ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಾರ್ವಜನಿಕ ಉದ್ದಿಮೆಗಳ ಆಯ್ಕೆ ಮಂಡಳಿ (ಪಿ.ಇ.ಎಸ್.ಬಿ.)ಯ ದಿನಾಂಕ 03 ಮಾರ್ಚ್ 1987ರನಿರ್ಣಯಕ್ಕೆ ತಿದ್ದುಪಡಿ ತರುವ ಪ್ರಸ್ತಾಪಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಉದ್ದೇಶಿತ ತಿದ್ದುಪಡಿಗಳು ಈ ಕೆಳಗಿನಂತಿವೆ:
(a) ರಾಜ್ಯ ಸಾರ್ವಜನಿಕ ಉದ್ದಿಮೆಗಳಿಂದ ಮತ್ತು ಖಾಸಗಿ ವಲಯದಿಂದ ಅಂತರಿಕವಲ್ಲದ ಅಭ್ಯರ್ಥಿಗಳಾಗಿ ಐದು ವರ್ಷದ ಅವಧಿಗೆ ಕೇಂದ್ರೀಯ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ (ಸಿಪಿಎಸ್.ಇ.ಗಳು) ನೇಮಕ ಮಾಡಿಕೊಳ್ಳಲು ಅಭ್ಯರ್ಥಿಗಳ ಆಯ್ಕೆ;
(b) ಸಾರ್ವಜನಿಕ ಉದ್ದಿಮೆಗಳ ಆಯ್ಕೆ ಮಂಡಳಿ (ಪಿ.ಇ.ಎಸ್.ಬಿ.)ಯ ಅಧ್ಯಕ್ಷರು ಮತ್ತು ಸದಸ್ಯರುಗಳು ತಾವು ಅಧಿಕಾರ ವಹಿಸಿಕೊಂಡ ದಿನದಿಂದ ಮೂರು ವರ್ಷಗಳವರೆಗೆ ಅಥವಾ ತಮಗೆ 65 ವರ್ಷ ವಯಸ್ಸು ತುಂಬುವರೆಗೆ ಅಥವಾ ಮುಂದಿನ ಆದೇಶ ಯಾವುದು ಬೇಗವೋ ಅಲ್ಲಿಯವರೆಗೆ ಕಚೇರಿಯಲ್ಲಿ ಅಧಿಕಾರ ನಿರ್ವಹಿಸಲಿದ್ದಾರೆ.
ಹಿನ್ನೆಲೆ
ವಿಸ್ತಾರವಾದ ತಳಹದಿಯ ಮೇಲೆ ಕೇಂದ್ರದ ಸಾರ್ವಜನಿಕ ವಲಯದ ಸಂಸ್ಥೆಗಳ (ಸಿ.ಪಿ.ಎಸ್.ಇ.ಗಳು) ಹಿರಿಯ ಸ್ಥಾನಗಳಿಗೆ ಆಯ್ಕೆಯನ್ನು ರಾಜ್ಯ ಸಾರ್ವಜನಿಕ ವಲಯದ ಸಂಸ್ಥೆಗಳ (ಎಸ್.ಪಿ.ಎಸ್.ಇಗಳು) ಅಭ್ಯರ್ಥಿಗಳ ಮತ್ತು ಖಾಸಗಿ ವಲಯದ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ನೀತಿಯ ಮೂಲಕ ಮಾಡಲಾಗುತ್ತದೆ. ಸಾರ್ವಜನಿಕ ಉದ್ದಿಮೆಗಳ ಆಯ್ಕೆ ಮಂಡಳಿ (ಪಿ.ಇ.ಎಸ್.ಬಿ.) ಸಮರ್ಥವಾಗಿ ಕಾರ್ಯನಿರ್ವಹಿಸಲು ಇತರ ಅಗತ್ಯ ಬದಲಾವಣೆಗಳೊಂದಿಗೆ ಮತ್ತೆ ಐದು ವರ್ಷಗಳ ಅವಧಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ.
ಈ ತಿದ್ದುಪಡಿಯು ಕೇಂದ್ರದ ಸಾರ್ವಜನಿಕ ವಲಯದ ಉದ್ದಿಮೆಗಳ (ಸಿ.ಪಿ.ಎಸ್.ಇ.ಗಳು) ಉನ್ನತ ಹುದ್ದೆಗಳಿಗೆ ರಾಜ್ಯ ಸಾರ್ವಜನಿಕ ವಲಯದ ಉದ್ದಿಮೆಗಳ (ಎಸ್.ಪಿ.ಎಸ್.ಇ.ಗಳು) ಮತ್ತು ಖಾಸಗಿ ವಲಯದ ಅಭ್ಯರ್ಥಿಗಳನ್ನು ಪರಿಗಣಿಸಲು ವಿಸ್ತೃತ ವೃತ್ತಿನಿರತರಿಗೆ ಅವಕಾಶ ನೀಡುವುದನ್ನು ಮುಂದುವರಿಸುತ್ತದೆ.
ಕೇಂದ್ರೀಯ ಸಾರ್ವಜನಿಕ ವಲಯದ ಉದ್ದಿಮೆಗಳು (ಸಿಪಿಎಸ್.ಇ.ಗಳು) ಕೌಶಲ- ಗುಂಪಿನಿಂದ ಮತ್ತು ರಾಜ್ಯ ಸಾರ್ವಜನಿಕ ವಲಯದ ಉದ್ದಿಮೆಗಳಿಂದ (ಎಸ್.ಪಿ.ಎಸ್.ಇ.ಗಳು) ಮತ್ತು ಖಾಸಗಿ ವಲಯದಿಂದ ಬರುವವರ ಪರಿಣತಿಯ ಲಾಭ ಪಡೆಯುತ್ತದೆ. ಅಲ್ಲದೆ ಇದು ಕೇಂದ್ರೀಯ ಪಿ.ಎಸ್.ಇ. ಹಿರಿಯ ಆಡಳಿತಕ್ಕೆ ಒಳಗಿನ ಹಾಗೂ ಹೊರಗಿನ ದೃಷ್ಟಿಕೋನದಿಂದ ಪಡೆದ ಲಾಭ ದೊರಕುವ ಖಾತ್ರಿ ಒದಗಿಸುತ್ತದೆ.