಕ್ಕಾಗಿ ಬಂದಿವೆ, ಇವುಗಳನ್ನು ಅವುಗಳಿಗೆ ಸಂಬಂಧಿಸಿದ ಪ್ರತ್ಯೇಕ ಆಡಳಿತಾತ್ಮಕ ವ್ಯವಸ್ಥೆಯಡಿ ನಿಭಾಯಿಸಲಾಗುತ್ತಿದೆ. ಏಕೀಕೃತಗೊಳಿಸಲು, ದಕ್ಷತೆಯ ಹೆಚ್ಚಳ ಮಾಡಲು ಮತ್ತು ಕೆಲಸದ ಪುನರಾವರ್ತನೆಯನ್ನು ತಡೆಯಲು ಐ.ಡಿ.ಎಫ್-ಓ.ಐ. ಯ ಧರ್ಮದರ್ಶಿ ಮಂಡಳಿಯ 9 ನೇ ಸಭೆಯಲ್ಲಿ 2018 ರ ಮಾರ್ಚ್ 31 ಕ್ಕೆ ಟ್ರಸ್ಟ್ ಅನ್ನು ಮುಚ್ಚುವ ನಿರ್ಧಾರಕ್ಕೆ ಬರಲಾಗಿತ್ತು.