ಪಿಎಂಇಂಡಿಯಾ
ಘನತೆವೆತ್ತ ಗೌರವಾನ್ವಿತ ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಮಿಸೆಸ್ ಅಜಾರೆಲ್ ಅರ್ನೆಸ್ಟಾ,
ಸರ್ಕಾರಿ ಕಲಾಪ ನಾಯಕರಾದ ಗೌರವಾನ್ವಿತ ಮಿಸೆಸ್ ಸಿಲ್ವಾನ್ ಲೆಮಿಯೆಲ್,
ವಿರೋಧ ಪಕ್ಷದ ನಾಯಕ ಗೌರವಾನ್ವಿತ ಮಿಸ್ಟರ್ ಬ್ಯಾನೋ ಜಾರ್ಜ್
ರಾಷ್ಟ್ರೀಯ ಅಸೆಂಬ್ಲಿಯ ಗೌರವಾನ್ವಿತ ಸದಸ್ಯರೇ,
ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೇ,
ನಮಸ್ಕಾರ!
ಬಾನ್ ಅಪ್ರೀಮಿಡಿ!
ಈ ರಾಷ್ಟ್ರೀಯ ಅಸೆಂಬ್ಲಿಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಮೊದಲ ಭಾರತೀಯ ಪ್ರಧಾನಮಂತ್ರಿಯಾಗಿ ನಿಮ್ಮ ಮುಂದೆ ನಿಂತಿರುವುದಕ್ಕೆ ವಿಶೇಷ ಗೌರವ ಮೂಡುತ್ತಿದೆ. ಮೇಡಂ ಸ್ಪೀಕರ್, ನಿಮ್ಮ ಆತ್ಮೀಯ ಮಾತುಗಳಿಗೆ ಧನ್ಯವಾದಗಳು.
ಇಂದು ಮೊದಲು ನನಗೆ “ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್” ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಕ್ಕಾಗಿ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಮತ್ತು ಸೆಷಲ್ಸ್ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ. ಪರಿಸರ ಸಂರಕ್ಷಣೆಗಾಗಿ ನಿರಂತರ ಪ್ರಯತ್ನಗಳನ್ನು ಮಾಡುತ್ತಿರುವ ಎಲ್ಲರಿಗೂ ಇದು ಪ್ರೋತ್ಸಾಹ ನೀಡುತ್ತದೆ. ಭಾರತದ 1.4 ಬಿಲಿಯನ್ ಜನರ ಆತ್ಮೀಯ ಶುಭಾಶಯಗಳು ಮತ್ತು ಶುಭ ಹಾರೈಕೆಗಳನ್ನು ನಾನು ನನ್ನೊಂದಿಗೆ ತಂದಿದ್ದೇನೆ.
ನಾನು ಪ್ರಧಾನ ಮಂತ್ರಿಯಾಗಿ 2015ರಲ್ಲಿ ಭೇಟಿ ನೀಡಿದ ಹಿಂದೂ ಮಹಾಸಾಗರ ಪ್ರದೇಶದ ಮೊದಲ ದೇಶ ಸೆಷಲ್ಸ್ ಅಗಿತ್ತು. ಪ್ರಧಾನಿಯಾಗಿ ಆಫ್ರಿಕಾಕ್ಕೆ ಇದು ನನ್ನ ಮೊದಲ ಭೇಟಿಯೂ ಆಗಿತ್ತು. ಹಿಂದೂ ಮಹಾಸಾಗರದ ಬಗ್ಗೆ ಭಾರತದ ದೂರದೃಷ್ಟಿಯಲ್ಲಿ ಸೆಷಲ್ಸ್ ವಿಶೇಷ ಸ್ಥಾನವನ್ನು ಹೊಂದಿದೆ ಎಂದು ನಾನು ನಂಬಿದ್ದರಿಂದ ನಾನು ಇಲ್ಲಿಗೆ ಬಂದಿದ್ದೇನೆ. ಒಂದು ದಶಕದ ನಂತರ ನಾನು ಇಂದು ಇಲ್ಲಿಗೆ ಮತ್ತೆ ವಾಪಸ್ದಾಗಿದ್ದು, ಆ ದೃಢಸಂಕಲ್ಪವು ಮೊದಲಿಗಿಂತಲೂ ಹೆಚ್ಚು ಸದೃಢವಾಗಿದೆ.
ಮತ್ತು ನಿಮ್ಮ ಸ್ವಾತಂತ್ರ್ಯದ ಐವತ್ತು ವರ್ಷಗಳನ್ನು ಆಚರಿಸುತ್ತಿರುವಾಗ ನಿಮ್ಮೊಂದಿಗೆ ಸೇರಲು ನನಗೆ ಸಂತೋಷವಾಗುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ನಿಮಗೆ ಮತ್ತು ಸೆಷಲ್ಸ್ ಜನರಿಗೆ ಅಭಿನಂದನೆಗಳು.
ಗೌರವಾನ್ವಿತ ಸದಸ್ಯರೇ,
ಈ ರಾಷ್ಟ್ರೀಯ ಅಸೆಂಬ್ಲಿಯನ್ನು ಉದ್ದೇಶಿಸಿ ಮಾತನಾಡುವುದು ಅಪರೂಪದ ಹೆಮ್ಮೆಯ ವಿಚಾರ. ಈ ವಿಶೇಷ ಗೌರವಕ್ಕೆ ಧನ್ಯವಾದಗಳು. ಈ ಎಂಟನೇ ರಾಷ್ಟ್ರೀಯ ಅಸೆಂಬ್ಲಿಗೆ ಹೊಸದಾಗಿ ಆಯ್ಕೆಯಾದ ಸದಸ್ಯರನ್ನು ಅಭಿನಂದಿಸಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ. ಈ ಗೌರವಾನ್ವಿತ ಸದನದ ಮೊದಲ ಮಹಿಳಾ ಸ್ಪೀಕರ್ ಆಗಿ ಆಯ್ಕೆಯಾದ ಮೇಡಂ ಸ್ಪೀಕರ್ ಅವರೇ ನಿಮಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಗೌರವಾನ್ವಿತ ಸದಸ್ಯರೇ,
ನಮ್ಮ ಸ್ನೇಹವು ಐವತ್ತು ವರ್ಷಗಳ ಹಿಂದೆ ನಮ್ಮ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯೊಂದಿಗೆ ಆರಂಭವಾಗಲಿಲ್ಲ ಎಂಬುದನ್ನು ಇಂದು ನೆನಪಿಸಿಕೊಳ್ಳುವುದು ಮುಖ್ಯ. ಏಕೆಂದರೆ ಉಭಯ ದೇಶಗಳ ನಡುವಿನ ಸಂಬಂಧ ಅದಕ್ಕೂ ಬಹಳ ಹಿಂದೆಯೇ ಆರಂಭವಾಯಿತು. 1770 ರ ಆಗಸ್ಟ್ ನಲ್ಲಿ ಸೇಂಟ್ ಆನ್ ದ್ವೀಪದಲ್ಲಿ ಥೆಲೆಮಾಕ್ ಹಡಗಿನಲ್ಲಿ ಬಂದವರಲ್ಲಿ ಐದು ಭಾರತೀಯರಿದ್ದರು. ಆ ಪ್ರಯಾಣವು ಅನುಸರಿಸುವ ಇನ್ನೂ ಅನೇಕರಿಗೆ ದಾರಿ ತೋರಿಸಿತು. ಕಾಲಾನಂತರದಲ್ಲಿ ಅವರ ಕಥೆಗಳು ಆಧುನಿಕ ಸೆಷಲ್ಸ್ ಕಥೆಯ ಭಾಗವಾಗಿದೆ.
ನಮ್ಮ ನಡುವಿನ ಸಂಬಂಧಗಳು ಸರ್ಕಾರಗಳಿಂದ ರಚಿಸಲ್ಪಟ್ಟಿಲ್ಲ ಎಂಬುದನ್ನು ನಮಗೆ ನೆನಪಿಸುತ್ತದೆ. ಅವುಗಳು ಜನರಿಂದ ಏರ್ಪಟ್ಟಿದ್ದು, ಕುಟುಂಬಗಳಿಂದ ಪೋಷಿಸಲ್ಟಿವೆ ಮತ್ತು ತಲೆಮಾರುಗಳಿಂದ ಉಳಿಸಿಕೊಳ್ಳಲಾಗಿದೆ. ಹಿಂದೂ ಮಹಾಸಾಗರವು ಇದನ್ನು ಸಾಧ್ಯವಾಗಿಸಿತು. ಹಿಂದೂ ಮಹಾಸಾಗರವು ಭಾರತ ಮತ್ತು ಸೆಷೆಲ್ಸ್ ಅನ್ನು ಬೇರ್ಪಡಿಸುವುದಿಲ್ಲ. ಅದು ನಮ್ಮನ್ನು ಸಂಪರ್ಕಿಸುತ್ತದೆ. ಅದಕ್ಕಾಗಿಯೇ ನಾವು ಅಪರಿಚಿತರಂತೆ ಭೇಟಿಯಾಗುವುದಿಲ್ಲ. ನಾವು ಹಳೆಯ ಸ್ನೇಹಿತರಂತೆ ಭೇಟಿಯಾಗುತ್ತೇವೆ.
ಗೌರವಾನ್ವಿತ ಸದಸ್ಯರೇ,
ಸೆಷಲ್ಸ್‌ನ ದೊಡ್ಡ ಶಕ್ತಿ ಅದರ ಜನರು. ತಲೆಮಾರುಗಳಿಂದ ಪ್ರಪಂಚದ ಎಲ್ಲಾ ಭಾಗಗಳಿಂದ ಜನರು ಇಲ್ಲಿಗೆ ಬಂದರು. ಅವರು ತಮ್ಮೊಂದಿಗೆ ವಿವಿಧ ಭಾಷೆಗಳು, ಪದ್ಧತಿಗಳು, ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ತಂದರು. ಮತ್ತು ಒಟ್ಟಾಗಿ ಅವರು ಹೆಮ್ಮೆಯಿಂದ ಸೆಷೆಲ್ಲೊಯಿಸ್ ಎಂಬ ಹಂಚಿಕೆಯ ಗುರುತನ್ನು ಹಂಚಿಕೊಂಡರು.
ಈ ರಾಷ್ಟ್ರೀಯ ಅಸೆಂಬ್ಲಿಯ ಧ್ಯೇಯವಾಕ್ಯವು ಹೇಳುವಂತೆ – ವೈವಿಧ್ಯತೆಯಲ್ಲಿ ಏಕತೆ. ಇದನ್ನು ಕ್ರಿಯೋಲ್ ಸಂಗೀತದ ಮಧುರಗಳಲ್ಲಿ ಕೇಳಬಹುದು. ಇದನ್ನು ಮೌತ್ಯ ನೃತ್ಯದ ಲಯದಲ್ಲಿ ಕಾಣಬಹುದು. ಇದನ್ನು ಫೆಸ್ಟಿವಲ್ ಕ್ರಿಯೋಲ್ ಸಮಯದಲ್ಲಿ ಅನುಭವಿಸಬಹುದು.
ರಾಷ್ಟ್ರವು ತನ್ನ ಪರಂಪರೆಯ ಶ್ರೀಮಂತಿಕೆಯನ್ನು ಆಚರಿಸಿದಾಗ, ನಮ್ಮ ಸಂಸ್ಕೃತಿಗಳ ನಡುವಿನ ಸಂಪರ್ಕಗಳು ದೈನಂದಿನ ಜೀವನದಲ್ಲಿಯೂ ಗೋಚರಿಸುತ್ತವೆ. ಅವುಗಳನ್ನು ಕರಿ ಕೊಕೊ, ಸಮೋಸಾ ಮತ್ತು ಚಟ್ನಿಯ ಸುವಾಸನೆಗಳಲ್ಲಿ ಅನುಭವಿಸಬಹುದು. ದೀಪಾವಳಿ, ಥಾಯ್ ಪೊಂಗಲ್ ಮತ್ತು ನವರಾತ್ರಿಯ ಸಮಯದಲ್ಲಿ ಗರ್ಬಾ ನೃತ್ಯದ ಆಚರಣೆಗಳಲ್ಲಿ ಅವುಗಳನ್ನು ಕಾಣಬಹುದು. ಇದು ನಮ್ಮ ಸ್ನೇಹದ ಭವಿಷ್ಯದಲ್ಲಿ ನಮಗೆ ಹೆಚ್ಚಿನ ವಿಶ್ವಾಸವನ್ನು ನೀಡುವ ಕ್ರಿಯೋಲ್ ಮನೋಭಾವವಾಗಿದೆ.
ಗೌರವಾನ್ವಿತ ಸದಸ್ಯರೇ,
ಸಾಗರದ ನೆರೆಹೊರೆಯವರಾಗಿ, ಒಬ್ಬರ ಭದ್ರತೆಯು ಇನ್ನೊಬ್ಬರ ಭದ್ರತೆಗೆ ಪೂರಕವಾಗಿದೆ ಎಂದು ನಾವು ಗುರುತಿಸುತ್ತೇವೆ. ಒಬ್ಬರ ಸಮೃದ್ಧಿಯು ಇನ್ನೊಬ್ಬರ ಸಮೃದ್ಧಿಗೆ ಕೊಡುಗೆ ನೀಡುತ್ತದೆ. ಮತ್ತು ಪ್ರದೇಶದ ಸ್ಥಿರತೆಯು ನಮಗೆಲ್ಲರಿಗೂ ಪ್ರಯೋಜನವನ್ನು ನೀಡುತ್ತದೆ.
ಈ ವರ್ಷ ನಮ್ಮ ಪಾಲುದಾರಿಕೆಯ ಆಳದ ಪ್ರಬಲ ಜ್ಞಾಪನೆಯನ್ನು ನೀಡುತ್ತದೆ. ಐವತ್ತು ವರ್ಷಗಳ ಹಿಂದೆ ನಿಮ್ಮ ಸ್ವಾತಂತ್ರ್ಯದ ಉದಯದಲ್ಲಿ ಭಾರತೀಯ ನೌಕಾ ಹಡಗು ಐಎನ್ ಎಸ್ ನೀಲಗಿರಿ, ಸ್ನೇಹ ಮತ್ತು ಒಗ್ಗಟ್ಟಿನ ಸಂಕೇತವಾಗಿ ಪೋರ್ಟ್ ವಿಕ್ಟೋರಿಯಾದಲ್ಲಿತ್ತು. ಮತ್ತು ಇಂದು ಐಎನ್ ಎಸ್ ತರ್ಕಶ್ ಮತ್ತು ಐಎನ್ ಎಸಚ್ ಇಕ್ಷಾಕ್ ನಿಮ್ಮೊಂದಿಗೆ ಸುವರ್ಣ ಮಹೋತ್ಸವವನ್ನು ಆಚರಿಸಲು ಪೋರ್ಟ್ ವಿಕ್ಟೋರಿಯಾಕ್ಕೆ ತಂದು ನಿಲುಗಡೆ ಮಾಡಲಾಗಿದೆ.
ಕಳೆದ ಐವತ್ತು ವರ್ಷಗಳಲ್ಲಿ ಹಲವು ವಿಷಯಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ ಅದು ಪರಸ್ಪರ ನಮ್ಮ ಬದ್ಧತೆಯನ್ನು ಬದಲಾಯಿಸಿಲ್ಲ. ದಶಕಗಳಿಂದ ನಮ್ಮ ರಕ್ಷಣಾ ಪಡೆಗಳು, ಕರಾವಳಿ ಕಾವಲುಗಾರರು ಮತ್ತು ಸಾಗರ ಸಂಸ್ಥೆಗಳು ತರಬೇತಿ ನೀಡಿವೆ ಮತ್ತು ನಿಕಟವಾಗಿ ಕೆಲಸ ಮಾಡಿವೆ. ಸೆಷೆಲ್ಸ್ ರಕ್ಷಣಾ ಪಡೆಗಳು ಮತ್ತುಸೆಷೆಲ್ಸ್ ಕೋಸ್ಟ್ ಗಾರ್ಡ್‌ನ ವೃತ್ತಿಪರತೆ ಮತ್ತು ಬದ್ಧತೆಯನ್ನು ಭಾರತವು ಆಳವಾಗಿ ಗೌರವಿಸುತ್ತದೆ. ಅವರು ನಿಮ್ಮ ಸ್ವಂತ ವಿಶಾಲವಾದ ಕಡಲ ಕ್ಷೇತ್ರವನ್ನು ಹಾಗೂ ವಿಶಾಲವಾದ ಹಿಂದೂ ಮಹಾಸಾಗರ ಪ್ರದೇಶವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸಾಗರ ಭದ್ರತೆ, ಸಾಮರ್ಥ್ಯ ವೃದ್ಧಿ, ಹೈಡ್ರೋಗ್ರಫಿ ಮತ್ತು ಕಡಲ ಕ್ಷೇತ್ರದ ಅರಿವಿನಲ್ಲಿ ನಮ್ಮ ಸಹಕಾರವು ಸುರಕ್ಷಿತ ಮತ್ತು ಹೆಚ್ಚು ಸುರಕ್ಷಿತ ಪ್ರದೇಶಕ್ಕೆ ನಮ್ಮ ಹಂಚಿಕೆಯ ಬದ್ಧತೆ ಪ್ರತಿಬಿಂಬಿಸುತ್ತದೆ.
ಇಂದು ಬೆಳಿಗ್ಗೆ ನಾನು ಅಧ್ಯಕ್ಷ ಹರ್ಮಿನಿ – ಟನ್ ಪ್ಯಾಟ್ ಅವರನ್ನು ಭೇಟಿಯಾಗಿ ನಮ್ಮ ಪಾಲುದಾರಿಕೆಯಲ್ಲಿ ಸಾಧಿಸಿದ ಗಮನಾರ್ಹ ಪ್ರಗತಿಯನ್ನು ಪರಿಶೀಲಿಸಿದೆ. ಭವಿಷ್ಯಕ್ಕಾಗಿ ನಮ್ಮ ಹಂಚಿಕೆಯ ದೂರದೃಷ್ಟಿಯ ಬಗ್ಗೆಯೂ ನಾವು ಚರ್ಚಿಸಿದ್ದೇವೆ. ನಮ್ಮ ದೂರದೃಷ್ಟಿಯು ಮಹಾಸಾಗರ – ಪ್ರದೇಶಗಳಾದ್ಯಂತ ಭದ್ರತೆ ಮತ್ತು ಬೆಳವಣಿಗೆಗೆ ಪರಸ್ಪರ ಮತ್ತು ಸಮಗ್ರ ಪ್ರಗತಿಯ ಕಲ್ಪನೆಯಲ್ಲಿ ಬೆಸೆಯಲ್ಪಟ್ಟಿದೆ.
ಈ ದೂರದೃಷ್ಟಿಯು ನಮ್ಮ ಭವಿಷ್ಯಗಳು ಪರಸ್ಪರ ಸಂಪರ್ಕ ಹೊಂದಿವೆ ಮತ್ತು ಪರಸ್ಪರ ಅವಲಂಬಿತವಾಗಿವೆ ಎಂದು ಗುರುತಿಸುತ್ತದೆ. ಮತ್ತು, ಸುರಕ್ಷಿತ ಮತ್ತು ಹೆಚ್ಚು ಸುರಕ್ಷಿತ ಹಿಂದೂ ಮಹಾಸಾಗರ ಪ್ರದೇಶಕ್ಕಾಗಿ ನಾವು ಒಗ್ಗೂಡಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತೇವೆ.
ಗೌರವಾನ್ವಿತ ಸದಸ್ಯರೇ,
ಜನರು ನಕ್ಷೆಯನ್ನು ನೋಡಿದಾಗ, ಅವರು ಸೆಷೆಲ್ಸ್ ಅನ್ನು ಹಿಂದೂ ಮಹಾಸಾಗರದ ದ್ವೀಪಗಳ ಗುಂಪಾಗಿ ನೋಡಬಹುದು. ಆದರೆ ನಾವು ಅದಕ್ಕಿಂತ ಹೆಚ್ಚಿನದನ್ನು ನೋಡುತ್ತೇವೆ. ಅದರ ತೀರಗಳನ್ನು ಮೀರಿದ ದಿಗಂತಗಳನ್ನು ಹೊಂದಿರುವ ರಾಷ್ಟ್ರವನ್ನು ನಾವು ನೋಡುತ್ತೇವೆ. ನಿಮ್ಮ ಕಡಲ ವಲಯವು ಸುಮಾರು 1.4 ಮಿಲಿಯನ್ ಚದರ ಕಿಲೋಮೀಟರ್‌ಗಳಷ್ಟು ವಿಸ್ತರಿಸುತ್ತದೆ.
ಸೆಷೆಲ್ಸ್ ಸಣ್ಣ ದ್ವೀಪ ರಾಜ್ಯವಲ್ಲ – ಆದರೆ ದೊಡ್ಡ ಸಾಗರ ದೇಶವನ್ನಾಗಿ ಮಾಡುತ್ತದೆ. ನೀಲಿ ಆರ್ಥಿಕತೆಯು ಜಾಗತಿಕ ಚರ್ಚೆಗಳ ಭಾಗವಾಗುವುದಕ್ಕೆ ಬಹಳ ಹಿಂದೆಯೇ ಸೆಷೆಲ್ಸ್ ಈಗಾಗಲೇ ಮುನ್ನಡೆ ಸಾಧಿಸಿತ್ತು. ಸಾಗರ ಪೂರಕ ವ್ಯವಸ್ಥೆಗಳನ್ನು ರಕ್ಷಿಸುವಲ್ಲಿ ಅಥವಾ ಬ್ಲೂ ಬಾಂಡ್‌ಗಳಂತಹ ನಾವೀನ್ಯತೆಗಳನ್ನು ಮುನ್ನಡೆಸುವಲ್ಲಿ, ನಿಮ್ಮ ದೇಶವು ಪ್ರಮುಖ ಜಾಗತಿಕ ಸಮಾಲೋಚನೆಗಳನ್ನು ರೂಪಿಸಲು ಸಹಾಯ ಮಾಡಿದೆ. ಒಟ್ಟಾರೆ, ನಾವು ಮೀನುಗಾರಿಕೆ, ಸಮುದ್ರ ವಿಜ್ಞಾನ, ಕರಾವಳಿ ನಿರ್ವಹಣೆ, ನವೀಕರಿಸಬಹುದಾದ ಶಕ್ತಿ ಮತ್ತು ಸುಸ್ಥಿರ ಪ್ರವಾಸೋದ್ಯಮದಲ್ಲಿ ಪಾಲುದಾರಿಕೆಗಳನ್ನು ರೂಪಿಸಿಕೊಳ್ಳಬಹುದು.
ನಿನ್ನೆ, ಐಕಾನಿಕ್ ಕೊಕೊ ಡಿ ಮೆರ್ ಮರದ ಸಸಿಯನ್ನು ನೆಟ್ಟ ಗೌರವ ನನಗೆ ದೊರಕಿತು. ಸೆಷಲ್ಸ್‌ನಂತೆಯೇ – ಇದು ವಿಶಿಷ್ಟ, ಅಮೂಲ್ಯ ಮತ್ತು ಜಗತ್ತಿನಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಈ ನೈಸರ್ಗಿಕ ಅದ್ಭುತವನ್ನು ಉಳಿಸಲು ಮತ್ತು ಸಂರಕ್ಷಿಸಲು ನೀವು ಮಾಡುತ್ತಿರುವ ಪ್ರಯತ್ನಗಳು – ಮಾನವೀಯತೆಯು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಬೇಕೆಂಬ ದೊಡ್ಡ ತತ್ವಶಾಸ್ತ್ರವನ್ನು ಪ್ರತಿಬಿಂಬಿಸುತ್ತವೆ.
ಈ ಭಾವನೆ ಭಾರತದಲ್ಲಿಯೂ ಆಳವಾಗಿ ಪ್ರತಿಧ್ವನಿಸುತ್ತದೆ. ನಾವು ಇಂದು ಆನಂದಿಸುವ ಸಾಗರಗಳಿಗಿಂತ ಆರೋಗ್ಯಕರ, ಸುರಕ್ಷಿತ ಮತ್ತು ಹೆಚ್ಚು ಹೇರಳವಾಗಿರುವ ಸಾಗರಗಳನ್ನು ಭವಿಷ್ಯದ ಪೀಳಿಗೆಗಳು ಆನುವಂಶಿಕವಾಗಿ ಪಡೆಯುವುದನ್ನು ಖಾತ್ರಿಪಡಿಸಿಕೊಳ್ಳಲು ನಾವೆಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸೋಣ.
ಗೌರವಾನ್ವಿತ ಸದಸ್ಯರೇ,
ಜಾಗತಿಕ ದಕ್ಷಿಣ ಮತ್ತು ವಿಶೇಷವಾಗಿ ದ್ವೀಪ ರಾಷ್ಟ್ರಗಳು ಹವಾಮಾನ ಬದಲಾವಣೆಯಿಂದ ಹೆಚ್ಚು ಪರಿಣಾಮಗಳನ್ನು ಅನುಭವಿಸುತ್ತಿವೆ. ಅದರ ಪರಿಣಾಮಗಳು ಈಗಾಗಲೇ ನಮ್ಮ ಕರಾವಳಿಗಳು, ಸಮುದ್ರ ಪರಿಸರ ವ್ಯವಸ್ಥೆಗಳು, ಹವಾಮಾನ ಮಾದರಿಗಳು ಮತ್ತು ನಮ್ಮ ಸಮುದಾಯಗಳಲ್ಲಿ ಗೋಚರಿಸುತ್ತಿವೆ. ಹವಾಮಾನ ಬದಲಾವಣೆಗೆ ಕನಿಷ್ಠ ಕೊಡುಗೆ ನೀಡಿದವರು ಅದರ ಪರಿಣಾಮಗಳ ದೊಡ್ಡ ಹೊರೆಯನ್ನು ಹೊರಬಾರದು ಎಂಬುದನ್ನು ನಾವಿಬ್ಬರೂ ದೃಢವಾಗಿ ನಂಬುತ್ತೇವೆ.
ಹವಾಮಾನ ಕ್ರಿಯೆಯನ್ನು ನ್ಯಾಯ, ಜವಾಬ್ದಾರಿ ಮತ್ತು ಸಮಾನತೆಯಿಂದ ನಿರ್ದೇಶಿಸಬೇಕು. ಇದು ಹವಾಮಾನ ನ್ಯಾಯದ ಸಾರ.
ಭಾರತವು ದೊಡ್ಡ ಮಾದರಿ ಉದಾಹರಣೆಯಾಗಿ ಮುನ್ನಡೆಸಲು ಪ್ರಯತ್ನಿಸಿದೆ. ಕಳೆದೊಂದು ದಶಕದಲ್ಲಿ ನಾವು ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಶಕ್ತಿಯ ವಿಸ್ತರಣೆಗಳಲ್ಲಿ ಒಂದನ್ನು ಕೈಗೊಂಡಿದ್ದೇವೆ. ಮಿಷನ್ ಲೈಫ್ – ಪರಿಸರಕ್ಕಾಗಿ ಜೀವನಶೈಲಿಯ ಮೂಲಕ ನಾವು ಸುಸ್ಥಿರ ಜೀವನಶೈಲಿಯನ್ನು ಪ್ರತಿಪಾದಿಸಿದ್ದೇವೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟ, ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟ, ಜಾಗತಿಕ ಜೈವಿಕ ಇಂಧನ ಒಕ್ಕೂಟ ಮತ್ತು ತಾಯಿ ಹೆಸರಿನಲ್ಲಿ ಒಂದು ಗಿಡ ನೆಡಿ (ಏಕ್ ಪೆಡ್ ಮಾ ಕೆ ನಾಮ್ ) ಮುಂತಾದ ನಮ್ಮ ಉಪಕ್ರಮಗಳ ಮೂಲಕ ನಾವು ಹಸಿರು ಪರಿವರ್ತನೆಯನ್ನು ಹೆಚ್ಚಿಸಲು ಪಾಲುದಾರ ರಾಷ್ಟ್ರಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ.
ಮತ್ತು ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಷ್ಟ್ರಗಳ ಕಾಳಜಿಗಳು ಅರ್ಹವಾದ ಗಮನವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಭಾರತವು ಸೆಷೆಲ್ಸ್‌ನೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಲು ಬದ್ಧವಾಗಿದೆ
ಗೌರವಾನ್ವಿತ ಸದಸ್ಯರೇ,
ಸೆಷಲ್ಸ್ ಮತ್ತು ಭಾರತ ಎರಡೂ ಅಭಿವೃದ್ಧಿ ಹೆಚ್ಚು ಎಲ್ಲರನ್ನೂ ಒಳಗೊಂಡ ಜಗತ್ತನ್ನು ಬಯಸುತ್ತವೆ. ಅಂತಾರಾಷ್ಟ್ರೀಯ ಸಂಸ್ಥೆಗಳು ಸಮಕಾಲೀನ ವಾಸ್ತವಗಳನ್ನು ಪ್ರತಿಬಿಂಬಿಸುವ ಜಗತ್ತನ್ನು ನಾವಿಬ್ಬರೂ ಬಯಸುತ್ತೇವೆ. ನಮ್ಮ ಹಂಚಿಕೆಯ ಭವಿಷ್ಯವನ್ನು ಸಾಮೂಹಿಕವಾಗಿ, ಎಲ್ಲರನ್ನೂ ಒಳಗೊಂಡಂತೆ ಮತ್ತು ನ್ಯಾಯಯುತವಾಗಿ ರೂಪಿಸಬೇಕು ಎಂದು ನಾವು ನಂಬುತ್ತೇವೆ.
ಈ ನಂಬಿಕೆಯು ನಮ್ಮ ಜಿ 20 ಅಧ್ಯಕ್ಷತೆಯಲ್ಲಿ ಭಾರತದ ಪ್ರಯತ್ನಗಳಿಗೆ ಮಾರ್ಗದರ್ಶನ ನೀಡಿತು. ಈ ಉತ್ಸಾಹದಲ್ಲಿಯೇ ನಾವು ಜಾಗತಿಕ ದಕ್ಷಿಣದ ಆದ್ಯತೆಗಳನ್ನು ಅಂತಾರಾಷ್ಟ್ರೀಯ ಚರ್ಚೆಗಳ ಪ್ರಮುಖ ಸ್ಥಾನದಲ್ಲಿರಿಸುವ ಕಾರ್ಯ ನಿರ್ವಹಿಸಿದ್ದೇವೆ. ಮತ್ತು ಈ ಉತ್ಸಾಹದಲ್ಲಿಯೇ ನಾವು ಆಫ್ರಿಕನ್ ಒಕ್ಕೂಟವನ್ನು ಜಿ 20 ರ ಕಾಯಂ ಸದಸ್ಯರಾಗಿ ಸ್ವಾಗತಿಸಿದ್ದೇವೆ. ಇದು ಜಾಗತಿಕ ದಕ್ಷಿಣವನ್ನು ಒಗ್ಗೂಡಿಸುವ ಮನೋಭಾವವಾಗಿದೆ. ಮತ್ತು ಭಾರತ ಮತ್ತು ಸೇಷಲ್ಸ್ ಒಟ್ಟಾಗಿ ಮುಂದುವರಿಯುತ್ತವೆ ಎಂಬ ದೂರದೃಷ್ಟಿ ಇದಾಗಿದೆ.
ಗೌರವಾನ್ವಿತ ಸದಸ್ಯರೇ,
ಕಳೆದ ಐವತ್ತು ವರ್ಷಗಳ ಸಾಧನೆಗಳನ್ನು ಆಚರಿಸುವಾಗ ನಾವು ಮುಂದಿನದನ್ನು ನೋಡಬೇಕು. ಸೆಷೆಲ್ಸ್‌ನ ಭವಿಷ್ಯವನ್ನು ಅದರ ಯುವಕರು ರೂಪಿಸುತ್ತಾರೆ. ಸೆಷೆಲ್ಸ್‌ನ ವಿದ್ಯಾರ್ಥಿಗಳು, ವೃತ್ತಿಪರರು, ಅಧಿಕಾರಿಗಳು ಮತ್ತು ಭದ್ರತಾ ಪಡೆಗಳು ದಶಕಗಳಿಂದ ಭಾರತದಲ್ಲಿ ತರಬೇತಿ ಮತ್ತು ಅಧ್ಯಯನ ಮಾಡಿದ್ದಾರೆ ಎಂದು ನಾವು ಹೆಮ್ಮೆಪಡುತ್ತೇವೆ.
ವಾಸ್ತವವಾಗಿ ಸೆಷೆಲ್ಸ್‌ನ ಪ್ರತಿ ಐವತ್ತು ಜನರಲ್ಲಿ ಒಬ್ಬರು ಭಾರತದಲ್ಲಿ ಸ್ವಲ್ಪ ತರಬೇತಿಯನ್ನು ಪಡೆದಿದ್ದಾರೆ ಎಂದು ಹೇಳಲಾಗುತ್ತದೆ. ಅವರು ಕೌಶಲ್ಯ, ಸ್ನೇಹ ಮತ್ತು ಅನುಭವಗಳೊಂದಿಗೆ ಮನೆಗೆ ಮರಳಿದ್ದಾರೆ, ಅದು ಇಂದು ನಮ್ಮ ಪಾಲುದಾರಿಕೆಯನ್ನು ಬಲಪಡಿಸುತ್ತಿದೆ.
ಯುವಜನರಿಗೆ ಇಂಟರ್ನ್‌ಶಿಪ್‌ಗಳನ್ನು ಒದಗಿಸುವ ನಿಮ್ಮ ಐಜಿಎನ್ ಐಟಿಇ (IGNITE) ಉಪಕ್ರಮದ ಬಗ್ಗೆ ತಿಳಿದು ನನಗೆ ಸಂತೋಷವಾಯಿತು. ಇದು ಅತ್ಯುತ್ತಮ ಚೌಕಟ್ಟಾಗಿದೆ ಮತ್ತು ಈ ವಲಯದಲ್ಲಿ ಸಹಕಾರಕ್ಕಾಗಿ ನಾವು ಹೊಸ ಮಾರ್ಗಗಳನ್ನು ಅನ್ವೇಷಿಸಬಹುದು
ಅಂತಹ ಸಹಕಾರಕ್ಕೆ ಪ್ರಮುಖ ಗಮನ ನೀಡುವ ಕ್ಷೇತ್ರವೆಂದರೆ ಡಿಜಿಟಲ್ ನಾವೀನ್ಯತೆ. ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ತಂತ್ರಜ್ಞಾನವು ಅವಕಾಶವನ್ನು ಹೇಗೆ ವಿಸ್ತರಿಸಬಹುದು, ಆಡಳಿತವನ್ನು ಸುಧಾರಿಸಬಹುದು, ಆರ್ಥಿಕ ಸೇರ್ಪಡೆಯನ್ನು ವೃದ್ಧಿಸಬಹುದು ಮತ್ತು ನೂರಾರು ಮಿಲಿಯನ್ ಜನರಿಗೆ ಸೇವೆಗಳನ್ನು ಹೇಗೆ ತಲುಪಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ.
ನೀವು ನಿಮ್ಮ ಸ್ವಂತ ಡಿಜಿಟಲ್ ಪರಿವರ್ತನೆಯನ್ನು ಅನುಸರಿಸುತ್ತಿರುವಾಗ ನಮ್ಮ ಅನುಭವಗಳು ಮತ್ತು ಪರಿಣತಿಯನ್ನು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ಸ್ವಾತಂತ್ರ್ಯದ ಮೊದಲ ಐವತ್ತು ವರ್ಷಗಳ ಕಾಲ ಮಾರ್ಗದರ್ಶನ ನೀಡಿದ ಅದೇ ದೃಢಸಂಕಲ್ಪದಿಂದ ಸೆಷೆಲ್ಸ್‌ನ ಯುವಜನರು ಈ ಅವಕಾಶಗಳನ್ನು ಸ್ವೀಕರಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ.
ಗೌರವಾನ್ವಿತ ಸದಸ್ಯರೇ,
ಇಂದು ಈ ಐತಿಹಾಸಿಕ ಸುವರ್ಣ ಮಹೋತ್ಸವ ವರ್ಷದಲ್ಲಿ ನಾನು ನಿಮ್ಮ ಮುಂದೆ ನಿಂತಿರುವಾಗ, ನಮ್ಮ ಎರಡೂ ದೇಶಗಳ ಜನರು ಎರಡೂವರೆ ಶತಮಾನಗಳಿಗೂ ಅಧಿಕ ಹಳೆಯ ಸ್ನೇಹವನ್ನು ಆಚರಿಸುತ್ತಿದ್ದಾರೆ. ಕೆಲವು ಪಾಲುದಾರಿಕೆಗಳು ಅಂತಹ ದೃಢವಾದ ಅಡಿಪಾಯಗಳ ಮೇಲೆ ನಿರ್ಮಿಸಲ್ಪಟ್ಟಿವೆ. ಮತ್ತು ಕೆಲವು ಪಾಲುದಾರಿಕೆಗಳು ಅಂತಹ ಆತ್ಮೀಯತೆ, ವಿಶ್ವಾಸ ಮತ್ತು ಸದ್ಭಾವನೆಯೊಂದಿಗೆ ಬೆಳೆದಿವೆ.
ನಾವು ಮುಂದಿನ ಭವಿಷ್ಯದತ್ತ ಸಾಗುತ್ತಿರುವಾಗ ಈ ಭದ್ರ ಬುನಾದಿಗಳ ಮೇಲೆ ನಿರ್ಮಿಸುವುದನ್ನು ಮುಂದುವರಿಸೋಣ. ಭಾರತವು ನಿಮ್ಮ ವಿಶ್ವಾಸಾರ್ಹ ಪಾಲುದಾರರಾಗಿ ಉಳಿಯುತ್ತದೆ. ನಾವು ನಿಮ್ಮ ಸಾಧನೆಗಳನ್ನು ಸಂಭ್ರಮಿಸುತ್ತೇವೆ. ನಾವು ನಿಮ್ಮ ಆಕಾಂಕ್ಷೆಗಳನ್ನು ಬೆಂಬಲಿಸುತ್ತೇವೆ. ಮತ್ತು ನಾವು ನಿಮ್ಮೊಂದಿಗೆ ಸ್ನೇಹಿತರಾಗಿ ನಿಲ್ಲುತ್ತೇವೆ.
ಕಳೆದ ಐವತ್ತು ವರ್ಷಗಳು ಗಮನಾರ್ಹವಾಗಿವೆ. ಆದರೆ ಸೆಷಲ್ಸ್ ಕಥೆಯ ಅತ್ಯುತ್ತಮ ಅಧ್ಯಾಯಗಳು ಇನ್ನೂ ಬರೆಯಬೇಕಾಗಿದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಮತ್ತು ನಮ್ಮ ಸ್ನೇಹದ ಅತ್ಯುತ್ತಮವಾದವುಗಳು ಇನ್ನೂ ಬೆಳವಣಿಗೆಯಾಗಬೇಕಿದೆ.
*****
Speaking at the National Assembly of Seychelles.@SeychellesNA
— Narendra Modi (@narendramodi) June 28, 2026
https://t.co/8GcumuqG94
Addressed the National Assembly of Seychelles today.
— Narendra Modi (@narendramodi) June 28, 2026
Expressed my gratitude for the warmth and friendship extended by the people of Seychelles. Spoke about the long-lasting partnership between our two nations that is built on shared values. It was also an honour interacting with… pic.twitter.com/nyNzt3Q4ym
Mon'n adres Lasanble Nasyonal Sesel ozordi.
— Narendra Modi (@narendramodi) June 28, 2026
Mon'n eksprim mon gratitid pour lakey salere ek lanmitye ofer par pep Seselwa.
Nou'n koz lo partenarya lonterm ant nou de nasyon ki ganny batir lo bann valer partaze.
Ti osi en loner pour enterakte avek bann manm Lasanble.… pic.twitter.com/dpcHYFuzSK
I thank President Herminie and the people of Seychelles for honouring me with the "Guardian of the Blue Horizon" earlier today.
— PMO India (@PMOIndia) June 28, 2026
It will encourage all those who are making sustained efforts for environment conservation: PM @narendramodi pic.twitter.com/asg6XyT9WU
The Indian Ocean does not separate India and Seychelles.
— PMO India (@PMOIndia) June 28, 2026
It connects us: PM @narendramodi pic.twitter.com/AQOLHocbOp
When people look at a map, they may see Seychelles as a group of islands in the Indian Ocean.
— PMO India (@PMOIndia) June 28, 2026
But we see something much greater.
We see a nation whose horizons stretch far beyond its shores: PM @narendramodi pic.twitter.com/RHCsBrShWV
Climate action must be guided by fairness, responsibility and equity.
— PMO India (@PMOIndia) June 28, 2026
This is the essence of climate justice: PM @narendramodi pic.twitter.com/XfcnhJZOvk
Seychelles and India both seek a world where development is more inclusive.
— PMO India (@PMOIndia) June 28, 2026
We both seek a world where international institutions reflect contemporary realities: PM @narendramodi pic.twitter.com/CgXvFNFL0t
India's Digital Public Infrastructure has demonstrated how technology can expand opportunity, improve governance, boost financial inclusion and deliver services for hundreds of millions of people: PM @narendramodi pic.twitter.com/O62QQbgLH7
— PMO India (@PMOIndia) June 28, 2026