ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ಕಂಪ್ಯೂಟರ್ ತುರ್ತುಸ್ಥಿತಿ ಸ್ಪಂದನಾ ತಂಡ (ಸಿಇಆರ್.ಟಿ. –ಇನ್) ಮತ್ತು ಯು.ಎಸ್.ನ ಹೋಂ ಲ್ಯಾಂಡ್ ಭದ್ರತೆ ಇಲಾಖೆಯ ನಡುವೆ ಸೈಬರ್ ಸುರಕ್ಷತೆಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು) ಬಗ್ಗೆ ವಿವರ ನೀಡಲಾಯಿತು. ಈ ತಿಳಿವಳಿಕೆ ಒಪ್ಪಂದಕ್ಕೆ 2017ರ ಜನವರಿ 11ರಂದು ನವದೆಹಲಿಯಲ್ಲಿ ಅಂಕಿತ ಹಾಕಲಾಗಿತ್ತು.
ಈ ತಿಳಿವಳಿಕೆ ಒಪ್ಪಂದವು ಪರಸ್ಪರರ ಲಾಭಕ್ಕಾಗಿ ಎರಡೂ ರಾಷ್ಟ್ರಗಳ ಸೂಕ್ತ ಕಾನೂನು, ನಿಯಮ ಮತ್ತು ನಿಯಂತ್ರಣಗಳ ಆಧಾರದ ಮೇಲೆ ಸಮಾನವಾಗಿ ಸೈಬರ್ ಸುರಕ್ಷತೆಗೆ ಸಂಬಂಧಿಸಿದಂತೆ ಆಪ್ತ ಸಹಕಾರ ಮತ್ತು ಮಾಹಿತಿಯ ವಿನಿಮಯ ಉತ್ತೇಜಿಸುವ ಇಂಗಿತ ಹೊಂದಿದೆ.
AKT/VBA/SH