ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 2ರಂದು ಬೆಳಗ್ಗೆ 10 ಗಂಟೆಗೆ ನವದೆಹಲಿಯ ಯಶೋಭೂಮಿಯಲ್ಲಿ ಭಾರತದ ಅರೆವಾಹಕ ಪರಿಸರ ವ್ಯವಸ್ಥೆಯನ್ನು ವೇಗವರ್ಧಿಸುವ ಗುರಿಯನ್ನು ಹೊಂದಿರುವ ‘ಸೆಮಿಕಾನ್ ಇಂಡಿಯಾ – 2025’ ಅನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಮಂತ್ರಿ ಅವರು ಸೆಪ್ಟೆಂಬರ್ 3ರಂದು ಬೆಳಗ್ಗೆ 9:30ರಿಂದ ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಇದರಲ್ಲಿ ಅವರು ಸಿಇಒಗಳ ದುಂಡುಮೇಜಿನ ಸಭೆಯಲ್ಲೂ ಭಾಗವಹಿಸಲಿದ್ದಾರೆ.
ಸೆಪ್ಟೆಂಬರ್ 2ರಿಂದ 4 ರವರೆಗೆ ಮೂರು ದಿನಗಳ ಸಮ್ಮೇಳನವು ಭಾರತದಲ್ಲಿ ದೃಢವಾದ, ಸ್ಥಿತಿಸ್ಥಾಪಕ ಮತ್ತು ಸುಸ್ಥಿರ ಅರೆವಾಹಕ ಪರಿಸರ ವ್ಯವಸ್ಥೆಯನ್ನು ಮುನ್ನಡೆಸುವತ್ತ ಗಮನ ಹರಿಸುತ್ತದೆ. ಸೆಮಿಕಾನ್ ಇಂಡಿಯಾ ಕಾರ್ಯಕ್ರಮದ ಪ್ರಗತಿ, ಅರೆವಾಹಕ ಫ್ಯಾಬ್ ಮತ್ತು ಸುಧಾರಿತ ಪ್ಯಾಕೇಜಿಂಗ್ ಯೋಜನೆಗಳು, ಮೂಲಸೌಕರ್ಯ ಸಿದ್ಧತೆ, ಸ್ಮಾರ್ಟ್ ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಕೃತಕ ಬುದ್ಧಿಮತ್ತೆಯ ಆವಿಷ್ಕಾರಗಳು, ಹೂಡಿಕೆ ಅವಕಾಶಗಳು, ರಾಜ್ಯ ಮಟ್ಟದ ನೀತಿ ಅನುಷ್ಠಾನ ಮುಂತಾದ ವಿಷಯಗಳ ಬಗ್ಗೆ ಗೋಷ್ಠಿಗಳು ನಡೆಯಲಿವೆ. ಹೆಚ್ಚುವರಿಯಾಗಿ, ಈ ಕಾರ್ಯಕ್ರಮವು ಡಿಸೈನ್ ಲಿಂಕ್ಡ್ ಇನ್ಸೆಂಟಿವ್ (ಡಿಎಲ್ಐ) ಯೋಜನೆಯಡಿ ಉಪಕ್ರಮಗಳು, ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯ ಬೆಳವಣಿಗೆ, ಅಂತಾರಾಷ್ಟ್ರೀಯ ಸಹಕಾರ ಮತ್ತು ಭಾರತದ ಅರೆವಾಹಕ ವಲಯದ ಭವಿಷ್ಯದ ಮಾರ್ಗಸೂಚಿಯನ್ನು ಬಿಂಬಿಸುತ್ತದೆ.
48 ದೇಶಗಳಿಂದ 2,500ಕ್ಕೂ ಹೆಚ್ಚು ಪ್ರತಿನಿಧಿಗಳು, 50ಕ್ಕೂ ಹೆಚ್ಚು ಜಾಗತಿಕ ನಾಯಕರು ಸೇರಿದಂತೆ 150ಕ್ಕೂ ಹೆಚ್ಚು ಭಾಷಣಕಾರರು ಮತ್ತು 350ಕ್ಕೂ ಹೆಚ್ಚು ಪ್ರದರ್ಶಕರು ಸೇರಿದಂತೆ 20,750ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ 6 ದೇಶಗಳ ದುಂಡು ಮೇಜಿನ ಚರ್ಚೆಗಳು, ದೇಶದ ಪೆವಿಲಿಯನ್ ಗಳು ಮತ್ತು ಕಾರ್ಯಪಡೆ ಅಭಿವೃದ್ಧಿ ಮತ್ತು ನವೋದ್ಯಮಗಳಿಗಾಗಿ ಮೀಸಲಾದ ಪೆವಿಲಿಯನ್ ಗಳು ಸೇರಿವೆ.
ಪ್ರಪಂಚದಾದ್ಯಂತ ಆಯೋಜಿಸಲಾದ ಸೆಮಿಕಾನ್ ಸಮ್ಮೇಳನಗಳು, ಅರೆವಾಹಕ ಕ್ಷೇತ್ರದಲ್ಲಿನ ತಾಂತ್ರಿಕ ಪ್ರಗತಿಯ ವ್ಯಾಪ್ತಿಯನ್ನು ಮತ್ತು ತಮ್ಮ ಅರೆವಾಹಕ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ವಿವಿಧ ದೇಶಗಳ ನೀತಿಗಳನ್ನು ಗರಿಷ್ಠಗೊಳಿಸುವ ಗುರಿಯನ್ನು ಹೊಂದಿವೆ. ಭಾರತವನ್ನು ಅರೆವಾಹಕ ವಿನ್ಯಾಸ, ಉತ್ಪಾದನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಕೇಂದ್ರವಾಗಿ ಪ್ರದರ್ಶಿಸುವ ಪ್ರಧಾನ ಮಂತ್ರಿಯವರ ದೃಷ್ಟಿಕೋನವನ್ನು ಮುಂದುವರಿಸಲು, 2022ರಲ್ಲಿ ಬೆಂಗಳೂರಿನಲ್ಲಿ, 2023ರಲ್ಲಿ ಗಾಂಧಿನಗರದಲ್ಲಿ ಮತ್ತು 2024ರಲ್ಲಿ ಗ್ರೇಟರ್ ನೋಯ್ಡಾದಲ್ಲಿ ಸಮ್ಮೇಳನಗಳನ್ನು ಆಯೋಜಿಸಲಾಗಿದೆ.
*****
At 10 AM tomorrow, 2nd September, will inaugurate Semicon India - 2025, an important platform that brings together leading stakeholders from the world of semiconductors. This is a sector in which India’s recent strides have been remarkable. The Conference will focus on key themes…
— Narendra Modi (@narendramodi) September 1, 2025