Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

“ಸಾರಿಗೆ ಮತ್ತು ಸಂವಹನ” ಕುರಿತ ಕಲ್ಪನೆಗಳನ್ನು ಪ್ರಧಾನಮಂತ್ರಿಯವರಿಗೆ ಸಾದರ ಪಡಿಸಿದ ಕಾರ್ಯದರ್ಶಿಗಳ ಗುಂಪು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಮಾರ್ಗದರ್ಶನದ ಮುಂದುವರಿಕೆಯಾಗಿ ಕೇಂದ್ರ ಸರ್ಕಾರದ ಕಾರ್ಯದರ್ಶಿಗಳ ಗುಂಪು ಇಂದು, ಆಡಳಿತಕ್ಕೆ ಸಂಬಂಧಿಸಿದ ವಿವಿಧ ಕ್ಷೇತ್ರಗಳ ಪರಿವರ್ತನಾತ್ಮಕ ಬದಲಾವಣೆ ಕುರಿತಂತೆ ತಮ್ಮ ಎರಡನೇ ಸುತ್ತಿನ ಕಲ್ಪನೆಗಳನ್ನು ಮಂಡಿಸಿದರು.

ಇಂಥ ಎಂಟು ಪ್ರಾತ್ಯಕ್ಷಿಕೆಗಳ ಮೊದಲ ಕಂತನ್ನು 2016ರ ಜನವರಿಯಲ್ಲಿ ಮಂಡಿಸಲಾಗಿತ್ತು. ಈ ಬಾರಿ ಅಂಥ ಒಂಬತ್ತು ಕಲ್ಪನೆಗಳನ್ನು ಮಂಡಿಸಲಾಯಿತು.

ಇಂದು ಮೊದಲ ಗುಂಪು “ಸಾರಿಗೆ ಮತ್ತು ಸಂವಹನ ’’ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತನ್ನ ಕಲ್ಪನೆಗಳನ್ನು ಮಂಡಿಸಿತು.

ಕೇಂದ್ರ ಸಚಿವರು ಮತ್ತು ನೀತಿ ಆಯೋಗದ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.