ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಡುಗಡೆ ಮಾಡಲಾದ ವಿಶ್ವಬ್ಯಾಂಕ್ ನ ವಾಣಿಜ್ಯ ನಡೆಸುವ ವರದಿ- 2018ರಲ್ಲಿ ಭಾರತ, 30 ಶ್ರೇಯಾಂಕಗಳಷ್ಟು ಐತಿಹಾಸಿಕ ಜಿಗಿತ ಕಂಡಿರುವುದನ್ನು ಶ್ಲಾಘಿಸಿದ್ದಾರೆ.2017ರ ವಾಣಿಜ್ಯ ನಡೆಸುವ ವರದಿಯಲ್ಲಿ 130ನೇ ಶ್ರೇಯಾಂಕದಲ್ಲಿದ್ದ ಭಾರತ ಇತ್ತೀಚಿನ ವರದಿಯಲ್ಲಿ 100ನೇ ಸ್ಥಾನಕ್ಕೆ ಬಂದಿದೆ.
ಶ್ರೇಯಾಂಕದಲ್ಲಿನ ಸುಧಾರಣೆಯನ್ನು ಪ್ರಧಾನಮಂತ್ರಿಯವರು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು, ಟೀಮ್ ಇಂಡಿಯಾ ಮಾಡಿದ ಸರ್ವಾಂಗೀಣ ಮತ್ತು ಬಹು ವಲಯ ಸುಧಾರಣೆಯ ಫಲಶ್ರುತಿಯೇ ಈ ಜಿಗಿತ ಎಂದು ಹೇಳಿದ್ದಾರೆ.
“ಸುಲಭವಾಗಿ ವಾಣಿಜ್ಯ ನಡೆಸುವ’’ ಶ್ರೇಯಾಂಕದಲ್ಲಿನ ಈ ಐತಿಹಾಸಿಕ ಜಿಗಿತ ಟೀಮ್ ಇಂಡಿಯಾ ಕೈಗೊಂಡ ಬಹು ವಲಯ ಮತ್ತು ಸರ್ವಾಂಗೀಣ ಸುಧಾರಣೆಯ ಫಲಶ್ರುತಿ.
ಸುಲಭವಾಗಿ ವಾಣಿಜ್ಯ ನಡೆಸುವ ಪರಿಸರವು ನಮ್ಮ ಉದ್ದಿಮೆದಾರರಿಗೆ, ಅದರಲ್ಲೂ ಎಂ.ಎಸ್.ಎಂ.ಇ ವಲಯಕ್ಕೆ ಐತಿಹಾಸಿಕ ಅವಕಾಶ ಒದಗಿಸುತ್ತದೆ ಮತ್ತು ಹೆಚ್ಚಿನ ಪ್ರಗತಿ ತರುತ್ತದೆ.
ಕಳೆದ ಮೂರು ವರ್ಷಗಳಲ್ಲಿ ವಾಣಿಜ್ಯವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ರಾಜ್ಯಗಳ ನಡುವೆ ಧನಾತ್ಮಕವಾದ ಸ್ಪರ್ಧೆಯ ಸ್ಫೂರ್ತಿಯನ್ನು ನಾವು ಕಂಡಿದ್ದೇವೆ. ಇದು ಉಪಯುಕ್ತವಾಗಿದೆ.
ಭಾರತದಲ್ಲಿ ವ್ಯಾಪಾರ ಮಾಡುವುದು ಸುಲಭವಾಗಿರಲಿಲ್ಲ. ನಮ್ಮ ರಾಷ್ಟ್ರ ನೀಡುವ ಆರ್ಥಿಕ ಅವಕಾಶಗಳನ್ನು ಅನ್ವೇಷಿಸಲು ಭಾರತವು ಜಗತ್ತಿಗೆ ಆಹ್ವಾನ ನೀಡುತ್ತಿದೆ!
‘ಸುಧಾರಣೆ, ಸಾಧನೆ ಮತ್ತು ಪರಿವರ್ತನೆ’ಯ ಮಂತ್ರದ ಮಾರ್ಗದರ್ಶನದಲ್ಲಿ ನಾವು ನಮ್ಮ ಶ್ರೇಯಾಂಕವನ್ನು ಇನ್ನಷ್ಟು ಸುಧಾರಣೆ ಮಾಡಲು ಮತ್ತು ಆರ್ಥಿಕ ಪ್ರಗತಿಯನ್ನು ಎತ್ತರಕ್ಕೆ ಏರಿಸುತ್ತಿದ್ದೇವೆ.”, ಎಂದು ಪ್ರಧಾನಿ ಹೇಳಿದ್ದಾರೆ.
******
Historic jump in ‘Ease of Doing Business’ rankings is the outcome of the all-round & multi-sectoral reform push of Team India. pic.twitter.com/DhrEcuurgi
— Narendra Modi (@narendramodi) October 31, 2017
Easier business environment is leading to historic opportunities for our entrepreneurs, particularly MSME sector & bringing more prosperity.
— Narendra Modi (@narendramodi) October 31, 2017
Over the last 3 years we have seen a spirit of positive competition among states towards making business easier. This has been beneficial.
— Narendra Modi (@narendramodi) October 31, 2017
It has never been easier to do business in India. India welcomes the world to explore economic opportunities our nation has to offer!
— Narendra Modi (@narendramodi) October 31, 2017
Guided by the Mantra of ‘Reform, Perform & Transform’ we are determined to further improve our rankings & scale greater economic growth.
— Narendra Modi (@narendramodi) October 31, 2017