ಪಿಎಂಇಂಡಿಯಾ
ಸರ್ಕಾರಿ ಇ-ಮಾರುಕಟ್ಟೆ (ಜಿಇಎಂ) ನ ಈವರೆಗಿನ ಸಾಧನೆಗಳನ್ನು ವಿವರಿಸಿರುವ ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರ ಮಾಹಿತಿಯುಕ್ತ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡಿದ್ದಾರೆ. ಪಾರದರ್ಶಕ ಖರೀದಿ, ಹೆಚ್ಚಿನ ಪಾಲ್ಗೊಳ್ಳುವಿಕೆ ಮತ್ತು ಉತ್ತಮ ಅವಕಾಶಗಳನ್ನು ವಿವರಿಸುತ್ತಾ ಅವರು, ಸಾರ್ವಜನಿಕ ಖರೀದಿ ಪ್ರಕ್ರಿಯೆಯನ್ನು ಜಿಇಎಂ ಹೇಗೆ ರೂಪಾಂತರಿಸುತ್ತಿದೆ ಎಂಬುದನ್ನು ತಿಳಿಸಿದ್ದಾರೆ.
ಜಿಇಎಂ ವೇದಿಕೆಯು ತಂತ್ರಜ್ಞಾನವನ್ನು ಪ್ರಧಾನವಾಗಿಸಿ ಕಳೆದ 10 ವರ್ಷಗಳಲ್ಲಿ ಹೆಚ್ಚು ಸ್ಪರ್ಧಾತ್ಮಕ ಮತ್ತು ಎಲ್ಲರನ್ನೂ ಒಳಗೊಂಡ ವ್ಯವಸ್ಥೆಯೊಂದಿಗೆ ವ್ಯವಹಾರ ಸುಲಲತೆಯನ್ನು ಬಲಪಡಿಸಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ಇದು ವಿಶೇಷವಾಗಿ ಎಂಎಸ್ಎಂಇಗಳು ಮತ್ತು ಮಹಿಳಾ ಉದ್ಯಮಿಗಳನ್ನು ಸಬಲಗೊಳಿಸುತ್ತಿದೆ ಎಂದು ಪ್ರಧಾನಮಂತ್ರಿ ಗಮನಿಸಿದ್ದಾರೆ.
ಪ್ರಧಾನಮಂತ್ರಿಯವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:
“ಪಾರದರ್ಶಕ ಖರೀದಿ, ವ್ಯಾಪಕ ಪಾಲ್ಗೊಳ್ಳುವಿಕೆ ಮತ್ತು ಉತ್ತಮ ಅವಕಾಶಗಳು… ಹೀಗೆ @GeM_India ಸಾರ್ವಜನಿಕ ಖರೀದಿ ಪ್ರಕ್ರಿಯೆಯನ್ನು ರೂಪಾಂತರಿಸುತ್ತಿದೆ.
ಜಿಇಎಂ ವೇದಿಕೆಯು ತಂತ್ರಜ್ಞಾನವನ್ನು ಮೂಲವಾಗಿರಿಸಿ ಕಳೆದ 10 ವರ್ಷಗಳಲ್ಲಿ ಹೆಚ್ಚು ಸ್ಪರ್ಧಾತ್ಮಕ ಮತ್ತು ಅಂತರ್ಗತ ವ್ಯವಸ್ಥೆಯನ್ನು ಸೃಷ್ಟಿಸುತ್ತಾ ವಿಶೇಷವಾಗಿ ಎಂ ಎಸ್ ಎಂ ಇ ಗಳು ಮತ್ತು ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸುವ ಮೂಲಕ ಸುಲಲಿತ ವ್ಯವಹಾರವನ್ನು ಬಲಗೊಳಿಸುತ್ತಿದೆ.
ಈವರೆಗಿನ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಯಲು ಕೇಂದ್ರ ಸಚಿವರಾದ ಶ್ರೀ @PiyushGoyal ಅವರ ಈ ಒಳನೋಟವುಳ್ಳ ಲೇಖನ ಓದಿ.”
*****
Transparent procurement, wider participation and better opportunities... This is how @GeM_India is transforming public procurement.
— PMO India (@PMOIndia) August 11, 2026
With technology at its core, the GeM platform has strengthened Ease of Doing Business over the last 10 years by creating a more competitive and… https://t.co/Z9rQLnGUXp